ಕೆಲವರಿಗೆ ಐಎಎಸ್, ಐಪಿಎಸ್ ಹುದ್ದೆಗಳ ಮೇಲೆ ವಿಪರೀತ ವ್ಯಾಮೋಹ. ಜೀವನ ಇವರನ್ನು ಬೇರೆ ಕೆಲಸಕ್ಕೆ ಕರೆದುಕೊಂಡು ಹೋದ್ರೂ ಕೂಡ, ಕೊನೆಗೆ ಸಿಕ್ಕ ಕೆಲಸ ಬಿಟ್ಟು, ಆದ್ರೆ ನಾನು ಐಎಎಸ್ ಅಧಿಕಾರಿಯೇ ಆಗಬೇಕು, ಐಪಿಎಸ್ ಅಧಿಕಾರಿಯೇ ಆಗಬೇಕು ಅಂತಾ ಮತ್ತೆ ತಮ್ಮ ಕನಸಿನ, ವ್ಯಾಮೋಹದ ಕೆಲಸದ ಕಡೆಯೇ ವಾಲುತ್ತಾರೆ.
ಇದಕ್ಕೆ ಉತ್ತಮ ಸಾಕ್ಷಿ ಭಾರತೀಯ ಆಡಳಿತ ಸೇವೆ (ಐಎಎಸ್) ಅಧಿಕಾರಿ ಮುದ್ರಾ ಗೈರೋಲಾ. ನಾಗರಿಕ ಸೇವಕಿಯಾಗಲು ತಮ್ಮ ವೈದ್ಯಕೀಯ ವೃತ್ತಿಯನ್ನು ಬಿಟ್ಟು ಬಂದು ತಂದೆ ಮತ್ತು ಇವರ ಕನಸಿನಂತೆ ಮುದ್ರಾ ಪ್ರಸ್ತುತ ಐಎಎಸ್ ಅಧಿಕಾರಿಯಾಗಿದ್ದಾರೆ.
ಹೌದು, ಈ ಹುದ್ದೆ ಕೇವಲ ಇವರ ಕನಸಾಗಿರಲಿಲ್ಲ, ಅವರ ತಂದೆಯ ಕನಸು ಕೂಡ ಆಗಿತ್ತು. ಇಬ್ಬರ ಕನಸನ್ನೂ ನನಸಾಗಿಸಲು ಡೆಂಟಿಸ್ಟ್ ಹುದ್ದೆ ತೊರೆದು, ಈ ಪರೀಕ್ಷೆಗೆ ಸಿದ್ಧತೆ ನಡೆಸಿ ಇಂದು ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಐಎಎಸ್ ಮುದ್ರಾ ಗೈರೋಲಾ ಮೂಲತಃ ಉತ್ತರಾಖಂಡದ ಚಮೋಲಿಯ ಕರ್ಣಪ್ರಯಾಗದವರು. ಪ್ರಸ್ತುತ ಇವರ ಕುಟುಂಬ ದೆಹಲಿಯಲ್ಲಿ ವಾಸಿಸುತ್ತಿದೆ.
ಬಾಲ್ಯದಿಂದಲೂ ಇವರು ಓದಿನಲ್ಲಿ ಚೂಟಿ. ತರಗತಿಗೆ ಯಾವಾಗಲೂ ಫಸ್ಟ್ ಬರುತ್ತಿದ್ದರು. ಮುದ್ರಾ ತನ್ನ 10 ನೇ ತರಗತಿ ಪರೀಕ್ಷೆಯಲ್ಲಿ ಶೇಕಡಾ 96 ಮತ್ತು ಹೈಯರ್ ಸೆಕೆಂಡರಿ ಶಿಕ್ಷಣದಲ್ಲಿ (ಎಚ್‌ಎಸ್‌ಇ) ಶೇಕಡಾ 97 ಅಂಕಗಳನ್ನು ಗಳಿಸಿದ್ದಾರೆ.
ಶಾಲೆ ಮುಗಿಸಿದ ನಂತರ, ಗೊಯಿರಾಲಾ ಬ್ಯಾಚುಲರ್ ಆಫ್ ಡೆಂಟಲ್ ಸರ್ಜರಿ (ಬಿಡಿಎಸ್) ಪಡೆಯಲು ಮುಂಬೈನ ವೈದ್ಯಕೀಯ ಕಾಲೇಜಿಗೆ ಸೇರಿಕೊಂಡರು, ಅಲ್ಲಿ ಈಕೆ ಗೋಲ್ಡ್ ಮೆಡಲಿಸ್ಟ್ ಆದರು.
ಪದವಿ ಪಡೆದ ನಂತರ, ಅವರು ದೆಹಲಿಗೆ ತೆರಳಿ ಮಾಸ್ಟರ್ ಆಫ್ ಡೆಂಟಲ್ ಸರ್ಜರಿ (ಎಂಡಿಎಸ್) ಕೋರ್ಸ್‌ಗೆ ಸೇರಿಕೊಂಡರು
ಮುದ್ರಾ ಅವರ ತಂದೆ ಅರುಣ್ ಗೈರೋಲಾ ಅವರಿಗೆ ಮಗಳು ಐಎಎಸ್ ಅಧಿಕಾರಿಯಾಗಬೇಕೆಂಬ ಆಸೆ ಇತ್ತು. ಅರುಣ್ ಕೂಡ ಈ ಪರೀಕ್ಷೆಯನ್ನು ಬರೆದಿದ್ದರು. 1973ರಲ್ಲಿ ಪರೀಕ್ಷೆಯಲ್ಲಿ ಅನುತ್ತೀರ್ಣರಾದರು, ಇದಾದ ನಂತರ ಇವರು ಪರೀಕ್ಷೆ ಬರೆಯಲು ಸಾಧ್ಯವಾಗಲಿಲ್ಲ.
ಹೀಗಾಗಿ ಮಗಳನ್ನಾದರೂ ಐಎಎಸ್ ಅಧಿಕಾರಿಯನ್ನಾಗಿಸಬೇಕು. ಮಗಳು ಐಎಎಸ್ ಅಧಿಕಾರಿಯಾಗುವ ಮೂಲಕ ತನ್ನ ಈಡೇರದ ಮಹತ್ವಾಕಾಂಕ್ಷೆಯನ್ನು ಈಡೇರಿಸುತ್ತಾಳೆ ಎಂದು ಆಶಿಸಿದರು.
ತನ್ನ ತಂದೆಯ ಜೀವಮಾನದ ಕನಸನ್ನು ನನಸಾಗಿಸಲು, ಮುದ್ರಾ ಗೈರೋಲಾ ತನ್ನ ಸ್ನಾತಕೋತ್ತರ ಕೋರ್ಸ್ ಅನ್ನು ಅರ್ಧದಲ್ಲೇ ತೊರೆದು ಯುಪಿಎಸ್‌ಸಿ ನಾಗರಿಕ ಸೇವೆಗಳ ಪರೀಕ್ಷೆಗೆ ತಯಾರಿ ಆರಂಭಿಸಿದರು. 2018ರಲ್ಲಿ, ಇವರು ಪರೀಕ್ಷೆಯನ್ನು ತೆಗೆದುಕೊಂಡು ಸಂದರ್ಶನ ಹಂತವನ್ನು ತಲುಪಿದರು, ಆದರೆ ಈ ಹಂತದಲ್ಲಿ ಇವರು ಉತ್ತೀರ್ಣರಾಗಿಲ್ಲ.
ಪ್ರಯತ್ನ ಬಿಡದೆ, ಮತ್ತೆ ಸಿದ್ಧತೆ ನಡೆಸಿದರು. 2019, 2020ರಲ್ಲೂ ಪರೀಕ್ಷೆಯನ್ನು ತೆಗೆದುಕೊಂಡರು, ಆದರೆ ಆಗಲೂ ಸಹ ಫೇಲ್ ಆದರು. ಹಠ ಬಿಡದೇ, 2021ರಲ್ಲಿ, ಮತ್ತೆ ಪರೀಕ್ಷೆಯನ್ನು ಪ್ರಯತ್ನಿಸಿದರು.
ಐಪಿಎಸ್ ಹುದ್ದೆ ಅದ್ಯಾಕೋ ಖುಷಿ ಕೊಟ್ಟಿಲ್ಲ. ಹೀಗಾಗಿ ಮತ್ತೆ 2022 ರಲ್ಲಿ, ಮುದ್ರಾ ಗೈರೋಲಾ ಮತ್ತೊಮ್ಮೆ ಯುಪಿಎಸ್‌ಸಿ ಪರೀಕ್ಷೆಯನ್ನು ತೆಗೆದುಕೊಂಡರು ಮತ್ತು 53 ನೇ ರ್ಯಾಂಕ್ ಗಳಿಸಿದರು.
Bangalore,Karnataka
September 11, 2025 11:04 AM IST
IAS: 3 ಸಲ ಸೋತರೂ ಛಲ ಬಿಡಲಿಲ್ಲ, ಅಪ್ಪನ ಕನಸನ್ನು ಈಡೇರಿಸಲು ವೈದ್ಯ ವೃತ್ತಿ ತೊರೆದು IAS ಅಧಿಕಾರಿಯಾದ ಮುದ್ರಾ ಗೈರೋಲಾ