
ಕೆಲಸಕ್ಕೆ ರಿಸೈನ್ ಮಾಡಿದ್ದೀರಾ? ಹಾಗಾದ್ರೆ ಕಂಪನಿ ಬಿಡೋ ಮುನ್ನ ಈ ದಾಖಲೆ ಮರೆಯದೆ ಪಡೆಯಿರಿ
1. ಅನುಭವ ಪತ್ರ (Experience Letter): ನೀವು ಕಂಪನಿಯಲ್ಲಿ ಕೆಲಸ ಮಾಡಿದ ಅವಧಿಯ ಅಧಿಕೃತ ಪ್ರಮಾಣ ಪತ್ರ ಅನುಭವ ಪತ್ರ. ಇದು ನಿಮ್ಮ ಭವಿಷ್ಯದ ಉದ್ಯೋಗಗಳಿಗೆ ಬಹಳ ಮುಖ್ಯವಾಗುತ್ತದೆ. ಹೊಸ ಕಂಪನಿಯಲ್ಲಿ ಸೇರುವಾಗ ನಿಮ್ಮ ಹಿಂದಿನ ಅನುಭವವನ್ನು ಸಾಬೀತುಪಡಿಸಲು ಇದು ಅವಶ್ಯಕ. ಅದ್ರಂತೆ ಇದರಲ್ಲಿ, ನಿಮ್ಮ ಕೆಲಸದ ಅವಧಿ, ಹುದ್ದೆ, ಮತ್ತು ಕಂಪನಿಯಲ್ಲಿ ನೀವು ನಿರ್ವಹಿಸಿದ ಜವಾಬ್ದಾರಿಗಳನ್ನು ದೃಢೀಕರಿಸುತ್ತದೆ. 2. ರಿಲೀವಿಂಗ್ ಲೆಟರ್ (Relieving Letter): ರಾಜೀನಾಮೆ ಸಲ್ಲಿಸಿದ ನಂತರ, ಕಂಪನಿಯಿಂದ ರಾಜೀನಾಮೆಯನ್ನು ಒಪ್ಪಿಕೊಂಡಿರುವ ರಿಲೀವಿಂಗ್ ಲೆಟರ್ ಅನ್ನು…