KSET-2025 ಅರ್ಹತೆ ಪಡೆದ ಅಭ್ಯರ್ಥಿಗಳಿಗೆ ಕರ್ನಾಟಕದ ಸರ್ಕಾರಿ ಮತ್ತು ಖಾಸಗಿ ವಿಶ್ವವಿದ್ಯಾಲಯಗಳು, ಮಹಾವಿದ್ಯಾಲಯಗಳು ಹಾಗೂ ಇತರೆ ಶಿಕ್ಷಣ ಸಂಸ್ಥೆಗಳಲ್ಲಿ ಸಹಾಯಕ ಪ್ರಾಧ್ಯಾಪಕರ ಹುದ್ದೆಗೆ ಅರ್ಜಿ ಸಲ್ಲಿಸಲು ಅವಕಾಶ ಸಿಗಲಿದೆ. ಪರೀಕ್ಷೆಯಲ್ಲಿ ಯಶಸ್ವಿಯಾಗುವುದು ಅಕಾಡೆಮಿಕ್ ವೃತ್ತಿಜೀವನಕ್ಕೆ ಪ್ರಮುಖ ಹೆಜ್ಜೆಯಾಗಲಿದೆ.
KSET-2025ಗೆ ಆನ್ಲೈನ್ ಅರ್ಜಿ ಪ್ರಕ್ರಿಯೆ 28 ಆಗಸ್ಟ್ 2025ರಿಂದ ಆರಂಭವಾಗಿದ್ದು, 18 ಸೆಪ್ಟೆಂಬರ್ 2025ರವರೆಗೆ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನಾಂಕ 19 ಸೆಪ್ಟೆಂಬರ್ 2025. ಅರ್ಜಿ ಪ್ರಕ್ರಿಯೆ ಸಂಪೂರ್ಣವಾಗಿ ಆನ್ಲೈನ್ ಮೂಲಕ ನಡೆಯಲಿದ್ದು, ಅಭ್ಯರ್ಥಿಗಳು KEA ಅಧಿಕೃತ ವೆಬ್ಸೈಟ್ನಲ್ಲಿ ಅರ್ಜಿ ಸಲ್ಲಿಸಬೇಕು.
KSET-2025 ಪರೀಕ್ಷೆಯನ್ನು 2 ನವೆಂಬರ್ 2025ರಂದು ರಾಜ್ಯದ ವಿವಿಧ ಕೇಂದ್ರಗಳಲ್ಲಿ ನಡೆಸಲಾಗುತ್ತದೆ. ಪರೀಕ್ಷೆಗೆ ಸಂಬಂಧಿಸಿದ ಅಡ್ಮಿಟ್ ಕಾರ್ಡ್ಗಳನ್ನು 24 ಅಕ್ಟೋಬರ್ 2025ರಿಂದ KEA ವೆಬ್ಸೈಟ್ ಮೂಲಕ ಡೌನ್ಲೋಡ್ ಮಾಡಬಹುದು. ಪರೀಕ್ಷೆಗೆ ಪ್ರವೇಶ ಪಡೆಯಲು ಅಡ್ಮಿಟ್ ಕಾರ್ಡ್ ಕಡ್ಡಾಯ.
ಅರ್ಹತಾ ಮಾನದಂಡಗಳು
- ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ (Master’s Degree) ಹೊಂದಿರಬೇಕು.
- ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ ಕನಿಷ್ಠ 55% ಅಂಕಗಳು ಅಗತ್ಯ.
- ಎಸ್ಸಿ, ಎಸ್ಟಿ, ಓಬಿಸಿ, ಅಂಗವಿಕಲರು ಮತ್ತು ಟ್ರಾನ್ಸ್ಜೆಂಡರ್ ಅಭ್ಯರ್ಥಿಗಳಿಗೆ 50% ಅಂಕಗಳ ಸಡಿಲಿಕೆ.
- 1991 ಸೆಪ್ಟೆಂಬರ್ 19ರೊಳಗೆ ಸ್ನಾತಕೋತ್ತರ ಪದವಿ ಪಡೆದಿರುವ ಪಿಎಚ್ಡಿ ಅಭ್ಯರ್ಥಿಗಳಿಗೆ ಹೆಚ್ಚುವರಿ 5% ಸಡಿಲಿಕೆ ಲಭ್ಯ.
ಅರ್ಜಿ ಶುಲ್ಕ ವಿವರಗಳು
- ಸಾಮಾನ್ಯ ವರ್ಗ, Cat-IIA, IIB, IIIA, IIIB ಅಭ್ಯರ್ಥಿಗಳಿಗೆ: ರೂ. 1000
- ಎಸ್ಸಿ, ಎಸ್ಟಿ, ಕ್ಯಾಟ್-I, ಅಂಗವಿಕಲರು ಮತ್ತು ಟ್ರಾನ್ಸ್ಜೆಂಡರ್ ಅಭ್ಯರ್ಥಿಗಳಿಗೆ: ರೂ. 700
ಶುಲ್ಕ ಪಾವತಿ ಆನ್ಲೈನ್ ಮೂಲಕ ಮಾತ್ರ.
ಪರೀಕ್ಷೆಯ ಮಾದರಿ: KSET-2025 ಪರೀಕ್ಷೆ ಎರಡು ಪೇಪರ್ಗಳಲ್ಲಿ ನಡೆಯಲಿದೆ:
- ಪೇಪರ್-I: 50 ಪ್ರಶ್ನೆಗಳು, 100 ಅಂಕಗಳು, ಅವಧಿ 1 ಗಂಟೆ
- ಪೇಪರ್-II: 100 ಪ್ರಶ್ನೆಗಳು, 200 ಅಂಕಗಳು, ಅವಧಿ 2 ಗಂಟೆಗಳು; ಇಲ್ಲಿ ಪ್ರಶ್ನೆಗಳು ಬಹು ಆಯ್ಕೆ ಮಾದರಿಯಲ್ಲಿರುತ್ತವೆ (Objective Type).
ವಾಣಿಜ್ಯ ಶಾಸ್ತ್ರ, ಕನ್ನಡ, ಅರ್ಥಶಾಸ್ತ್ರ, ಇಂಗ್ಲಿಷ್, ರಾಜ್ಯಶಾಸ್ತ್ರ, ಇತಿಹಾಸ, ಸಮಾಜಶಾಸ್ತ್ರ, ಭೂಗೋಳಶಾಸ್ತ್ರ, ಹಿಂದಿ, ನಿರ್ವಹಣಾ ಶಾಸ್ತ್ರ (ಮ್ಯಾನೇಜ್ಮೆಂಟ್), ಪ್ರವಾಸೋದ್ಯಮ ಆಡಳಿತ ಮತ್ತು ನಿರ್ವಹಣೆ, ಶಿಕ್ಷಣ, ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ, ಸಾಮೂಹ ಸಂವಹನ ಮತ್ತು ಪತ್ರಿಕೋದ್ಯಮ, ಮನೋವಿಜ್ಞಾನ, ಸಾಮಾಜಿಕ ಕೆಲಸ, ಅಪರಾಧಶಾಸ್ತ್ರ, ಕಾನೂನು, ಸಂಸ್ಕೃತ, ದೈಹಿಕ ಶಿಕ್ಷಣ, ಜನಪದ ಸಾಹಿತ್ಯ, ಉರ್ದು, ಸಾರ್ವಜನಿಕ ಆಡಳಿತ, ಕಂಪ್ಯೂಟರ್ ವಿಜ್ಞಾನ ಮತ್ತು ಅನ್ವಯಿಕೆಗಳು, ಭೌತಶಾಸ್ತ್ರ, ಗಣಿತಶಾಸ್ತ್ರ, ರಸಾಯನಶಾಸ್ತ್ರ, ಜೀವಶಾಸ್ತ್ರ, ಪರಿಸರ ವಿಜ್ಞಾನ, ಗೃಹಶಾಸ್ತ್ರ, ಎಲೆಕ್ಟ್ರಾನಿಕ್ ವಿಜ್ಞಾನ, ಭೂ ವಿಜ್ಞಾನ, ಪುರಾತತ್ತ್ವ ಶಾಸ್ತ್ರ, ಮಾನವಶಾಸ್ತ್ರ, ಮರಾಠಿ, ತತ್ವಶಾಸ್ತ್ರ, ಮಹಿಳಾ ಅಧ್ಯಯನ, ಭಾಷಾಶಾಸ್ತ್ರ, ಪ್ರದರ್ಶನಕಲೆ, ಸಂಗೀತ, ದೃಶ್ಯಕಲೆ,
ಅರ್ಜಿ ಸಲ್ಲಿಸುವ ವಿಧಾನ
- KEA ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ.
- KSET-2025 ಅರ್ಜಿ ಲಿಂಕ್ ಮೇಲೆ ಕ್ಲಿಕ್ ಮಾಡಿ.
- ಹೊಸ ಬಳಕೆದಾರರಾಗಿ ನೋಂದಣಿ ಮಾಡಿ ಅಥವಾ ಲಾಗಿನ್ ಆಗಿ.
- ಅರ್ಜಿ ನಮೂನೆಯನ್ನು ಸರಿಯಾಗಿ ಭರ್ತಿ ಮಾಡಿ.
- ಅಗತ್ಯ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಿ.
- ಅರ್ಜಿ ಶುಲ್ಕವನ್ನು ಆನ್ಲೈನ್ ಮೂಲಕ ಪಾವತಿಸಿ.
- ಅರ್ಜಿ ಸಲ್ಲಿಸಿದ ನಂತರ ಪ್ರಿಂಟ್ಔಟ್ವನ್ನು ಸಂಗ್ರಹಿಸಿಕೊಳ್ಳಿ.
ಗಮನಿಸಿ: ಹಿಂದಿನ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ನಿಯಮ
ಹಿಂದಿನ KSET ಪರೀಕ್ಷೆಯಲ್ಲಿ ಅರ್ಹತೆ ಪಡೆದವರು ಅದೇ ವಿಷಯಕ್ಕೆ ಪುನಃ ಅರ್ಜಿ ಸಲ್ಲಿಸಲು ಅವಕಾಶವಿಲ್ಲ. ಹೊಸ ವಿಷಯವನ್ನು ಆಯ್ಕೆ ಮಾಡಿದಲ್ಲಿ ಮಾತ್ರ ಅರ್ಜಿ ಸಲ್ಲಿಸಬಹುದು.
- ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 18 ಸೆಪ್ಟೆಂಬರ್ 2025
- ನೇಮಕಾತಿಯ ಅಧಿಸೂಚನೆ: ಅಧಿಸೂಚನೆ
Bangalore,Karnataka
September 01, 2025 5:06 PM IST