Last Updated:
ಬೆಂಗಳೂರಿನಲ್ಲಿ ಉದ್ಯೋಗ ಮಾಡಲು ಬಯಸುವವರಿಗೆ ಇದೊಂದು ಉತ್ತಮ ಅವಕಾಶವಾಗಿದೆ. ಆಸಕ್ತ ಅಭ್ಯರ್ಥಿಗಳು ನವೆಂಬರ್ 29, 2023ಕ್ಕೆ ಮುನ್ನ ಈ ಹುದ್ದೆಗಳಿಗೆ ಅರ್ಜಿ(Apply) ಸಲ್ಲಿಸಬಹುದು.
C-DOT Recruitment 2023: ಸೆಂಟರ್ ಫಾರ್ ಡೆವಲಪ್ಮೆಂಟ್ ಆಫ್ ಟೆಲಿಮ್ಯಾಟಿಕ್ಸ್ (Center for Development Of Telematics) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 395 ಪ್ರಾಜೆಕ್ಟ್ ಎಂಜಿನಿಯರ್ ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು. ಬೆಂಗಳೂರಿನಲ್ಲಿ ಉದ್ಯೋಗ ಮಾಡಲು ಬಯಸುವವರಿಗೆ ಇದೊಂದು ಉತ್ತಮ ಅವಕಾಶವಾಗಿದೆ. ಆಸಕ್ತ ಅಭ್ಯರ್ಥಿಗಳು ನವೆಂಬರ್ 29, 2023ಕ್ಕೆ ಮುನ್ನ ಈ ಹುದ್ದೆಗಳಿಗೆ ಅರ್ಜಿ(Apply) ಸಲ್ಲಿಸಬಹುದು.
ಅರ್ಜಿ ಸಲ್ಲಿಕೆಗೂ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.
ಸಂಸ್ಥೆ | ಸೆಂಟರ್ ಫಾರ್ ಡೆವಲಪ್ಮೆಂಟ್ ಆಫ್ ಟೆಲಿಮ್ಯಾಟಿಕ್ಸ್ |
ಹುದ್ದೆ | ಪ್ರಾಜೆಕ್ಟ್ ಎಂಜಿನಿಯರ್ |
ಒಟ್ಟು ಹುದ್ದೆ | 395 |
ವಿದ್ಯಾರ್ಹತೆ | ಬಿಇ/ ಬಿ.ಟೆಕ್ |
ವೇತನ | 1 ಲಕ್ಷ |
ಉದ್ಯೋಗದ ಸ್ಥಳ | ಭೂಪಾಲ್, ಪುಣೆ, ಹೈದರಾಬಾದ್, ಬೆಂಗಳೂರು |
ಅರ್ಜಿ ಸಲ್ಲಿಸಲು ಕೊನೆಯ ದಿನ | ನವೆಂಬರ್ 29, 2023 |
ಪ್ರಾಜೆಕ್ಟ್ ಎಂಜಿನಿಯರ್ (4ಜಿ/5ಜಿ ಪ್ರಾಜೆಕ್ಟ್)- 162
ಪ್ರಾಜೆಕ್ಟ್ ಎಂಜಿನಿಯರ್- 233
ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಮಂಡಳಿಯಿಂದ ಕಡ್ಡಾಯವಾಗಿ ಕನಿಷ್ಠ 65% ಅಂಕಗಳೊಂದಿಗೆ CSE/ECE/IT ನಲ್ಲಿ B.E ಅಥವಾ B.Tech, CSE/ECE ನಲ್ಲಿ M.E ಅಥವಾ M.Tech ಪೂರ್ಣಗೊಳಿಸಿರಬೇಕು.
ಅಭ್ಯರ್ಥಿಗಳ ವಯಸ್ಸು ನವೆಂಬರ್ 23, 2023ಕ್ಕೆ ಗರಿಷ್ಠ 30 ವರ್ಷ ಮೀರಿರಬಾರದು. ಮೀಸಲಾತಿ ಅನುಸಾರ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ನೀಡಲಾಗುತ್ತದೆ.
ಮಾಸಿಕ ₹ 1,00,000 ಸಂಬಳ ಕೊಡಲಾಗುತ್ತದೆ.
ಭೂಪಾಲ್, ಪುಣೆ, ಹೈದರಾಬಾದ್, ಬೆಂಗಳೂರು
ಲಿಖಿತ ಪರೀಕ್ಷೆ
ಸಂದರ್ಶನ
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 29/11/2022
ಅರ್ಜಿ ಸಲ್ಲಿಸಲು ಕೊನೆಯ ದಿನ: ನವೆಂಬರ್ 29, 2023
January 23, 2023 8:31 PM IST