Last Updated:
BSF Recruitment 2025: ಭಾರತದಲ್ಲಿ ಪ್ರತಿಯೊಬ್ಬರೂ ಸರ್ಕಾರಿ ಉದ್ಯೋಗವನ್ನು ಪಡೆಯಲು ಬಯಸುತ್ತಾರೆ. ಅದಕ್ಕಾಗಿ ವರ್ಷಾನೂಗಟ್ಟಲೇ ತಮ್ಮ ವಿವಿಧ ಆಸೆ ಆಕಾಂಕ್ಷೆಗಳನ್ನು ಬಿಟ್ಟು ಬದುಕುತಿರುತ್ತಾರೆ. ಇಂತಹವರಿಗೆ ಇಲ್ಲಿದೆ ಒಂದು ಖುಷಿಯ ಸುದ್ದಿ. ಹೌದು, ಸರ್ಕಾರಿ ನೌಕ್ರಿ ಹುಡುಕುತ್ತಿರುವವರಿಗೆ, ಅದರಲ್ಲೂ ಸೈನ್ಯಕ್ಕೆ ಸೇರಬೆಕೆನ್ನುವವರಿಗೆ ಇಲ್ಲಿದೆ ಗುಡ್ ನ್ಯೂಸ್. ಹೌದು, ಗಡಿ ಭದ್ರತಾ ಪಡೆ ಅಂದರೆ ಬಿಎಸ್ಎಫ್ನಲ್ಲಿ ಸಾವಿರಾರು ನೇಮಕಾತಿಗಳು ಹೊರಬಂದಿದ್ದು, ಹಾಗಾಗಿ, ದೇಶದ ರಕ್ಷಣೆಗೆ ಕೊಡುಗೆ ನೀಡಲು ನೀವು ಅವಕಾಶವನ್ನು ಪಡೆಯಲು ಬಯಸಿದರೆ ಅರ್ಜಿ ಸಲ್ಲಿಸಬಹುದಾಗಿದೆ.

ದೇಶದ ಗಡಿಗಳಲ್ಲಿ ನಿಯೋಜನೆಗೊಂಡಿರುವ ಸೈನಿಕರು ಕೇವಲ ಸಮವಸ್ತ್ರ ಧರಿಸುವುದಿಲ್ಲ, ಅವರು ಭಾರತದ ಭದ್ರತೆ ಮತ್ತು ಗೌರವದ ಗುರಾಣಿಯಾಗಿ ನಿಲ್ಲುತ್ತಾರೆ. ನೀವು ಸಹ ನಿಮ್ಮ ಹೃದಯದಲ್ಲಿ ದೇಶಕ್ಕೆ ಸೇವೆ ಸಲ್ಲಿಸುವ ಕನಸನ್ನು ಹೊಂದಿದ್ದರೆ ಮತ್ತು ಸಮವಸ್ತ್ರ ಧರಿಸಿ ಮಾತೃಭೂಮಿಯನ್ನು ರಕ್ಷಿಸಲು ಬಯಸಿದರೆ, ಈ ಅವಕಾಶ ನಿಮಗಾಗಿ. ಗಡಿ ಭದ್ರತಾ ಪಡೆ (ಬಿಎಸ್ಎಫ್) ಹೆಡ್ ಕಾನ್ಸ್ಟೇಬಲ್ (ರೇಡಿಯೋ ಆಪರೇಟರ್) ಮತ್ತು ಹೆಡ್ ಕಾನ್ಸ್ಟೇಬಲ್ (ರೇಡಿಯೋ ಮೆಕ್ಯಾನಿಕ್) ಒಟ್ಟು 1121 ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಿದೆ. ಈ ನೇಮಕಾತಿಯು ಉದ್ಯೋಗಾವಕಾಶ ಮಾತ್ರವಲ್ಲದೆ ಸಮವಸ್ತ್ರದಲ್ಲಿ ಸೇವೆ ಸಲ್ಲಿಸುವ ಹೆಮ್ಮೆಯನ್ನು ನೀಡುತ್ತದೆ.
ಅಧಿಕೃತ ಪ್ರಕಟಣೆಯ ಪ್ರಕಾರ, 910 ಹುದ್ದೆಗಳು ಹೆಡ್ ಕಾನ್ಸ್ಟೇಬಲ್ (ರೇಡಿಯೋ ಆಪರೇಟರ್) ಮತ್ತು 211 ಹುದ್ದೆಗಳು ಹೆಡ್ ಕಾನ್ಸ್ಟೇಬಲ್ (ರೇಡಿಯೋ ಮೆಕ್ಯಾನಿಕ್) ಹುದ್ದೆಗಳಾಗಿವೆ.
ರೇಡಿಯೋ ಆಪರೇಟರ್ ಹುದ್ದೆಗೆ 12ನೇ ತರಗತಿಯಲ್ಲಿ ಭೌತಶಾಸ್ತ್ರ, ರಸಾಯನಶಾಸ್ತ್ರ ಮತ್ತು ಗಣಿತ ವಿಷಯಗಳೊಂದಿಗೆ ಕನಿಷ್ಠ 60% ಅಂಕಗಳನ್ನು ಪಡೆದಿರಬೇಕು. ರೇಡಿಯೋ ಮೆಕ್ಯಾನಿಕ್ ಹುದ್ದೆಗೆ 10ನೇ ತರಗತಿ ಉತ್ತೀರ್ಣ ಮತ್ತು ಸಂಬಂಧಿತ ವ್ಯಾಪಾರದಲ್ಲಿ ಐಟಿಐ ಪ್ರಮಾಣಪತ್ರ ಕಡ್ಡಾಯವಾಗಿದೆ. ಅಭ್ಯರ್ಥಿಗಳು 18 ರಿಂದ 25 ವರ್ಷ ವಯಸ್ಸಿನವರಾಗಿರಬೇಕು. ಕಾಯ್ದಿರಿಸಿದ ವರ್ಗಕ್ಕೆ ನಿಯಮಗಳ ಪ್ರಕಾರ ಸಡಿಲಿಕೆ ನೀಡಲಾಗುತ್ತದೆ. 23 ಸೆಪ್ಟೆಂಬರ್ 2025 ರ ಆಧಾರದ ಮೇಲೆ ವಯಸ್ಸನ್ನು ಲೆಕ್ಕಹಾಕಲಾಗುತ್ತದೆ.
ತಿಂಗಳಿಗೆ 25,500 ರಿಂದ 81,100 ರೂ. ವೇತನ.
ಅರ್ಜಿ ಸಲ್ಲಿಸುವ ಪ್ರಾರಂಭ ದಿನಾಂಕ: 24 ಆಗೆಸ್ಟ್ 2025
ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ: 23 ಸೆಪ್ಪೆಂಬರ್ 2025
ಅರ್ಜಿ ಪ್ರಕ್ರಿಯೆ:
- ಅಧಿಕೃತ ವೆಬ್ಸೈಟ್ bsf.gov.in ಗೆ ಭೇಟಿ ನೀಡಿ.
- “BSF ಹೆಡ್ ಕಾನ್ಸ್ಟೇಬಲ್ RO/RM ನೇಮಕಾತಿ 2025” ಲಿಂಕ್ ಮೇಲೆ ಕ್ಲಿಕ್ ಮಾಡಿ.
- ನೋಂದಾಯಿಸಿ, ಲಾಗಿನ್ ಮಾಡಿ ಮತ್ತು ಫಾರ್ಮ್ ಅನ್ನು ಭರ್ತಿ ಮಾಡಿ.
- ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಿ, ಶುಲ್ಕವನ್ನು ಪಾವತಿಸಿ ಮತ್ತು ಫಾರ್ಮ್ ಅನ್ನು ಸಲ್ಲಿಸಿ.
- ಪ್ರಿಂಟ್ ಔಟ್ ಅನ್ನು ಸುರಕ್ಷಿತವಾಗಿ ಇರಿಸಿ.
ಆಯ್ಕೆ ಪ್ರಕ್ರಿಯೆಯು ಲಿಖಿತ ಪರೀಕ್ಷೆಯನ್ನು ಒಳಗೊಂಡಿರುತ್ತದೆ, ನಂತರ ದೈಹಿಕ ದಕ್ಷತೆ ಪರೀಕ್ಷೆ (PET), ದೈಹಿಕ ಮಾಪನ ಪರೀಕ್ಷೆ (PST), ದಾಖಲೆ ಪರಿಶೀಲನೆ ಮತ್ತು ವೈದ್ಯಕೀಯ ಪರೀಕ್ಷೆಯನ್ನು ನಡೆಸಲಾಗುತ್ತದೆ.
ಹಾಗಾಗಿ, ದೇಶವನ್ನು ರಕ್ಷಿಸಲು ಗಡಿಯಲ್ಲಿ ಹೆಜ್ಜೆ ಹಾಕಲು ಬಯಸುವ ಮತ್ತು ತಮ್ಮ ತಾಂತ್ರಿಕ ಕೌಶಲ್ಯಗಳನ್ನು ರಾಷ್ಟ್ರೀಯ ಸೇವೆಯಲ್ಲಿ ಬಳಸಲು ಬಯಸುವ ಯುವಕರಿಗೆ ಈ ನೇಮಕಾತಿ ಒಂದು ಸುವರ್ಣಾವಕಾಶವಾಗಿದೆ.
New Delhi,Delhi
August 18, 2025 9:50 PM IST