ತರಬೇತಿ ಸಂಸ್ಥೆಗಳ ನೆರವಿಲ್ಲದೆ UPSC ಉತ್ತೀರ್ಣರಾಗಲು ತಾವು ಅನುಸರಿಸಿದ ನಿಖರವಾದ ವಿಧಾನಗಳು, ಬಳಸಿದ ಡಿಜಿಟಲ್ ಸಾಧನಗಳು ಮತ್ತು ಮನೋವೃತ್ತಿಯ ಬದಲಾವಣೆಗಳ ಬಗ್ಗೆ ಹೇಳುತ್ತಾರೆ ಸುಭಂಕರ್.
ಸುಭಂಕರ್ ಬಾಲ ಇಂದು, 2021 ಬ್ಯಾಚ್‌ನ ಐಎಎಸ್ ಅಧಿಕಾರಿ, ಪಶ್ಚಿಮ ಬಂಗಾಳದ ಝಾರ್ಗ್ರಾಮ್‌ನಲ್ಲಿ ಹುಟ್ಟಿದ ಇವರು ತಮ್ಮ ಕನಸನ್ನು ಸಾಕಾರ ಮಾಡಿಕೊಂಡ ಕಥೆಯಿದು.
“2000ರ ದಶಕದ ಕೊನೆಯಲ್ಲಿ ನಾನು 7ನೇ ತರಗತಿಯಲ್ಲಿದ್ದಾಗ ಮುರ್ಷಿದಾಬಾದ್‌ನ ಡೊಂಕಲ್ ಪ್ರದೇಶವು ಮಾವೋವಾದಿ ಅಶಾಂತಿಯಿಂದ ಬಳಲುತ್ತಿತ್ತು.
ಆಗಿನ ಉಪವಿಭಾಗಾಧಿಕಾರಿಯು ಹಳ್ಳಿಯಿಂದ ಹಳ್ಳಿಗೆ ತೆರಳಿ ಶಾಂತಿ ಮತ್ತು ಅಭಿವೃದ್ಧಿ ತರುವ ಪ್ರಯತ್ನ ಮಾಡುತ್ತಿದ್ದ ದೃಶ್ಯ ಈಗಲೂ ಕಣ್ಣಿಗೆ ಕಟ್ಟಿದಂತಿದೆ.
ಹಳ್ಳಿಗಳಲ್ಲಿ ಶಾಂತಿ ತರಲು ಅವರು ಅವರು ನಿರಂತರವಾಗಿ ಪ್ರಯತ್ನಿಸುತ್ತಲೇ ಇದ್ದರು. ಆ ದೃಶ್ಯಗಳನ್ನು ಮರೆಯುವಂತೆಯೇ ಇಲ್ಲ. ಇವೆಲ್ಲವು ತಾನು ಐಎಎಸ್ ಅಧಿಕಾರಿಯಾಗಲೂ ಪ್ರೇರಣೆ ನೀಡಿತು” ಎನ್ನುತ್ತಾರೆ ಸುಭಂಕರ್.
“ಒಬ್ಬರ ಕೆಲಸ ಎಷ್ಟೋ ಜನರ ಜೀವನವನ್ನು ಬದಲಾಯಿಸಬಹುದು ಎಂಬುದನ್ನು ನಾನು ಅಂದೇ ಮೊದಲ ಬಾರಿಗೆ ಕಂಡೆ. ಅದಕ್ಕೆ ನಾನೇ ಸಾಕ್ಷಿ,” ಎಂದು ಅವರು ಹೇಳುತ್ತಾರೆ.
ಆ ಸಮಯದಲ್ಲಿ UPSC ಎಂದರೇನೂ ಎಂದೇ ತಿಳಿದಿರಲಿಲ್ಲ. ಆದರೆ ಒಂದು ವಿಷಯವಂತೂ ಸ್ಪಷ್ಟವಾಗಿತ್ತು, ಅದೇನೆಂದರೆ, ಒಬ್ಬ ವ್ಯಕ್ತಿಯು ಮತ್ತೊಬ್ಬರ ಬೃಹತ್ ಬದಲಾವಣೆಗೆ ಕಾರಣವಾಗಬಹುದೆಂದು.
ಶಾಲಾ ವಿದ್ಯಾಭ್ಯಾಸದ ನಂತರ, ಸುಭಂಕರ್ ಅವರು ಎನ್‌ಐಟಿ ವಾರಂಗಲ್‌ನಲ್ಲಿ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ ಎಂಜಿನಿಯರಿಂಗ್ ಓದಿದರು.
2017ರಲ್ಲಿ ಅವರು ಬೆಂಗಳೂರಿನ ಟೆಕ್ಸಾಸ್ ಇನ್ಸ್ಟ್ರುಮೆಂಟ್ಸ್‌ನಲ್ಲಿ ಇಂಟಿಗ್ರೇಟೆಡ್ ಸರ್ಕ್ಯೂಟ್ ವಿನ್ಯಾಸ ಮಾಡುತ್ತಿದ್ದರು. ಆದರೆ 2018ರಲ್ಲಿ, ಆ ಉಪವಿಭಾಗಾಧಿಕಾರಿಯ ನೆನಪು ಮತ್ತೆ ಜೀವಂತವಾಯಿತು. “ನಾನು ಕೂಡಾ ಸಾರ್ವಜನಿಕ ಸೇವೆಯ ಮೂಲಕ ಬದಲಾವಣೆ ತರಬಹುದೇ?” ಎಂಬ ಪ್ರಶ್ನೆ ಹುಟ್ಟಿತು.
ಸುಭಂಕರ್ ಮತ್ತೆ ತಡ ಮಾಡಲಿಲ್ಲ. ಬದಲಾಗಿ, UPSC ತಯಾರಿ ಪ್ರಾರಂಭಿಸಿದರು. ಕೇವಲ ಪ್ರಮಾಣಿತ ಪುಸ್ತಕಗಳು ಮತ್ತು ಆನ್‌ಲೈನ್ ಲೆಕ್ಚರ್‌ಗಳನ್ನು ಕೇಳುತ್ತಿದ್ದರು.
ತಮ್ಮ ವೃತ್ತಿ ಕೆಲಸದ ನಂತರ ದಿನಕ್ಕೆ 3-4 ಗಂಟೆಗಳು ಓದಲು ಸಾಧ್ಯವಾಗುತ್ತಿತ್ತು ಅವರಿಗೆ. “ಮೊದಲಿಗೆ ತರಬೇತಿ ಕೇಂದ್ರ ಸೇರುವುದಿಲ್ಲವೆಂದು ನಿರ್ಧರಿಸಿದ್ದೆ. ಮೊದಲು ಪಠ್ಯಕ್ರಮವನ್ನು ಅರಿತುಕೊಳ್ಳಲು, ನನ್ನನ್ನು ಪರೀಕ್ಷಿಸಿಕೊಳ್ಳಲು ಬಯಸಿದ್ದೆ.”
ಆದರೆ, ಅವರಿಗೆ ಅಚ್ಚರಿಯಾಗುವುದಂತೆ ಮೊದಲ ಪ್ರಯತ್ನದಲ್ಲೇ ಪ್ರೀಲಿಮ್ಸ್ ಉತ್ತೀರ್ಣರಾದರು. ಆದರೆ, ಮೇನ್ಸ್ ಬೇರೆ ಕಥೆಯಾಗಿತ್ತು – ಸೋಲು ಎದುರಾಯಿತು.
2019ರಲ್ಲಿ ಕೆಲಸ ಬಿಟ್ಟು, ದೆಹಲಿಗೆ ಬಂದು, ಪೂರ್ಣಾವಧಿ ತಯಾರಿ ಆರಂಭಿಸಿದರು. ಈ ಬಾರಿ ಅವರು ಆಪ್ಷನಲ್ ವಿಷಯದ ಮೇಲೆ ಸಂಪೂರ್ಣವಾಗಿ ಕೇಂದ್ರೀಕರಿಸಿದರು: NPTEL ಉಪನ್ಯಾಸಗಳು, ಇಂಜಿನಿಯರಿಂಗ್ ಸರ್ವೀಸ್ ಮೆಟೀರಿಯಲ್, ಅನೇಕ ಅಭ್ಯಾಸ ಪ್ರಶ್ನೆಗಳನ್ನು ಬಿಡಿಸುವುದು ಹೀಗೆ.
ತಮ್ಮ ವೇಳಾಪಟ್ಟಿಯಲ್ಲಿ – ಬೆಳಗ್ಗೆ ಜನರಲ್ ಸ್ಟಡೀಸ್, ಮಧ್ಯಾಹ್ನ ಆಪ್ಷನಲ್, ಸಂಜೆ ಪ್ರಸ್ತುತ ಘಟನೆಗಳು ಮತ್ತು ಪುನರವಲೋಕನ. ಜೊತೆಗೆ ಉತ್ತರ ಬರೆಯುವ ಅಭ್ಯಾಸಕ್ಕಾಗಿ ಮಾಕ್ ಟೆಸ್ಟ್ ಸರಣಿ.
“ಮೊದಲ ಪ್ರಯತ್ನದಲ್ಲಿ ತ್ವರಿತವಾಗಿ ಓದಿದ್ದೆ. ಈ ಬಾರಿ ಪ್ರತಿಯೊಂದು ವಿಷಯವನ್ನು ಆಳವಾಗಿ ಅರ್ಥಮಾಡಿಕೊಂಡು, ಕನಿಷ್ಠ ಎರಡು ಬಾರಿ ಪುನರವಲೋಕನ ಮಾಡಿ, ಸಮಯಕ್ಕೆ ಸೀಮಿತವಾದ ಅಭ್ಯಾಸ ಮಾಡಿದೆ.”
ಈಗ ಸುಭಂಕರ್ 2021ರ ಸಾಲಿನ ಐಎಎಸ್ ಆಗಿ ಇಂದು ಮುರ್ಷಿದಾಬಾದ್‌ನ ಡೊಂಕಲ್‌ನಲ್ಲಿ SDO ಆಗಿ ಸೇವೆ ಸಲ್ಲಿಸುತ್ತಿದ್ದಾರೆ.
- ಸ್ವತಃ ಪರೀಕ್ಷಿಸಿ:
ದುಬಾರಿ ತರಬೇತಿ ಕೇಂದ್ರಕ್ಕೆ ತಕ್ಷಣ ಸೇರುವ ಬದಲು, ಮೊದಲು UPSC ಪಠ್ಯಕ್ರಮ, ಹಿಂದಿನ ಪ್ರಶ್ನೆಪತ್ರಿಕೆಗಳು, ಟಾಪರ್‌ಗಳ ತಂತ್ರಗಳನ್ನು ನೋಡಿ.
Bangalore,Karnataka
September 06, 2025 9:42 AM IST