Last Updated:
ಕೇವಲ 10ನೇ ತರಗತಿ ಪಾಸಾಗಿದ್ರೆ ಸಾಕು. ಅಂತಹ ಅಭ್ಯರ್ಥಿಗಳು ಈ ಪೋಸ್ಟ್ಗಳಿಗೆ ಅಪ್ಲೈ ಮಾಡಬಹುದು.
High Court Jobs: ಹೈಕೋರ್ಟ್ನಲ್ಲಿ ಕೆಲಸ ಮಾಡಲು ಇಚ್ಛಿಸುವವರು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಿ. ಗುಜರಾತ್ ಹೈ ಕೋರ್ಟ್ (Gujarat High Court) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 1510 ಪಿಯೋನ್ (Peon) ಹುದ್ದೆಗಳು ಖಾಲಿ ಇವೆ. ಕೇವಲ 10ನೇ ತರಗತಿ ಪಾಸಾಗಿದ್ರೆ ಸಾಕು. ಅಂತಹ ಅಭ್ಯರ್ಥಿಗಳು ಈ ಪೋಸ್ಟ್ಗಳಿಗೆ ಅಪ್ಲೈ ಮಾಡಬಹುದು. ಈ ಹುದ್ದೆಗಳಿಗೆ ಅಭ್ಯರ್ಥಿಗಳು ಆನ್ಲೈನ್ (Online) ಮೂಲಕ ಮಾತ್ರ ಅರ್ಜಿ ಹಾಕಬೇಕು. ಜೂನ್ 1, 2023 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ.
ಅರ್ಜಿ ಸಲ್ಲಿಕೆಗೂ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.
ಸಂಸ್ಥೆ | ಗುಜರಾತ್ ಹೈ ಕೋರ್ಟ್ |
ಹುದ್ದೆ | ಪಿಯೋನ್ |
ಒಟ್ಟು ಹುದ್ದೆ | 1510 |
ವಿದ್ಯಾರ್ಹತೆ | 10ನೇ ತರಗತಿ |
ವೇತನ | ನಿಗದಿಪಡಿಸಿಲ್ಲ |
ಉದ್ಯೋಗದ ಸ್ಥಳ | ಗುಜರಾತ್ |
ಅರ್ಜಿ ಸಲ್ಲಿಸಲು ಕೊನೆಯ ದಿನ | ಜೂನ್ 1, 2023 |
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: ಮೇ 9, 2023
ಅರ್ಜಿ ಸಲ್ಲಿಸಲು ಕೊನೆಯ ದಿನ: ಜೂನ್ 1, 2023
ಸಾಮಾನ್ಯ/ ಒಬಿಸಿ- 600 ರೂ.
SC/ST/ ಮಾಜಿ ಸೈನಿಕ- 300 ರೂ.
ಪಾವತಿಸುವ ಬಗೆ- SBI ಇ-ಪೇ
ಅಭ್ಯರ್ಥಿಗಳ ವಯಸ್ಸು 18ರಿಂದ 33 ವರ್ಷದೊಳಗಿರಬೇಕು.
ಗುಜರಾತ್ ಹೈ ಕೋರ್ಟ್
ಸರ್ಖೇಜ್ – ಗಾಂಧಿನಗರ ಎಚ್ವೈ
ಸೋಲಾ
ಅಹಮದಾಬಾದ್
ಗುಜರಾತ್- 380060
ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಮಂಡಳಿಯಿಂದ ಕಡ್ಡಾಯವಾಗಿ 10ನೇ ತರಗತಿ ಪೂರ್ಣಗೊಳಿಸಿರಬೇಕು.
ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ ಮೂಲಕ ಆಯ್ಕೆ ಮಾಡಿಕೊಳ್ಳಲಾಗುತ್ತದೆ.