Last Updated:
ನೀವು ವೇಟ್ ಲಾಸ್ ಜರ್ನಿಯಲ್ಲಿದ್ದರೆ, ಜಂಕ್ ಫುಡ್ ತಿನ್ನುವುದನ್ನು ನಿಲ್ಲಿಸಬೇಕಾಗುತ್ತದೆ. ನಿಮ್ಮ ಆಹಾರದಿಂದ ಕ್ಯಾಲೋರಿಗಳನ್ನು ಕಡಿತಗೊಳಿಸಬೇಕಾಗುತ್ತದೆ. ಈ ಸಮಯದಲ್ಲಿ ನಿಮ್ಮ ಬಗ್ಗೆ ನೀವು ಹೇಗೆ ಕಾಳಜಿವಹಿಸುತ್ತೀರಿ ಎಂಬುದರ ಕುರಿತು ಗಮನಹರಿಸಬೇಕಾಗುತ್ತದೆ. ಇದಕ್ಕಾಗಿ ಕೆಲವೊಂದಷ್ಟು ಟಿಪ್ಸ್ ಈ ಕೆಳಗಿನಂತಿದೆ ನೋಡಿ.
ಕೆಲವರಿಗೆ ಆಗಾಗ ಏನಾದರೂ ತಿನ್ನಬೇಕೆಂಬ ಬಯಕೆ ಆಗುತ್ತಿರುತ್ತದೆ. ಆದರೆ ಈ ಆಸೆಯು ನಿಮ್ಮ ಉತ್ತಮ ಆಹಾರ ಪದ್ಧತಿಯನ್ನೇ (Food System) ಹಾಳು ಮಾಡುತ್ತದೆ. ಅನೇಕ ಮಂದಿ ಆರೋಗ್ಯಕರ ಆಹಾರವನ್ನು (Healthy Food) ಮಾತ್ರ ತಿನ್ನಬೇಕೆಂಬ ಹಂಬಲವಿರುತ್ತದೆ. ಇನ್ನೂ ಒಂದಷ್ಟು ಜನ ಹೊರಗೆ ಸಿಗುವ ಜಂಕ್ ಫುಡ್ (Junk Food) ತಿನ್ನಲು ಇಷ್ಟಪಡುತ್ತಾರೆ. ಅಲ್ಲದೇ ಇವುಗಳ ಸೇವನೆಯ ಮೇಲೆ ನಿಯಂತ್ರಣವನ್ನೇ ಹೊಂದಿರುವುದಿಲ್ಲ. ಇದನ್ನು ಆಗಾಗ ತಿನ್ನುವುದರಿಂದ ಜನರು ಹೊಟ್ಟೆಯ ಸಮಸ್ಯೆಗಳನ್ನು (Stomach Problem) ಎದುರಿಸುತ್ತಾರೆ ಮತ್ತು ಬೊಜ್ಜು ಅನಿಯಂತ್ರಿತ ರೀತಿಯಲ್ಲಿ ಹೆಚ್ಚಾಗುತ್ತದೆ. ನೀವು ವೇಟ್ ಲಾಸ್ ಜರ್ನಿಯಲ್ಲಿದ್ದರೆ, ಜಂಕ್ ಫುಡ್ ತಿನ್ನುವುದನ್ನು ನಿಲ್ಲಿಸಬೇಕಾಗುತ್ತದೆ. ನಿಮ್ಮ ಆಹಾರದಿಂದ ಕ್ಯಾಲೋರಿಗಳನ್ನು ಕಡಿತಗೊಳಿಸಬೇಕಾಗುತ್ತದೆ. ಈ ಸಮಯದಲ್ಲಿ ನಿಮ್ಮ ಬಗ್ಗೆ ನೀವು ಹೇಗೆ ಕಾಳಜಿವಹಿಸುತ್ತೀರಿ ಎಂಬುದರ ಕುರಿತು ಗಮನಹರಿಸಬೇಕಾಗುತ್ತದೆ. ಇದಕ್ಕಾಗಿ ಕೆಲವೊಂದಷ್ಟು ಟಿಪ್ಸ್ ಈ ಕೆಳಗಿನಂತಿದೆ ನೋಡಿ.

- ಎಚ್ಚರಗೊಳ್ಳುವುದನ್ನು ತಪ್ಪಿಸಿ: ನೀವು ಬೇಸರಗೊಂಡಿದ್ದಾಗ ಎನಾದರೂ ತಿನ್ನಬೇಕೆಂಬ ಹಂಬಲವಿರುತ್ತದೆ. ಅಲ್ಲದೇ ತಡರಾತ್ರಿ ಎಚ್ಚರವಾಗಿದ್ದರೆ, ನಿಮಗೆ ಜಂಕ್ ಫುಡ್ ತಿನ್ನುಬೇಕು ಅನಿಸುತ್ತದೆ. ಹಾಗಾಗಿ ನಿಮ್ಮ ನಿದ್ರೆಯ ವೇಳಾಪಟ್ಟಿಯನ್ನು ಬದಲಾಯಿಸಲು ಪ್ರಯತ್ನಿಸಿ. ನಿಮ್ಮನ್ನು ಕಾರ್ಯನಿರತವಾಗಿಸಿ ಮತ್ತು ಆರೋಗ್ಯಕರ ತಿಂಡಿಗಳನ್ನು ತಿನ್ನುವತ್ತ ಗಮನಹರಿಸಿ.
- ಊಟ ಯೋಜನೆ: ದಿನ ಅಥವಾ ವಾರಕ್ಕೆ ನಿಮ್ಮ ಊಟ ಮತ್ತು ತಿಂಡಿಗಳನ್ನು ಮುಂಚಿತವಾಗಿ ಯೋಜಿಸಿ, ಇದರಿಂದ ನೀವು ಏನು ತಿನ್ನಬೇಕೆಂದು ತಿಳಿಯುತ್ತದೆ. ನೀವು ದಿನವಿಡೀ ಏನು ತಿನ್ನಲಿದ್ದೀರಿ ಎಂದು ನಿಮಗೆ ತಿಳಿದಿದ್ದರೆ, ನೀವು ಹಸಿದಿರುವಾಗ ಜಂಕ್ ಫುಡ್ ತಿನ್ನುವ ಸಾಧ್ಯತೆ ಹೆಚ್ಚು. ಇದರಿಂದ ನಿಮ್ಮ ತೂಕ ಇಳಿಕೆಯ ಪ್ರಯತ್ನ ವ್ಯರ್ಥವಾಗುತ್ತದೆ.
- ನೀರು ಕುಡಿಯಿರಿ: ನಾವು ಸಾಮಾನ್ಯವಾಗಿ ಬಾಯಾರಿಕೆಯನ್ನು ಹಸಿವು ಎಂದು ತಪ್ಪಾಗಿ ಭಾವಿಸುತ್ತೇವೆ. ಆದರೆ ಜಂಕ್ ಫುಡ್ ತಿನ್ನುವ ಹಂಬಲ ಹೆಚ್ಚಾದಾಗ ಒಂದು ದೊಡ್ಡ ಲೋಟ ನೀರು ಕುಡಿದು, 20 ನಿಮಿಷ ಕಾಯಿರಿ. ನಿಮ್ಮ ಹಸಿವು ಮಾಯವಾಗುವುದನ್ನು ನೀವೇ ಕಾಣುತ್ತೀರಿ.
- ಪರ್ಯಾಯಗಳನ್ನು ಕಂಡುಕೊಳ್ಳಿ: ನಿಮ್ಮ ನೆಚ್ಚಿನ ಆಹಾರಗಳಿಗೆ ಆರೋಗ್ಯಕರ ಪರ್ಯಾಯಗಳನ್ನು ಕಂಡುಕೊಳ್ಳಿ. ಉದಾಹರಣೆಗೆ, ನೀವು ಸಿಹಿ ಏನನ್ನಾದರೂ ತಿನ್ನಲು ಬಯಸುವುದಾದರೆ ಹಣ್ಣು, ಖರ್ಜೂರ ಅಥವಾ ಡಾರ್ಕ್ ಚಾಕೊಲೇಟ್ ಅನ್ನು ತಿನ್ನಲು ಪ್ರಯತ್ನಿಸಿ.
- ಸಮಯ ತೆಗೆದುಕೊಳ್ಳಿ: ಕಡುಬಯಕೆಗಳು ಕೆಲವೇ ನಿಮಿಷಗಳವರೆಗೆ ಇರುತ್ತವೆ. ಆದ್ದರಿಂದ ಭಾವನೆ ಕಡಿಮೆಯಾಗುವವರೆಗೆ ಬೇರೆ ಯಾವುದಾದರೂ ಕೆಲಸದಲ್ಲಿ ನಿರತರಾಗಿರಿ. ವಾಕಿಂಗ್ ಮಾಡಿ ಅಥವಾ ಪುಸ್ತಕ ಓದಿ.
- ನಿಯಮಿತವಾಗಿ ತಿನ್ನಿ: ದಿನಕ್ಕೆ ಮೂರು ಬಾರಿ ಹೆಚ್ಚಾಗಿ ಊಟ ಮಾಡುವ ಬದಲು, ನಿಯಮಿತ ಅಂತರದಲ್ಲಿ ಸ್ವಲ್ಒ ಪ್ರಮಾನದಷ್ಟು ಊಟವನ್ನು ಮಾಡಿ. ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಸ್ಥಿರವಾಗಿರಿಸುತ್ತದೆ ಮತ್ತು ಹಸಿವಿನ ಸಾಧ್ಯತೆಗಳನ್ನು ಕಡಿಮೆ ಮಾಡುತ್ತದೆ.
- ನಿಮ್ಮ ಊಟವನ್ನು ಆನಂದಿಸಿ: ನೀವು ನಿಜವಾಗಿಯೂ ಏನನ್ನಾದರೂ ತಿನ್ನಲು ಬಯಸುವುದಾದರೆ, ಅದನ್ನು ಸ್ವಲ್ಪ ಪ್ರಮಾಣದಲ್ಲಿ ಮಾತ್ರ ತಿನ್ನಿ. ನಿಮ್ಮನ್ನು ಸಂಪೂರ್ಣವಾಗಿ ವಂಚಿತಗೊಳಿಸಬೇಡಿ. ಇದು ನಂತರ ಅತಿಯಾಗಿ ತಿನ್ನುವುದನ್ನು ತಪ್ಪಿಸಲು ನಿಮಗೆ ಸಹಾಯ ಮಾಡುತ್ತದೆ. (Disclaimer: ಈ ಲೇಖನವು ಅಂತರ್ಜಾಲದಲ್ಲಿ ಲಭ್ಯವಿರುವ ವರದಿಗಳು, ಮಾಹಿತಿಯನ್ನು ಆಧರಿಸಿದೆ. news18ಗೂ ಇದಕ್ಕೂ ಯಾವುದೇ ರೀತಿಯ ಸಂಬಂಧವಿಲ್ಲ ಮತ್ತು ನ್ಯೂಸ್ 18 ಇದಕ್ಕೆ ಯಾವುದೇ ರೀತಿಯಲ್ಲೂ ಜವಾಬ್ದಾರಿಯಲ್ಲ)
September 10, 2025 12:48 PM IST