IIT ಪ್ರವೇಶಕ್ಕೆ ಈಗ JEE ಬೇಕಿಲ್ಲ: ಒಲಿಂಪಿಯಾಡ್ ವಿಜೇತರಿಗೆ ನೇರ ಎಂಟ್ರಿ! IIT ಪ್ರವೇಶಕ್ಕೆ ಯಾವುದು ಬೆಸ್

Iit 2 2025 09 b3515ccec90e37685a5640c937574365.jpg


ಮುಂಚೂಣಿಯಲ್ಲಿರುವ IIT ಕಾನ್ಪುರ 

2025-26ರ ಶೈಕ್ಷಣಿಕ ವರ್ಷದಲ್ಲಿ, IIT ಕಾನ್ಪುರ ಗಣಿತ, ಭೌತಶಾಸ್ತ್ರ, ರಸಾಯನಶಾಸ್ತ್ರ, ಜೀವಶಾಸ್ತ್ರ ಮತ್ತು ಕಂಪ್ಯೂಟರ್ ಸೈನ್ಸ್‌ನಂತಹ ವಿಷಯಗಳಲ್ಲಿ ಅಂತರರಾಷ್ಟ್ರೀಯ ಒಲಿಂಪಿಯಾಡ್ ಅಂಕಗಳ ಮೂಲಕ ಐದು ವಿದ್ಯಾರ್ಥಿಗಳನ್ನು BTech ಮತ್ತು BS ಕೋರ್ಸ್‌ಗಳಿಗೆ ಸೇರಿಸಿಕೊಂಡಿದೆ. ಇವರಿಗೆ JEE ಅಡ್ವಾನ್ಸ್‌ಡ್ ಪರೀಕ್ಷೆ ಬರೆಯುವ ಅಗತ್ಯವಿರಲಿಲ್ಲ. ಬದಲಿಗೆ, ಒಲಿಂಪಿಯಾಡ್ ಮೆರಿಟ್ ಆಧಾರದ ಮೇಲೆ ಶಾರ್ಟ್‌ಲಿಸ್ಟ್ ಮಾಡಿ, ನಂತರ ಲಿಖಿತ ಪರೀಕ್ಷೆ ನಡೆಸಲಾಯಿತು. IIT ಕಾನ್ಪುರ ಈ ವಿದ್ಯಾರ್ಥಿಗಳಿಗೆ ಯಾವುದೇ ಬ್ರಿಡ್ಜ್ ಕೋರ್ಸ್‌ಗಳ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಿದೆ.

ಪ್ರವೇಶ ತೆರೆಯುತ್ತಿರುವ ಇತರ IIT ಗಳು 

IIT ಕಾನ್ಪುರ ಮಾತ್ರವಲ್ಲದೆ, IIT ಮದ್ರಾಸ್, IIT ಬಾಂಬೆ, IIT ಗಾಂಧಿನಗರ ಮತ್ತು IIT ಇಂದೋರ್ ಕೂಡ ಒಲಿಂಪಿಯಾಡ್‌ಗಳ ಮೂಲಕ ಪ್ರವೇಶ ಮಾರ್ಗಗಳನ್ನು ತೆರೆಯುತ್ತಿವೆ. IIT ಮಂಡಿಯ ಡೀನ್ ಆಫ್ ಅಕಾಡೆಮಿಕ್ಸ್ ಪ್ರೊಫೆಸರ್ ವೆಂಕಟೇಶ್ ಎಚ್ ಚೆಂಬ್ರೋಲು ಅವರ ಪ್ರಕಾರ, “ಒಲಿಂಪಿಯಾಡ್‌ಗಳು ಸಮಸ್ಯೆ-ಪರಿಹಾರ, ಸೃಜನಶೀಲತೆ ಮತ್ತು ವಿಷಯದ ಒಳನೋಟಗಳನ್ನು ಮೌಲ್ಯಮಾಪನ ಮಾಡುತ್ತವೆ. ಇವು ಸಂಶೋಧನೆ ಮತ್ತು ನಾವೀನ್ಯತೆಯಲ್ಲಿ ನಿರ್ಣಾಯಕ ಗುಣಗಳಾಗಿವೆ. ಒಲಿಂಪಿಯಾಡ್‌ಗಳ ಮೂಲಕ ಆಯ್ಕೆಯು IIT ವ್ಯವಸ್ಥೆಗೆ ಪ್ರವೇಶಿಸುವ ವಿದ್ಯಾರ್ಥಿಗಳ ಪ್ರೊಫೈಲ್ ಅನ್ನು ಉತ್ತಮಗೊಳಿಸುತ್ತದೆ,” ಎಂದಿದ್ದಾರೆ.

ಪ್ರವೇಶ ಹೇಗೆ?

ಪ್ರತಿ ಪದವಿಪೂರ್ವ ವಿಷಯದಲ್ಲಿ ಎರಡು ಹೆಚ್ಚುವರಿ ಸೀಟುಗಳನ್ನು ಮೀಸಲಿಡಲಾಗುತ್ತದೆ, ಅದರಲ್ಲಿ ಒಂದು ಮಹಿಳಾ ಒಲಿಂಪಿಯಾಡ್ ವಿಜೇತರಿಗೆ ಮತು ಭೌತಶಾಸ್ತ್ರ, ರಸಾಯನಶಾಸ್ತ್ರ, ಗಣಿತ, ಮಾಹಿತಿ ಮತ್ತು ಜೀವಶಾಸ್ತ್ರದಲ್ಲಿ ಒಲಿಂಪಿಯಾಡ್ ಅಂಕಗಳಿಂದ ನಿರ್ಧರಿಸಲಾದ ScOpE ಶ್ರೇಯಾಂಕದ ಆಧಾರದ ಮೇಲೆ ಪ್ರವೇಶವಿರುತ್ತದೆ. IIT ಬಾಂಬೆ INMO (ಇಂಡಿಯನ್ ನ್ಯಾಷನಲ್ ಮ್ಯಾಥಮೆಟಿಕಲ್ ಒಲಿಂಪಿಯಾಡ್) ಮೂಲಕ BS ಗಣಿತ ಪ್ರವೇಶವನ್ನು ಅನುಮತಿಸುತ್ತದೆ.

ನ್ಯಾಯಯುತವೇ?

ವರ್ಷಗಟ್ಟಲೆ JEE ತಯಾರಿ ಮಾಡುವ ವಿದ್ಯಾರ್ಥಿಗಳಿಗೆ ಈ ಹೊಸ ಪ್ರವೇಶ ಮಾರ್ಗ ಅನ್ಯಾಯವಾಗಿ ಕಾಣಬಹುದು. ಒಲಿಂಪಿಯಾಡ್ ಪ್ರಶ್ನೆಗಳು JEE ಅಡ್ವಾನ್ಸ್‌ಡ್‌ಗೆ ಹೋಲುತ್ತವೆಯೇ ಎಂಬ ಪ್ರಶ್ನೆಯೂ ಇದೆ.

ನೊಯ್ಡಾ ಇಂಟರ್ನ್ಯಾಷನಲ್ ಯೂನಿವರ್ಸಿಟಿಯ ಸ್ಕೂಲ್ ಆಫ್ ಇಂಜಿನಿಯರಿಂಗ್ ಅಂಡ್ ಟೆಕ್ನಾಲಜಿಯ ಡೀನ್ ಡಾ. ವಿಮಲ್ ಬಿಭು ಅವರ ಪ್ರಕಾರ, “ಒಲಿಂಪಿಯಾಡ್‌ಗಳು ನಿರ್ದಿಷ್ಟ ಕ್ಷೇತ್ರಗಳಲ್ಲಿ ಹೆಚ್ಚಿನ ಆಳದೊಂದಿಗೆ ಸಮಸ್ಯೆಗಳನ್ನು ಪರಿಹರಿಸುವುದನ್ನು ಪರೀಕ್ಷಿಸುತ್ತವೆ, ಆದರೆ JEE ಅಡ್ವಾನ್ಸ್‌ಡ್ ಸಮಯದ ಒತ್ತಡದಲ್ಲಿ ಭೌತಶಾಸ್ತ್ರ, ರಸಾಯನಶಾಸ್ತ್ರ ಮತ್ತು ಗಣಿತದಲ್ಲಿ ಆಳ ಮತ್ತು ವ್ಯಾಪಕತೆಯನ್ನು ಬಯಸುತ್ತದೆ. ಎರಡೂ ಪ್ರತಿಭೆಯನ್ನು ವಿಭಿನ್ನವಾಗಿ ಮೌಲ್ಯಮಾಪನ ಮಾಡುತ್ತವೆ ಮತ್ತು ಒಂದು ಇನ್ನೊಂದನ್ನು ಬದಲಾಯಿಸಲು ಸಾಧ್ಯವಿಲ್ಲ,” ಎಂದು ಹೇಳಿದರು.

ಒಲಿಂಪಿಯಾಡ್‌ JEE ಗೆ ಪೂರಕವೇ ಹೊರತು ಪ್ರತಿಸ್ಪರ್ಧಿಯಲ್ಲ

ತಜ್ಞರು ಒಲಿಂಪಿಯಾಡ್‌ಗಳನ್ನು JEE ಗೆ ಪ್ರತಿಸ್ಪರ್ಧಿಯಾಗಿ ನೋಡದೆ, ಪೂರಕವಾಗಿ ನೋಡುತ್ತಾರೆ. IIT ಮಂಡಿಯ ಪ್ರೊಫೆಸರ್ ವೆಂಕಟೇಶ್ ಎಚ್ ಚೆಂಬ್ರೋಲು ಅವರು “ಇಂತಹ ಕ್ರಮವನ್ನು JEE ಗೆ ಸ್ಪರ್ಧೆಯಾಗಿ ನೋಡದೆ, ಪ್ರವೇಶ ನೀತಿಯ ವಿಸ್ತರಣೆಯಾಗಿ ಅರ್ಥೈಸಿಕೊಳ್ಳಬೇಕು,” ಎಂದಿದ್ದಾರೆ.

IIT ಬಾಂಬೆ ಮತ್ತು IIT ರೂಕಿ ಕೂಡ ಒಲಿಂಪಿಯಾಡ್ ವಿಜೇತರಿಗೆ ಕೆಲವು ಸೀಟುಗಳನ್ನು ನೀಡಲು ಪೈಲಟ್ ಕಾರ್ಯಕ್ರಮಗಳನ್ನು ಅನ್ವೇಷಿಸುತ್ತಿವೆ.

ಸಮತೋಲನ ಅಗತ್ಯ

ಒಲಿಂಪಿಯಾಡ್ ಮೂಲಕ ಪ್ರವೇಶ ಪಡೆಯುವ ವಿದ್ಯಾರ್ಥಿಗಳು ಸಂಶೋಧನೆ, ವಿಶ್ಲೇಷಣಾತ್ಮಕ ಚಿಂತನೆ ಮತ್ತು ಸ್ವಯಂ-ಕಲಿಕೆಗೆ ಉತ್ತಮವಾಗಿ ಸಿದ್ಧರಾಗಿರುತ್ತಾರೆ. ಆದರೆ IIT ಗಳು ಪ್ರಾಯೋಗಿಕ ಜ್ಞಾನ, ಯೋಜನೆಗಳು ಮತ್ತು ಸಮಯ ನಿರ್ವಹಣೆಯನ್ನು ಸಹ ಬಯಸುತ್ತವೆ. ಒಲಿಂಪಿಯಾಡ್‌ಗಳು ಉತ್ತಮ ಚಿಂತನೆಯನ್ನು ಪ್ರದರ್ಶಿಸುತ್ತವೆ, ಆದರೆ ಅವು IIT ವ್ಯವಸ್ಥೆಯಲ್ಲಿ ಯಶಸ್ಸನ್ನು ಖಾತರಿಪಡಿಸುವುದಿಲ್ಲ ಎಂದು ಡಾ. ವಿಮಲ್ ಬಿಭು ಹೇಳುತ್ತಾರೆ. IIT ಅಧಿಕಾರಿಗಳ ಪ್ರಕಾರ, JEE ಅನ್ನು ರದ್ದುಗೊಳಿಸುವ ಬದಲು, ಅತ್ಯುತ್ತಮ ಪ್ರತಿಭೆಗಳಿಗೆ ಹೆಚ್ಚಿನ ಆಯ್ಕೆಗಳನ್ನು ಒದಗಿಸುವುದು ಅವರ ಉದ್ದೇಶ.

ಕನ್ನಡ ಸುದ್ದಿ/ ನ್ಯೂಸ್/Jobs/

Joint Entrance Examination: IIT ಪ್ರವೇಶಕ್ಕೆ ಈಗ JEE ಬೇಕಿಲ್ಲ; ಒಲಿಂಪಿಯಾಡ್ ವಿಜೇತರಿಗೆ ನೇರ ಎಂಟ್ರಿ! IIT ಪ್ರವೇಶಕ್ಕೆ ಯಾವುದು ಬೆಸ್ಟ್?



Source link

Leave a Reply

Your email address will not be published. Required fields are marked *

TOP