Last Updated:
ಹಲವಾರು ತಿಂಗಳ ಕಾಲ ಇವರು ತಿರಸ್ಕಾರದ ಮೇಲೆ ತಿರಸ್ಕಾರ ಅನುಭವಿಸಿದ, 500ಕ್ಕೂ ಅರ್ಜಿಗಳಲ್ಲಿ ಕೇವಲ ಕೇವಲ ಒಂದು ಕರೆ ಬಂದಿತು ಹಾಗೂ ಅವರು ಅದನ್ನು ಪಾಸ್ ಕೂಡ ಮಾಡಿದ್ದಾಗಿ ಬರೆದುಕೊಂಡಿದ್ದಾರೆ. ಈ ಕೆಲಸ ಅವರ ಜೀವನವನ್ನು ಬದಲಾಯಿಸಿತು. ಓಪನ್‌ಎಐ-ಸಂಬಂಧಿತ ಪ್ರಾಜೆಕ್ಟ್ ಅವರಿಗೆ ಜಾಗತಿಕ ಮಾನ್ಯತೆ, ಆರ್ಥಿಕ ಸ್ವಾತಂತ್ರ್ಯ ಮತ್ತು ದೊಡ್ಡ ಕನಸು ಕಾಣುವ ವಿಶ್ವಾಸವನ್ನು ನೀಡಿತು.
ಇಂದು ಹೆಚ್ಚಿನವರು ಉದ್ಯೋಗ (Jobs) ಬೇಟೆಯಲ್ಲಿ ಸೋತು ಸುಣ್ಣವಾಗುತ್ತಿದ್ದಾರೆ. ಸಂಬಳ, ವಿದ್ಯಾರ್ಹತೆ, ಕೆಲಸದ ಅನುಭವ, ಪ್ರಾವೀಣ್ಯ ಹೀಗೆ ಉದ್ಯೋಗವನ್ನು ಹಲವಾರು ಅಂಶಗಳಿಂದ ಅಳೆಯಲಾಗುತ್ತಿದೆ ಹೀಗಾಗಿ ಸಾಕಷ್ಟು ಪ್ರತಿಭಾವಂತರು ಸೂಕ್ತ ಉದ್ಯೋಗ ದೊರೆಯದೆ ಕಷ್ಪಪಡುತ್ತಿದ್ದಾರೆ. ಇನ್ನು ಕೆಲವರು ಸಂಬಳ ಕಡಿಮೆಯಾದರೂ ತೊಂದರೆ ಇಲ್ಲ ಎಂದು ಇದ್ದ ಕೆಲಸವನ್ನೇ ಮಾಡುತ್ತಿದ್ದಾರೆ. ಆದರೆ ಈಶಾನ್ಯ ಭಾರತದ ಒಂದು ಸಣ್ಣ ಪಟ್ಟಣದ 23 ರ ಹರೆಯದ ಸಾಫ್ಟ್‌ವೇರ್ ಎಂಜಿನಿಯರ್ (Software Engineer) ಉದ್ಯೋಗ ನಿರಾಕರಣೆಯನ್ನೇ ವೃತ್ತಿಜೀವನದ ಪ್ರಗತಿಯನ್ನಾಗಿ ಮಾಡಿಕೊಂಡಿದ್ದಾರೆ.
ಇವರು ಬರೋಬ್ಬರಿ 500 ಕ್ಕೂ ಉದ್ಯೋಗ ನಿರಾಕರಣೆಗಳನ್ನು ಎದುರಿಸಿದರು ಆದರೂ ಕೊನೆಗೆ ತಿಂಗಳಿಗೆ 20 ಲಕ್ಷ ಪಾವತಿಯ ಓಪನ್ ಎಐ ಪ್ರಾಜೆಕ್ಟ್ ಅನ್ನು ರಿಮೋಟ್ ಆಗಿ ಕೈಗೆತ್ತಿಕೊಂಡರು. ಒಟ್ಟಿನಲ್ಲಿ ಈ ಯುವಕನ ಸಾಧನೆ ಹಲವಾರು ನಿರುದ್ಯೋಗಿಗಳಿಗೆ ಮಾರ್ಗದರ್ಶನ ನೀಡಲಿದೆ. ಉದ್ಯೋಗ ದೊರೆಯದ ಕಂಗೆಟ್ಟವರಿಗೆ ಆಶಾದೀಪವಾಗಲಿದೆ.
ಈ ಟೆಕ್ಕಿ ತಮ್ಮ ಕುಟುಂಬದಲ್ಲೇ ಕಂಪ್ಯೂಟರ್ ಸೈನ್ಸ್‌ನಲ್ಲಿ ಬಿಟೆಕ್ ಪೂರ್ಣಗೊಳಿಸಿದವರಲ್ಲಿ ಮೊದಲಿಗರಾಗಿದ್ದರು. ಶಿಕ್ಷಣದ ಬಳಿಕ ಕ್ಯಾಂಪಸ್ ಸಿಲೆಕ್ಶನ್‌ನಲ್ಲಿ ವಾರ್ಷಿಕ 3.6 ಲಕ್ಷದ ಉದ್ಯೋಗ ಇವರಿಗೆ ಆರಂಭದಲ್ಲಿ ದೊರೆಯಿತು. ಆದರೆ ಉದ್ಯೋಗವೇನೋ ದೊರಕಿತಾದರೂ ಈ ಕೆಲಸಕ್ಕಾಗಿ ಅವರು ಆಫರ್ ಲೆಟರ್‌ಗಾಗಿ 8 ತಿಂಗಳು ಕಾಯಬೇಕಾಗಿತ್ತು. ಹೀಗಾಗಿ ಕಾಯುತ್ತಾ ಯಾರು ಕೂರುತ್ತಾರೆ ಎಂದು ಇವರು ರಿಮೋಟ್ ಅಂತಾರಾಷ್ಟ್ರೀಯ ಕೆಲಸಗಳಿಗಾಗಿ 500, 600 ಅಪ್ಲಿಕೇಶನ್‌ಗಳನ್ನು ಸಲ್ಲಿಸಿದ್ದರೆಂತೆ.
ಹಲವಾರು ತಿಂಗಳ ಕಾಲ ಇವರು ನಿರಾಕರಣೆಯ ಮೇಲೆ ನಿರಾಕರಣೆ ಅನುಭವಿಸಿದ, 500ಕ್ಕೂ ಅರ್ಜಿಗಳಲ್ಲಿ ಕೇವಲ ಕೇವಲ ಒಂದು ಕರೆ ಬಂದಿತು ಹಾಗೂ ಅವರು ಅದನ್ನು ಪಾಸ್ ಕೂಡ ಮಾಡಿದ್ದಾಗಿ ಬರೆದುಕೊಂಡಿದ್ದಾರೆ. ಈ ಕೆಲಸ ಅವರ ಜೀವನವನ್ನು ಬದಲಾಯಿಸಿತು. ಓಪನ್‌ಎಐ-ಸಂಬಂಧಿತ ಪ್ರಾಜೆಕ್ಟ್ ಅವರಿಗೆ ಜಾಗತಿಕ ಮಾನ್ಯತೆ, ಆರ್ಥಿಕ ಸ್ವಾತಂತ್ರ್ಯ ಮತ್ತು ದೊಡ್ಡ ಕನಸು ಕಾಣುವ ವಿಶ್ವಾಸವನ್ನು ನೀಡಿತು.
ಈ ಪ್ರಾಜೆಕ್ಟ್‌ನಿಂದ ಅವರಿಗೆ ತಿಂಗಳಿಗೆ 20 ಲಕ್ಷ ವೇತನ ದೊರೆಯುವಂತಾಯಿತು. ತಮ್ಮ ಮೊದಲ ಕೆಲಸಕ್ಕಿಂತ ಊಹಿಸಲೂ ಆಗದ ಅತಿ ದೊಡ್ಡ ಪ್ಯಾಕೇಜ್ ಆಗಿತ್ತು. ಇದಕ್ಕಾಗಿ ಹಗಲು ರಾತ್ರಿ ಕೆಲಸ ಮಾಡಿ, ಕೇವಲ 4-5 ಗಂಟೆಗಳ ಕಾಲ ನಿದ್ರಿಸಿದ್ದಾರೆ. ಪ್ರಾಜೆಕ್ಟ್‌ಗಾಗಿ ತಮ್ಮ ಅತ್ಯುತ್ತಮವಾದುದನ್ನು ಸಮರ್ಪಿಸಿಬೇಕೆಂದುಕೊಂಡಿದ್ದಾಗಿ ತಿಳಿಸಿದ್ದಾರೆ. ಕೌಶಲ್ಯ ಮತ್ತು ಇಂಟರ್ನೆಟ್ ಸೌಲಭ್ಯವೊಂದಿದ್ದರೆ ಭೌಗೋಳಿಕತೆ ಮುಖ್ಯವಲ್ಲ ಎಂದು ರಿಮೋಟ್ ಜಾಬ್ ನನಗೆ ಖಾತ್ರಿಪಡಿಸಿತು ಎಂದು ಅವರು ಹಂಚಿಕೊಂಡಿದ್ದಾರೆ.
ಓಪನ್‌ಎಐ ಪ್ರಾಜೆಕ್ಟ್ ಆಗಸ್ಟ್‌ನಲ್ಲಿ ಮುಕ್ತಾಯಗೊಂಡಿತು, ಆದರೆ ಪ್ರಯಾಣ ಇನ್ನೂ ಮುಗಿದಿಲ್ಲ. ಕೇವಲ 23 ವರ್ಷ ವಯಸ್ಸಿನ ಈ ಎಂಜಿನಿಯರ್ ಈಗ ತಮ್ಮದೇ ಆದ ತಂತ್ರಜ್ಞಾನ ಸಂಸ್ಥೆಯನ್ನು ನಿರ್ಮಿಸುತ್ತಿದ್ದಾರೆ. ಸಾಕಷ್ಟು ಹಳ್ಳಿ, ಪಟ್ಟಣಗಳ ವಿದ್ಯಾರ್ಥಿಗಳಿಗೆ, ನಿರುದ್ಯೋಗಿಗಳಿಗೆ ಅವರು ಸಲಹೆ ನೀಡಿದ್ದು, ಉತ್ತಮವಾಗಿದೆ ಎಂಬುದಕ್ಕೆ ಮಾತ್ರ ತೃಪ್ತರಾಗಬೇಡಿ, ಎಲ್ಲೆಡೆ ಅಪ್ಲೈ ಮಾಡಿ, ಸಾರ್ಜನಿಕವಾಗಿ ನಿರ್ಮಿಸಿ, ಪಟ್ಟುಬಿಡದೆ ನೆಟ್‌ವರ್ಕ್ ಸ್ಥಾಪಿಸಿ ಎಂದಿದ್ದಾರೆ.
ಈ ಯುವಕನ ಕಥೆ ಪರಿಶ್ರಮ ಹಾಗೂ ಕೌಶಲ್ಯವಿದ್ದರೆ ಟಿಯರ್-3 ಸಿಟಿಯಿಂದ ಬಂದಿರುವ ವಿದ್ಯಾರ್ಥಿಗಳು ಸಹ ಅವಕಾಶಗಳನ್ನು ಗಿಟ್ಟಿಸಿಕೊಂಡು ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳಬಹುದು ಎಂಬುದಕ್ಕೆ ಸಾಕ್ಷಿಯಾಗಿದೆ.
September 06, 2025 10:49 PM IST