Last Updated:
IOCL Recruitment 2025: ಭಾರತದ ಅತಿದೊಡ್ಡ ತೈಲ ಮತ್ತು ಅನಿಲ ಕಂಪನಿಗಳಲ್ಲಿ ಒಂದಾದ ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ (IOCL) 2025ರ ಸಾಲಿಗೆ ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದ ವಿವಿಧ ರಾಜ್ಯಗಳಲ್ಲಿ 475 ಅಪ್ರೆಂಟಿಸ್ ಹುದ್ದೆಗಳಿಗೆ ನೇಮಕಾತಿ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ.
IOCL Recruitment 2025: ಭಾರತದ ಅತಿದೊಡ್ಡ ತೈಲ ಮತ್ತು ಅನಿಲ ಕಂಪನಿಗಳಲ್ಲಿ ಒಂದಾದ ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ (Indian Oil Corporation Limited) 2025ರ ಸಾಲಿಗೆ ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದ ವಿವಿಧ ರಾಜ್ಯಗಳಲ್ಲಿ 475 ಅಪ್ರೆಂಟಿಸ್ ಹುದ್ದೆಗಳಿಗೆ ನೇಮಕಾತಿ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಈ ಅವಕಾಶವು ಶಿಕ್ಷಣ ಪೂರ್ಣಗೊಳಿಸಿದ ಯುವಕರಿಗೆ ಉದ್ಯಮದಲ್ಲಿ ಪ್ರಾಯೋಗಿಕ ತರಬೇತಿಯನ್ನು ಪಡೆಯಲು ಉತ್ತಮ ವೇದಿಕೆಯನ್ನು ಒದಗಿಸುತ್ತದೆ. ಹಾಗಾಗಿ, IOCL ಅಪ್ರೆಂಟಿಸ್ ನೇಮಕಾತಿಯ (Apprentice Recruitment) ಸಂಪೂರ್ಣ ವಿವರ ಇಲ್ಲಿದೆ:
IOCL ದಕ್ಷಿಣ ಭಾರತದ ರಾಜ್ಯಗಳಾದ ತಮಿಳುನಾಡು, ಕರ್ನಾಟಕ, ಕೇರಳ, ಪುದುಚೇರಿ, ಆಂಧ್ರಪ್ರದೇಶ, ಮತ್ತು ತೆಲಂಗಾಣದಲ್ಲಿ ಈ ಹುದ್ದೆಗಳನ್ನು ಭರ್ತಿ ಮಾಡಲಿದ್ದು, ಈ ನೇಮಕಾತಿಯು ಟ್ರೇಡ್ ಅಪ್ರೆಂಟಿಸ್, ಟೆಕ್ನಿಷಿಯನ್ ಅಪ್ರೆಂಟಿಸ್, ಮತ್ತು ಗ್ರಾಜುಯೇಟ್ ಅಪ್ರೆಂಟಿಸ್ ವಿಭಾಗಗಳಿಗೆ ಸಂಬಂಧಿಸಿದೆ. ಹಾಗಾಗಿ, ತರಬೇತಿಯ ಅವಧಿ 12 ತಿಂಗಳುಗಳಾಗಿದ್ದು, ಆಸಕ್ತ ಅಭ್ಯರ್ಥಿಗಳು ಆಗಸ್ಟ್ 8, 2025 ರಿಂದ ಸೆಪ್ಟೆಂಬರ್ 5, 2025 ರವರೆಗೆ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಬಹುದು.
IOCL ಹುದ್ದೆಗಳ ವಿವರ:
- ಟ್ರೇಡ್ ಅಪ್ರೆಂಟಿಸ್ 80
- ತಂತ್ರಜ್ಞ ಅಪ್ರೆಂಟಿಸ್ 95
- ಪದವೀಧರ ಅಪ್ರೆಂಟಿಸ್ 300
- ಒಟ್ಟು: 475
ರಾಜ್ಯವಾರು ಖಾಲಿ ಹುದ್ದೆಯ ವಿವರಗಳು
- ತಮಿಳುನಾಡು ಮತ್ತು ಪುದುಚೇರಿ-120
- ಕರ್ನಾಟಕ-50
- ಕೇರಳ-115
- ಆಂಧ್ರ ಪ್ರದೇಶ-95
- ತೆಲಂಗಾಣ-95
IOCL ನೇಮಕಾತಿ 2025 ವಯಸ್ಸಿನ ಮಿತಿ (31-08-2025 ರಂತೆ)
- ಕನಿಷ್ಠ ವಯಸ್ಸಿನ ಮಿತಿ: 18 ವರ್ಷಗಳು
- ಗರಿಷ್ಠ ವಯಸ್ಸಿನ ಮಿತಿ: 24 ವರ್ಷಗಳು
- ನಿಯಮಾನುಸಾರ ವಯೋಮಿತಿ ಸಡಿಲಿಕೆ: ಒಬಿಸಿ-ಎನ್ಸಿಎಲ್ ಅಭ್ಯರ್ಥಿಗಳು: 03 ವರ್ಷಗಳು, SC/ST ಅಭ್ಯರ್ಥಿಗಳು: 05 ವರ್ಷಗಳು, ಪಿಡಬ್ಲ್ಯೂಬಿಡಿ (ಯುಆರ್) ಅಭ್ಯರ್ಥಿಗಳು: 10 ವರ್ಷಗಳು, ಪಿಡಬ್ಲ್ಯೂಬಿಡಿ (ಒಬಿಸಿ-ಎನ್ಸಿಎಲ್) ಅಭ್ಯರ್ಥಿಗಳು: 13 ವರ್ಷಗಳು, ಪಿಡಬ್ಲ್ಯೂಬಿಡಿ (ಎಸ್ಸಿ/ಎಸ್ಟಿ) ಅಭ್ಯರ್ಥಿಗಳು: 15 ವರ್ಷಗಳು.
ಪ್ರಮುಖ ದಿನಾಂಕಗಳು:
- ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ: 08-08-2025 ರಂದು ಬೆಳಿಗ್ಗೆ 10:00 ಗಂಟೆಗೆ
- ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 05-09-2025 ರಂದು 3:59 ಗಂಟೆಗೆ
ಅರ್ಹತೆ:
- ಟ್ರೇಡ್ ಅಪ್ರೆಂಟಿಸ್: 10ನೇ ತರಗತಿ + 2 ವರ್ಷದ ITI (NCVT/SCVT)
- ಟೆಕ್ನಿಷಿಯನ್ ಅಪ್ರೆಂಟಿಸ್: 3 ವರ್ಷದ ಡಿಪ್ಲೊಮಾ (50% ಸಾಮಾನ್ಯ/OBC/EWS, 45% SC/ST/PWD)
- ಗ್ರಾಜುಯೇಟ್ ಅಪ್ರೆಂಟಿಸ್: ಪದವಿ (BA/BCom/BSc/BBA/BCA, 50% ಸಾಮಾನ್ಯ/OBC/EWS, 45% SC/ST/PWD)
ಸಂಬಳ ಎಷ್ಟ್ರು…?
- ಗ್ರಾಜುಯೇಟ್ ಅಪ್ರೆಂಟಿಸ್: 9,000 ರೂ. (BOAT: 4,500 ರೂ., IOCL: 4,500 ರೂ.)
- ಟೆಕ್ನಿಷಿಯನ್ ಅಪ್ರೆಂಟಿಸ್: 8,000 ರೂ. (BOAT: 4,000 ರೂ., IOCL: 4,000 ರೂ.)
- ಟ್ರೇಡ್ ಅಪ್ರೆಂಟಿಸ್: 7,000-9,000 ರೂ. (IOCL ಸಂಪೂರ್ಣ)
2. “ವೃತ್ತಿಜೀವನ” > “ಅಪ್ರೆಂಟಿಸ್ಶಿಪ್ಗಳು” ಆಯ್ಕೆಮಾಡಿ
3. “IOCL ಅಪ್ರೆಂಟಿಸ್ 2025 – ದಕ್ಷಿಣ ಪ್ರದೇಶ” ಓದಿ
4. “ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಿ” ಕ್ಲಿಕ್ ಮಾಡಿ
5. ದಾಖಲೆಗಳನ್ನು ಅಪ್ಲೋಡ್ ಮಾಡಿ
6. ಫಾರ್ಮ್ ಸಲ್ಲಿಸಿ, ಪ್ರತಿಯನ್ನು ಉಳಿಸಿ
ಆಯ್ಕೆ ಪ್ರಕ್ರಿಯೆಯಲ್ಲಿ ಲಿಖಿತ ಪರೀಕ್ಷೆ ಅಥವಾ ಸಂದರ್ಶನವಿಲ್ಲ. ಶೈಕ್ಷಣಿಕ ಅಂಕಗಳ ಆಧಾರದ ಮೇಲೆ ಮೆರಿಟ್ ಪಟ್ಟಿಯನ್ನು ರಚಿಸಲಾಗುವುದು. ಆಯ್ಕೆಯಾದವರು ಮೂಲ ದಾಖಲೆಗಳನ್ನು ತೋರಿಸಬೇಕು ಮತ್ತು ವೈದ್ಯಕೀಯ ಪರೀಕ್ಷೆಯನ್ನು ಪೂರ್ಣಗೊಳಿಸಬೇಕು. ಯಾವುದೇ ವರ್ಗಕ್ಕೆ ಶುಲ್ಕವಿಲ್ಲ. ತದ ನಂತರ ಮೆರಿಟ್ ಪಟ್ಟಿಯನ್ನು ಅಧಿಕೃತ ವೆಬ್ಸೈಟ್ನಲ್ಲಿ ನಂತರ ಪ್ರಕಟಿಸಲಾಗುವುದು.
August 13, 2025 6:51 PM IST