Last Updated:
ಕಳೆದ ವರ್ಷದಲ್ಲಿ 5 ಸಾವಿರದಲ್ಲಿದ್ದ ಚಿನ್ನದ ಬೆಲೆ ಇದೀಗ 10 ಸಾವಿರಕ್ಕೆ ತಲುಪಿದೆ. ಚಿನ್ನದ ಬೆಲೆಯಲ್ಲಿ ಇದೀಗ ಭಾರೀ ಏರಿಕೆ ಕಂಡು ಗ್ರಾಹಕರು ದಿಗ್ಭ್ರಮೆಗೊಂಡಿದ್ದಾರೆ. ಇಂದು ಚಿನ್ನದ ಬೆಲೆಯಲ್ಲಿ ಗಣನೀಯ ಏರಿಕೆಯಾಗಿದೆ.
ಬೆಂಗಳೂರು, ಸೆಪ್ಟೆಂಬರ್ 9, 2025: ಹೆಚ್ಚಿನವರು ಹೂಡಿಕೆ ಮಾಡ್ಬೇಕು (Invest) ಅಂದುಕೊಳ್ಳುತ್ತಾರೆ. ಆದ್ರೆ ಯಾವುದು ಬೆಸ್ಟ್ ಎಂಬುದು ಯಾರಿಗೂ ಯಾವುದೇ ರೀತಿಯಲ್ಲೂ ಮಾಹಿತಿ ಇರಲ್ಲ. ಆದ್ರೆ ಹೂಡಿಕೆ ಮಾಡುವವರಿಗೆ ಚಿನ್ನ ಬೆಸ್ಟ್ ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯ. ಆದರೆ ಇತ್ತೀಚೆಗೆ ಚಿನ್ನ ಮತ್ತು ಬೆಳ್ಳಿಯ ಬೆಲೆಯಲ್ಲಿ ಭಾರೀ ಏರಿಕೆ ಕಂಡಿದೆ. ಕಳೆದ ವರ್ಷದಲ್ಲಿ 5 ಸಾವಿರದಲ್ಲಿದ್ದ ಚಿನ್ನದ ಬೆಲೆ ಇದೀಗ 10 ಸಾವಿರಕ್ಕೆ ತಲುಪಿದೆ. ಚಿನ್ನದ ಬೆಲೆಯಲ್ಲಿ ಇದೀಗ ಭಾರೀ ಏರಿಕೆ ಕಂಡು ಗ್ರಾಹಕರು ದಿಗ್ಭ್ರಮೆಗೊಂಡಿದ್ದಾರೆ. ಇಂದು ಚಿನ್ನದ ಬೆಲೆಯಲ್ಲಿ ಗಣನೀಯ ಏರಿಕೆಯಾಗಿದ್ದು, ಒಂದೇ ದಿನದಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆ ಗ್ರಾಮ್‌ಗೆ 560 ರೂಪಾಯಿ ಹೆಚ್ಚಳವಾಗಿದೆ. ಇದೇ ರೀತಿ, 22 ಕ್ಯಾರೆಟ್ ಚಿನ್ನದ ಬೆಲೆಯೂ 475 ರೂಪಾಯಿ ಏರಿಕೆ ಕಂಡಿದೆ. ಈ ಏರಿಕೆಯಿಂದ ಚಿನ್ನದ ಖರೀದಿಗೆಂದು ಕಾಯುತ್ತಿದ್ದ ಗ್ರಾಹಕರಿಗೆ ಭಾರೀ ಹೊಡೆತ ಬಿದ್ದಂತಾಗಿದೆ.
1 ಗ್ರಾಂ 24 ಕ್ಯಾರೆಟ್ ಚಿನ್ನ: 11,480 ರೂಪಾಯಿ (ನಿನ್ನೆ 10,920 ರೂಪಾಯಿ)
1 ಗ್ರಾಂ 22 ಕ್ಯಾರೆಟ್ ಚಿನ್ನ: 10,410 ರೂಪಾಯಿ (ನಿನ್ನೆ 9,935 ರೂಪಾಯಿ)
10 ಗ್ರಾಂ 22 ಕ್ಯಾರೆಟ್ ಚಿನ್ನ: 1,04,100 ರೂಪಾಯಿ
ಚಿನ್ನದ ಬೆಲೆಯ ಏರಿಕೆಗೆ ಜಾಗತಿಕ ಮಾರುಕಟ್ಟೆಯ ಏರಿಳಿತಗಳು, ರೂಪಾಯಿಯ ಮೌಲ್ಯದ ಕುಸಿತ ಹಾಗೂ ಆರ್ಥಿಕ ಅನಿಶ್ಚಿತತೆಯಿಂದಾಗಿ ಚಿನ್ನದ ಬೇಡಿಕೆಯ ಏರಿಕೆಯೇ ಕಾರಣ ಎಂದು ತಜ್ಞರು ತಿಳಿಸಿದ್ದಾರೆ. ಇದರ ಜೊತೆಗೆ, ಮದುವೆ-ಮುಂಜಿಗಳ ಸೀಸನ್ ಸಮೀಪಿಸುತ್ತಿರುವುದರಿಂದ ಚಿನ್ನದ ಖರೀದಿಯ ಒತ್ತಡವೂ ಹೆಚ್ಚಾಗಿದೆ.

ಸಂಗ್ರಹ ಚಿತ್ರ
“ಚಿನ್ನದ ಬೆಲೆ ದಿನದಿಂದ ದಿನಕ್ಕೆ ಏರುತ್ತಿದೆ. ಈಗ ಖರೀದಿಸಲು ತುಂಬಾ ಕಷ್ಟವಾಗುತ್ತಿದೆ. ಮದುವೆಗೆ ಒಂದಿಷ್ಟು ಚಿನ್ನ ಖರೀದಿಸಬೇಕೆಂದಿದ್ದೆ, ಆದರೆ ಈ ಬೆಲೆ ಏರಿಕೆಯಿಂದ ಯೋಜನೆ ಬದಲಾಯಿಸಬೇಕಾಗಬಹುದು,” ಎಂದು ಬೆಂಗಳೂರಿನ ಗ್ರಾಹಕಿಯೊಬ್ಬರು ತಮ್ಮ ಅಳಲು ತೋಡಿಕೊಂಡಿದ್ದಾರೆ.
ಚಿನ್ನದ ಬೆಲೆಯ ಏರಿಕೆ ಮುಂದುವರಿಯುವ ಸಾಧ್ಯತೆ ಇದೆ ಎಂದು ಮಾರುಕಟ್ಟೆ ತಜ್ಞರು ಎಚ್ಚರಿಕೆ ನೀಡಿದ್ದಾರೆ. ಆದ್ದರಿಂದ, ಚಿನ್ನದ ಖರೀದಿಯನ್ನು ಯೋಜಿಸುತ್ತಿರುವವರು ತಮ್ಮ ಬಜೆಟ್‌ಗೆ ತಕ್ಕಂತೆ ಶೀಘ್ರವೇ ತೀರ್ಮಾನ ಕೈಗೊಳ್ಳುವುದು ಉತ್ತಮ ಎಂದು ಸಲಹೆ ನೀಡಿದ್ದಾರೆ.
(ವರದಿ: ಕಾರ್ತಿಕ್, ನ್ಯೂಸ್18 ಕನ್ನಡ ಬೆಂಗಳೂರು)
September 09, 2025 6:07 PM IST