High Court Jobs: 10ನೇ ತರಗತಿ ಪಾಸಾಗಿದ್ರೆ ಹೈ ಕೋರ್ಟ್​​ ಹುದ್ದೆಗಳಿಗೆ ಅರ್ಜಿ ಹಾಕಿ

1684035501 ssc jobs 1.jpg


Last Updated:

ಕೇವಲ 10ನೇ ತರಗತಿ ಪಾಸಾಗಿದ್ರೆ ಸಾಕು. ಅಂತಹ ಅಭ್ಯರ್ಥಿಗಳು ಈ ಪೋಸ್ಟ್​ಗಳಿಗೆ ಅಪ್ಲೈ ಮಾಡಬಹುದು.

ಸಾಂದರ್ಭಿಕ ಚಿತ್ರಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

High Court Jobs: ಹೈಕೋರ್ಟ್​​ನಲ್ಲಿ ಕೆಲಸ ಮಾಡಲು ಇಚ್ಛಿಸುವವರು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಿ. ಗುಜರಾತ್ ಹೈ ಕೋರ್ಟ್ (Gujarat High Court)​ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 1510 ಪಿಯೋನ್ (Peon) ಹುದ್ದೆಗಳು ಖಾಲಿ ಇವೆ. ಕೇವಲ 10ನೇ ತರಗತಿ ಪಾಸಾಗಿದ್ರೆ ಸಾಕು. ಅಂತಹ ಅಭ್ಯರ್ಥಿಗಳು ಈ ಪೋಸ್ಟ್​ಗಳಿಗೆ ಅಪ್ಲೈ ಮಾಡಬಹುದು. ಈ ಹುದ್ದೆಗಳಿಗೆ ಅಭ್ಯರ್ಥಿಗಳು ಆನ್​ಲೈನ್ (Online) ಮೂಲಕ ಮಾತ್ರ ಅರ್ಜಿ ಹಾಕಬೇಕು. ಜೂನ್ 1, 2023 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ.

ಅರ್ಜಿ ಸಲ್ಲಿಕೆಗೂ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.

ಸಂಸ್ಥೆ ಗುಜರಾತ್ ಹೈ ಕೋರ್ಟ್
ಹುದ್ದೆ ಪಿಯೋನ್
ಒಟ್ಟು ಹುದ್ದೆ 1510
ವಿದ್ಯಾರ್ಹತೆ 10ನೇ ತರಗತಿ
ವೇತನ ನಿಗದಿಪಡಿಸಿಲ್ಲ
ಉದ್ಯೋಗದ ಸ್ಥಳ ಗುಜರಾತ್
ಅರ್ಜಿ ಸಲ್ಲಿಸಲು ಕೊನೆಯ ದಿನ ಜೂನ್ 1, 2023

ಪ್ರಮುಖ ದಿನಾಂಕಗಳು:

ಅರ್ಜಿ ಸಲ್ಲಿಕೆ ಆರಂಭ ದಿನಾಂಕ: ಮೇ 9, 2023

ಅರ್ಜಿ ಸಲ್ಲಿಸಲು ಕೊನೆಯ ದಿನ: ಜೂನ್ 1, 2023

ಅರ್ಜಿ ಶುಲ್ಕ:

ಸಾಮಾನ್ಯ/ ಒಬಿಸಿ- 600 ರೂ.

SC/ST/ ಮಾಜಿ ಸೈನಿಕ- 300 ರೂ.

ಪಾವತಿಸುವ ಬಗೆ- SBI ಇ-ಪೇ

ವಯೋಮಿತಿ:

ಅಭ್ಯರ್ಥಿಗಳ ವಯಸ್ಸು 18ರಿಂದ 33 ವರ್ಷದೊಳಗಿರಬೇಕು.

ಉದ್ಯೋಗದ ಸ್ಥಳ:

ಗುಜರಾತ್ ಹೈ ಕೋರ್ಟ್​

ಸರ್ಖೇಜ್ – ಗಾಂಧಿನಗರ ಎಚ್‌ವೈ

ಸೋಲಾ

ಅಹಮದಾಬಾದ್

ಗುಜರಾತ್- 380060

ವಿದ್ಯಾರ್ಹತೆ:

ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಮಂಡಳಿಯಿಂದ ಕಡ್ಡಾಯವಾಗಿ 10ನೇ ತರಗತಿ ಪೂರ್ಣಗೊಳಿಸಿರಬೇಕು.

ಆಯ್ಕೆ ಪ್ರಕ್ರಿಯೆ:

ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ ಮೂಲಕ ಆಯ್ಕೆ ಮಾಡಿಕೊಳ್ಳಲಾಗುತ್ತದೆ.



Source link

Leave a Reply

Your email address will not be published. Required fields are marked *

TOP