12ನೇ ತರಗತಿ ಪಾಸ್ ಆದವ್ರಿಗೆ 44ಸಾವಿರ ಸಂಬಳ! ರೈಲ್ವೆ ಮಂಡಳಿಯಲ್ಲಿ ಕೆಲಸ, 434 ಸ್ಥಾನಗಳಿಗೆ ಅರ್ಜಿ ಆಹ್ವಾನ

Hruthin 2025 09 07t160713.246 2025 09 c71d7323a64cc7c2d1d536f81fdb36fb.jpg


Last Updated:

Railway Jobs: ರೈಲ್ವೆ ನೇಮಕಾತಿ ಮಂಡಳಿ RRB 2025ರಲ್ಲಿ ಪ್ರಮುಖ ಅಧಿಸೂಚನೆಯನ್ನು ಹೊರಡಿಸಿ ಒಟ್ಟು 434 ಹುದ್ದೆಗಳಿಗೆ ಅವಕಾಶ ನೀಡಿದೆ. ಈ ಹುದ್ದೆಗಳು ದೇಶದಾದ್ಯಂತ ರೈಲ್ವೆ ಇಲಾಖೆಯ ವಿವಿಧ ವಲಯಗಳಲ್ಲಿ ಅಧಿಸೂಚನೆ ಹೊರಡಿಸಿದೆ. ಹಾಗಾಗಿ, ಈ ಕುರಿತ ಸಂಪೂರ್ಣ ವಿವರ ಇಲ್ಲಿದೆ:

ರೈಲ್ವೆ ಮಂಡಳಿಯಲ್ಲಿ ಕೆಲಸರೈಲ್ವೆ ಮಂಡಳಿಯಲ್ಲಿ ಕೆಲಸ
ರೈಲ್ವೆ ಮಂಡಳಿಯಲ್ಲಿ ಕೆಲಸ

Railway Jobs: ರೈಲ್ವೆ ನೇಮಕಾತಿ ಮಂಡಳಿ (Railway Recruitment Board) RRB 2025ರಲ್ಲಿ ಪ್ರಮುಖ ಅಧಿಸೂಚನೆಯನ್ನು ಹೊರಡಿಸಿ ಒಟ್ಟು 434 ಹುದ್ದೆಗಳಿಗೆ ಅವಕಾಶ ನೀಡಿದೆ. ಈ ಹುದ್ದೆಗಳು ದೇಶದಾದ್ಯಂತ ರೈಲ್ವೆ ಇಲಾಖೆಯ ವಿವಿಧ ವಲಯಗಳಲ್ಲಿ (Railway Department) ಫಾರ್ಮಾಸಿಸ್ಟ್ ಮತ್ತು ನರ್ಸಿಂಗ್ ಸೂಪರಿಂಟೆಂಡೆಂಟ್ ಹುದ್ದೆಗಳಾಗಿ ಭರ್ತಿಗೊಳಿಸಲಾಗುತ್ತಿದೆ. ಹಾಗಾಗಿ, ಸರ್ಕಾರಿ ಉದ್ಯೋಗಕ್ಕಾಗಿ (Govt job) ಕಾಯುತ್ತಿರುವ ಅಭ್ಯರ್ಥಿಗಳಿಗೆ ಇದು ಮಹತ್ವದ ಅವಕಾಶವಾಗಿದ್ದು, ಸರಿಯಾದ ಅರ್ಜಿ ಪ್ರಕ್ರಿಯೆ, ಅರ್ಹತಾ ಮಾನದಂಡಗಳು, ಅರ್ಜಿ ಶುಲ್ಕ, ಆಯ್ಕೆ ವಿಧಾನ, ವೇತನ ಶ್ರೇಣಿ ಎಲ್ಲವನ್ನು ತಿಳಿದುಕೊಂಡು ಅರ್ಜಿ ಸಲ್ಲಿಸುವುದು ಅಗತ್ಯ. ಹಾಗಾಗಿ, ಈ ಕುರಿತ ಸಂಪೂರ್ಣ ವಿವರ ಇಲ್ಲಿದೆ:

ಹುದ್ದೆಯ ವಿವರ:

  • ನರ್ಸಿಂಗ್ ಸೂಪರಿಂಟೆಂಡೆಂಟ್- 272
  • ಡಯಾಲಿಸಿಸ್ ತಂತ್ರಜ್ಞ – 04
  • ಆರೋಗ್ಯ ಮತ್ತು ಮಲೇರಿಯಾ ನಿರೀಕ್ಷಕರು Gr II – 33
  • ಔಷಧಿಕಾರ (ಪ್ರವೇಶ ದರ್ಜೆ) – 105
  • ರೇಡಿಯೋಗ್ರಾಫರ್ ಎಕ್ಸ್-ರೇ ತಂತ್ರಜ್ಞ – 04
  • ಇಸಿಜಿ ತಂತ್ರಜ್ಞ – 04
  • ಪ್ರಯೋಗಾಲಯ ಸಹಾಯಕ ದರ್ಜೆ II – 12

ಅರ್ಹತಾ:

ಅರ್ಹತೆ ಕುರಿತು ಹೇಳುವುದಾದರೆ, ಅಭ್ಯರ್ಥಿಗಳು ಕನಿಷ್ಠ 12ನೇ ತರಗತಿ, ಪದವಿ, ಡಿಪ್ಲೊಮಾ, ಬಿ.ಎಸ್ಸಿ., ಬಿ.ಫಾರ್ಮ್ ಮುಂತಾದ ವಿದ್ಯಾರ್ಹತೆ ಹೊಂದಿರಬೇಕು. ಹುದ್ದೆಯ ಪ್ರಕಾರ ವಿದ್ಯಾರ್ಹತೆಗೆ ವಿಭಿನ್ನ ಪ್ರದಾನವಿದೆ. ಉದಾಹರಣೆಗೆ ಫಾರ್ಮಾಸಿಸ್ಟ್ ಹುದ್ದೆಗೆ ಬಿ.ಫಾರ್ಮ್ ಅಥವಾ ಸಂಬಂಧಿತ ಡಿಪ್ಲೊಮಾ ಹೊಂದಿರಬೇಕು. ನರ್ಸಿಂಗ್ ಸೂಪರಿಂಟೆಂಡೆಂಟ್ ಹುದ್ದೆಗೆ ಬಿ.ಎಸ್ಸಿ. ನರ್ಸಿಂಗ್ ಅಥವಾ ಅನುಭವ ಹೊಂದಿದ ಡಿಪ್ಲೊಮಾ ಕೋರ್ಸ್ ಅಗತ್ಯವಿದೆ. ವಯೋಮಿತಿಯು ಗರಿಷ್ಠ 40 ವರ್ಷವಾಗಿದ್ದು ಮೀಸಲಾತಿ ವರ್ಗಗಳಿಗೆ ಸರ್ಕಾರದ ನಿಯಮದಂತೆ ಸಡಿಲಿಕೆ ಲಭ್ಯ.

ಆಯ್ಕೆ ವಿಧಾನ:

ಆಯ್ಕೆ ವಿಧಾನವು ಸ್ಪಷ್ಟವಾಗಿ ನಿಶ್ಚಯಿಸಲಾಗಿದೆ. ಮೊದಲ ಹಂತವಾಗಿ ಕಂಪ್ಯೂಟರ್ ಆಧಾರಿತ ಪರೀಕ್ಷೆ CBT ನಡೆಯಲಿದೆ. ನಂತರ ದಾಖಲೆಗಳ ಪರಿಶೀಲನೆ ನಡೆಸಲಾಗುತ್ತದೆ. ಅಂತಿಮ ಹಂತವಾಗಿ ವೈದ್ಯಕೀಯ ಪರೀಕ್ಷೆ ನಡೆಯುತ್ತದೆ. ಈ ಮೂರು ಹಂತಗಳನ್ನು ಯಶಸ್ವಿಯಾಗಿ ಪೂರೈಸಿದ ಅಭ್ಯರ್ಥಿಗಳನ್ನು ಮಾತ್ರ ನೇಮಕಾತಿಗೆ ಅರ್ಹರನ್ನಾಗಿ ಪರಿಗಣಿಸಲಾಗುತ್ತದೆ. ರೈಲ್ವೆ ಇಲಾಖೆಯ ವೈದ್ಯಕೀಯ ಮಾನದಂಡಗಳಿಗೆ ತಕ್ಕಂತೆ ಆಯ್ಕೆ ಮಾಡುವುದು ಕಡ್ಡಾಯವಾಗಿರುತ್ತದೆ.

ಅರ್ಜಿ ಶುಲ್ಕದ ವಿವರ:

ಅರ್ಜಿ ಶುಲ್ಕವನ್ನು ಎರಡು ವಿಭಾಗಗಳಲ್ಲಿ ನಿಶ್ಚಿತಪಡಿಸಲಾಗಿದೆ. SC, ST, ಮಾಜಿ ಸೈನಿಕರು, ಮಹಿಳೆಯರು, PwBD, ಅಲ್ಪಸಂಖ್ಯಾತರು ಮತ್ತು EBC ಅಭ್ಯರ್ಥಿಗಳಿಗೆ 250 ರೂ. ಹಾಗೂ ಇತರ ಅಭ್ಯರ್ಥಿಗಳಿಗೆ 500 ರೂ. ಅರ್ಜಿ ಶುಲ್ಕವನ್ನು ಮಾತ್ರ ಆನ್‌ಲೈನ್ ಮೂಲಕವೇ ಪಾವತಿಸಬೇಕಾಗುತ್ತದೆ ಮತ್ತು ಈ ಕ್ರಮವನ್ನು ಸೆಪ್ಟೆಂಬರ್ 18, 2025 ಮೊದಲು ಪೂರೈಸಬೇಕು.

ಸಂಬಳ:

ವೇತನ ಶ್ರೇಣಿ ಅತ್ಯಂತ ಆಕರ್ಷಕವಾಗಿದೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ಪ್ರತಿ ತಿಂಗಳಿಗೆ ಕನಿಷ್ಟ 21,700 ರೂ.ರಿಂದ ಗರಿಷ್ಠ 44,900 ರೂ.ವರೆಗೆ ವೇತನ ನೀಡಲಾಗುವುದು. ಜೊತೆಗೆ ಸರ್ಕಾರೀ ನೌಕರರಿಗೆ ಸಿಗುವ ಬಡ್ತಿ, ಭತ್ಯೆ, ಪಿಂಚಣಿ ಮೊದಲಾದ ಎಲ್ಲಾ ಸೌಲಭ್ಯಗಳು ಸಿಗುತ್ತವೆ.

  • ನರ್ಸಿಂಗ್ ಸೂಪರಿಂಟೆಂಡೆಂಟ್: 44900
  • ಡಯಾಲಿಸಿಸ್ ತಂತ್ರಜ್ಞ: 35400
  • ಆರೋಗ್ಯ ಮತ್ತು ಮಲೇರಿಯಾ ನಿರೀಕ್ಷಕರು ಗ್ರೇಡ್ II: 35400
  • ಔಷಧಿಕಾರ (ಪ್ರವೇಶ ದರ್ಜೆ): 29200
  • ರೇಡಿಯೋಗ್ರಾಫರ್ ಎಕ್ಸ್-ರೇ ತಂತ್ರಜ್ಞ: 29200
  • ಇಸಿಜಿ ತಂತ್ರಜ್ಞ: 25500
  • ಪ್ರಯೋಗಾಲಯ ಸಹಾಯಕ ದರ್ಜೆ II: 21700

ಅರ್ಜಿ ಸಲ್ಲಿಸುವ ವಿಧಾನ:

  • ಅರ್ಜಿ ಸಲ್ಲಿಸುವ ಅಧಿಕೃತ ಪ್ರಕ್ರಿಯೆ ಅನುಸರಿಸಬೇಕಾದ ಕ್ರಮಗಳು ಹೀಗಿವೆ:
  • ಮೊದಲು RRB–ನ ಅಧಿಕೃತ ವೆಬ್‌ಸೈಟ್ Indian Railways.gov.in ಗೆ ಭೇಟಿ ನೀಡಿ.
  • ನಂತರ ರೈಲ್ವೆ ನೇಮಕಾತಿ ಮಂಡಳಿಯ (Railway Recruitment Board) ವಿಭಾಗವನ್ನು ಆಯ್ಕೆಮಾಡಿ. ಅಲ್ಲಿ ಫಾರ್ಮಾಸಿಸ್ಟ್ ಅಥವಾ ನರ್ಸಿಂಗ್ ಸೂಪರಿಂಟೆಂಡೆಂಟ್ ಹುದ್ದೆಗಳ ಅಧಿಸೂಚನೆಯನ್ನು ಓದಿ ಅರ್ಹತೆಯನ್ನು ಖಚಿತಪಡಿಸಿಕೊಳ್ಳಿ.
  • ಆಮೇಲೆ ಆನ್‌ಲೈನ್ ಅರ್ಜಿ ಫಾರ್ಮ್ ತೆರೆಯಿರಿ. ಎಲ್ಲ ವಿವರಗಳನ್ನು ಸರಿಯಾಗಿ ತುಂಬಿ, ಅರ್ಜಿ ಶುಲ್ಕವನ್ನು ಆನ್‌ಲೈನ್‌ನಲ್ಲಿ ಪಾವತಿಸಿ.
  • ಪಾವತಿ ನಂತರ ಅರ್ಜಿ ಸಲ್ಲಿಸಿ. ಸಲ್ಲಿಸಿದ ಅರ್ಜಿಯ ಡಾಕ್ಯುಮೆಂಟ್ ಮುದ್ರಣ ಮಾಡಿ ಭವಿಷ್ಯದ ಉಲ್ಲೇಖಕ್ಕಾಗಿ ಸಂರಕ್ಷಿಸಿ.
  • ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ: 09-08-2025
  • ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 18-09-2025



Source link

Leave a Reply

Your email address will not be published. Required fields are marked *

TOP