USPC: ಇಂಜಿನಿಯರಿಂಗ್​ ಸೇವಾ ಪರೀಕ್ಷೆ ಮುಂದೂಡಿದ ಯುಪಿಎಸ್​ಸಿ: ನವೆಂಬರ್​ 22ರವರೆಗೂ ಅವಕಾಶ!

Upsc exam 2024 10 ff0041fab33d30832414082ab8b90997 3x2.jpg


ಈ ನೇಮಕಾತಿ ಅಭಿಯಾನದ ಮೂಲಕ ಕೇಂದ್ರ ಲೋಕ ಸೇವಾ ಆಯೋಗವು ಸಂಸ್ಥೆಯಲ್ಲಿ ಒಟ್ಟು 232 ಹುದ್ದೆಗಳನ್ನು ಭರ್ತಿ ಮಾಡುವ ಗುರಿ ಹೊಂದಿದ್ದು, ಹೊಸ ಅಧಿಸೂಚನೆಯ ಪೂರ್ವಭಾವಿ ಪರೀಕ್ಷೆಯು ಜೂನ್ 8, 2025 ರಂದು ಮತ್ತು ಮುಖ್ಯ ಪರೀಕ್ಷೆಯು ಆಗಸ್ಟ್ 10, 2025 ರಂದು ನಡೆಯಲಿದೆ.

ಇಂಜಿನಿಯರಿಂಗ್ ಸೇವೆಯೊಂದಿಗೆ ರೈಲ್ವೆ ನಿರ್ವಹಣಾ ಸೇವೆ ಏಕೀಕರಣ

ಇಂಜಿನಿಯರಿಂಗ್ ಸೇವೆಗಳ ನೇಮಕಾತಿಗಾಗಿ 2024ರ ಸೆಪ್ಟೆಂಬರ್ 18ರಂದು ಅಧಿಸೂಚನೆ ಹೊರಡಿಸಲಾಗಿ, ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ 2024ರ ಅಕ್ಟೋಬರ್ 8 ಆಗಿತ್ತು. ಈ ಅಧಿಸೂಚನೆ ಅನುಸಾರ ಇಂಜಿನಿಯರಿಂಗ್ ಸೇವೆಗಳ ಪೂರ್ವಭಾವಿ ಪರೀಕ್ಷೆಯನ್ನು ಫೆ. 9 2025ಕ್ಕೆ ನಡೆಸಲು ನಿರ್ಧರಿಸಲಾಗಿತ್ತು. ಆದರೆ, 2019ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟದಲ್ಲಿ ರೈಲ್ವೆಯ ಎಂಟು ಗ್ರೂಪ್ ಎ ಸೇವೆಗಳನ್ನು ಕೇಂದ್ರ ಸೇವೆಯಾಗಿ ಏಕೀಕರಿಸಲು ಅನುಮೋದಿಸಿತು.

ಇದನ್ನೂ ಓದಿ: ಡಿಗ್ರಿ ಆದವರಿಗೆ ಗುಡ್ ನ್ಯೂಸ್, ಕೇಂದ್ರ ಸರ್ಕಾರದಿಂದ ದೊಡ್ಡ ಕಂಪನಿಯಲ್ಲಿ ಕೆಲಸ ಮಾಡೋ ಅವಕಾಶ!

ಇದರ ನಂತರ ಭಾರತೀಯ ರೈಲ್ವೆ ನಿರ್ವಹಣಾ ಸೇವೆಗೆ ನೇಮಕಾತಿಯನ್ನು ನಾಗರಿಕ ಸೇವೆಗಳ ಪರೀಕ್ಷೆಗಳು (ಟ್ರಾಫಿಕ್, ಅಕೌಂಟ್ಸ್ ಮತ್ತು ಪರ್ಸನಲ್ ಸಬ್-ಕೇಡರ್‌ಗಳಿಗೆ) ಮತ್ತು ಇಂಜಿನಿಯರಿಂಗ್ ಸೇವೆ (ಸಿವಿಲ್, ಎಲೆಕ್ಟ್ರಿಕಲ್, ಮೆಕ್ಯಾನಿಕಲ್, ಸಿಗ್ನಲ್ ಮತ್ತು ಟೆಲಿಕಮ್ಯುನಿಕೇಶನ್‌ಗಾಗಿ) ಮಾಡಲಾಗುತ್ತದೆ ಎಂದು ಸರ್ಕಾರ ನಿರ್ಧರಿಸಿತ್ತು. ಇದರ ಅನುಸಾರ 2024ರ ಅಕ್ಟೋಬರ್ 9ರಂದು ಭಾರತೀಯ ರೈಲ್ವೆ ನಿರ್ವಹಣಾ ಸೇವೆ (ತಿದ್ದುಪಡಿ) ನಿಯಮಗಳು, 2024 ಅನ್ನು ರೈಲ್ವೆ ಸಚಿವಾಲಯವೂ ಸೂಚಿಸಿದೆ.

ಇದರ ಅನುಸಾರ ಇಎಸ್​ಇ ಮೂಲಕವೇ ಐಆರ್​ಎಂಎಸ್​ (ಸಿವಿಲ್​), ಐಆರ್​ಎಂಎಸ್​) ಸ್ಟೋರ್ಸ್​, ಐಆರ್​ಎಂಎಸ್​ (ಮೆಕಾನಿಕಲ್​), ಐಆರ್​ಎಂಎಸ್​ (ಸಿಗ್ನಲ್​ ಅಂಡ್​ ಟೆಲಿಕಮ್ಯುನಿಕೇಶನ್​) ಅನ್ನು ನಡೆಸಲಾಗುವುದು. ಈ ಐಆರ್​ಎಂಎಸ್​ ಹುದ್ದೆಗಳನ್ನು ಇಎಸ್​ಇ- 2025ರಲ್ಲಿ ಸೇರಿಸುವ ಸರ್ಕಾರದ ನಿರ್ಧಾರ ಗಮನಲ್ಲಿರಿಸಿಕೊಂಡು ಇದೀಗ ಇಎಸ್​ಇಗೆ ಹೊರಡಿಸಲಾಗಿದ್ದ ಅರ್ಜಿಯ ತಿದ್ದುಪಡಿ ವಿಂಡೋವನ್ನು ಕೂಡ ತೆರೆಯಲಾಗಿದೆ.

UPSC ESE 2025: ಅನ್ವಯಿಸಲು ಕ್ರಮಗಳು

ಹಂತ 1: upsc.gov.in ನಲ್ಲಿ ಅಧಿಕೃತ UPSC ವೆಬ್‌ಸೈಟ್‌ಗೆ ಹೋಗಿ.

ಹಂತ 2: ಮುಖಪುಟದಲ್ಲಿ, ಸಕ್ರಿಯ ಪರೀಕ್ಷೆಯ ಲಿಂಕ್ ಅನ್ನು ನೋಡಿ ಮತ್ತು ಕ್ಲಿಕ್ ಮಾಡಿ. ನಂತರ ಒಂದು ಪಟ್ಟಿ ತೆರೆಯುತ್ತದೆ.

ಹಂತ 3: ಅದನ್ನು ಅನುಸರಿಸಿ ESE 2025 ಪರೀಕ್ಷೆಯ ಲಿಂಕ್ ಮೇಲೆ ಕ್ಲಿಕ್ ಮಾಡಿ. ಹೊಸ ಪುಟ ತೆರೆದುಕೊಳ್ಳುತ್ತದೆ.

ಹಂತ 4: ಅಭ್ಯರ್ಥಿಗಳು ತಮ್ಮನ್ನು ಮೊದಲು ಪೋರ್ಟಲ್‌ನಲ್ಲಿ ನೋಂದಾಯಿಸಿಕೊಳ್ಳಬೇಕು.

ಹಂತ 5: ಒಮ್ಮೆ ಮಾಡಿದ ನಂತರ, ಖಾತೆಗೆ ಲಾಗ್ ಇನ್ ಮಾಡಿ ಮತ್ತು ಅರ್ಜಿ ನಮೂನೆಯನ್ನು ಭರ್ತಿ ಮಾಡಿ.

ಹಂತ 6: ಪರೀಕ್ಷಾ ಶುಲ್ಕವನ್ನು ಪಾವತಿಸಿ.

ಹಂತ 7: ಎಲ್ಲಾ ವಿವರಗಳನ್ನು ಕ್ರಾಸ್-ಚೆಕ್ ಮಾಡಿ ಮತ್ತು ಫಾರ್ಮ್ ಅನ್ನು ಸಲ್ಲಿಸಿ.



Source link

Leave a Reply

Your email address will not be published. Required fields are marked *

TOP