ಇಂದು ನಮ್ಮಲ್ಲಿ ಯಾರೇ ಆಗಿರಲಿ, ಚಿಕ್ಕವರು ಅಥವಾ ದೊಡ್ಡವರು, ಹುಟ್ಟುಹಬ್ಬ ಬಂದರೆ ಅದನ್ನು ವಿಶೇಷವಾಗಿ ಆಚರಿಸಬೇಕೆಂಬ ಆಸೆ ಇರುತ್ತದೆ. ಸ್ನೇಹಿತರು, ಕುಟುಂಬದವರು ಸೇರಿಕೊಂಡು ಕೇಕ್ ಕತ್ತರಿಸುವುದು, ಮೇಣದಬತ್ತಿಗಳನ್ನು ಬೆಳಗಿಸಿ ಊದುವುದು, ಹಾರೈಸುವುದು – ಇವೆಲ್ಲವು ಸಾಮಾನ್ಯವಾಗಿ ನಡೆಯುತ್ತವೆ. ಆದರೆ ನೀವು ಎಂದಾದರೂ ಯೋಚಿಸಿದ್ದೀರಾ, ಈ ಸಂಪ್ರದಾಯ ಎಲ್ಲಿಂದ ಪ್ರಾರಂಭವಾಯಿತು? ಕೇಕ್ ಕತ್ತರಿಸುವುದು, ಮೇಣದಬತ್ತಿ ಊದುವುದು, ಹುಟ್ಟುಹಬ್ಬವನ್ನು ಆಚರಿಸುವ ಸಂಪ್ರದಾಯ ನಮ್ಮ ಭಾರತದಲ್ಲಲ್ಲ, ವಿದೇಶಗಳಲ್ಲಿ ಹುಟ್ಟಿಕೊಂಡವು.