ಗ್ರಾಚ್ಯುಟಿ CTC ಯ ಭಾಗವಾಗಿದೆ, ಆದರೆ ಐದು ವರ್ಷಗಳ ನಿರಂತರ ಸೇವೆಯನ್ನು ಪೂರ್ಣಗೊಳಿಸಿದ ನಂತರ ಮಾತ್ರ ಪಾವತಿಸಲಾಗುತ್ತದೆ. ಭವಿಷ್ಯ ನಿಧಿಗೆ (PF) ಉದ್ಯೋಗದಾತರ ಕೊಡುಗೆ ತಾಂತ್ರಿಕವಾಗಿ ನಿಮ್ಮದಾಗಿದೆ, ಆದರೆ ಅದು ನಿವೃತ್ತಿ ನಿಧಿಯಲ್ಲಿ ಲಾಕ್ ಆಗಿರುತ್ತದೆ. ಕಾರ್ಯಕ್ಷಮತೆಯ ಬೋನಸ್‌ಗಳು ಹೆಚ್ಚಾಗಿ ವಿವೇಚನೆಗೆ ಒಳಪಟ್ಟಿರುತ್ತವೆ ಮತ್ತು ವಿಳಂಬವಾಗಬಹುದು ಅಥವಾ ಎಂದಿಗೂ ಪೂರ್ಣವಾಗಿ ಪಾವತಿಸಲಾಗುವುದಿಲ್ಲ.
ESOP ಗಳು (ನೌಕರ ಸ್ಟಾಕ್ ಆಯ್ಕೆ ಯೋಜನೆಗಳು) ಲಾಭದಾಯಕವೆಂದು ತೋರುತ್ತದೆ, ಆದರೆ ಸರಿಯಾದ ಸಮಯದಲ್ಲಿ ಬಳಸಿದರೆ ಮಾತ್ರ ಅವು ಮೌಲ್ಯವನ್ನು ಹೊಂದಿರುತ್ತವೆ ಉದ್ಯೋಗದಾತರು ಪಾವತಿಸುವ ವಿಮಾ ಕಂತುಗಳು (ಆರೋಗ್ಯ/ಜೀವನ) ಪ್ರಯೋಜನಗಳಾಗಿವೆ, ಆದರೆ ನಿಮ್ಮ ಮಾಸಿಕ ನಿವ್ವಳ ವೇತನದ ಭಾಗವಲ್ಲ.
ನಿಮ್ಮ ಸಿಟಿಸಿ ನಿಮಗೆ ನಿಜವಾದ ಸಂಬಳದ ಬಗ್ಗೆ ಹೇಳುವುದಿಲ್ಲ. ಪ್ರತಿ ವರ್ಷ, ಲಕ್ಷಾಂತರ ಹೊಸಬರು ಮತ್ತು ಅನುಭವಿ ವೃತ್ತಿಪರರು ಆಫರ್ ಲೆಟರ್‌ಗಳನ್ನು ಸಿಟಿಸಿಯೊಂದಿಗೆ ಜೋಡಿಸುತ್ತಾರೆ. ಆದರೆ ಕೆಲವು ತಿಂಗಳ ನಂತರ ವಾಸ್ತವದ ಅರಿವಾಗುತ್ತದೆ. ಕೈಗೆ ಬರುವ ಸಂಬಳ ಕಡಿಮೆಯಾದಾಗ ಯೋಚನೆಗೆ ಬೀಳುತ್ತಾರೆ. ಸತ್ಯವೆಂದರೆ ಸಿಟಿಸಿ = ಟೇಕ್ ಹೋಮ್ ಪೇಯಾಗಿರುವುದಿಲ್ಲ.
ಕಂಪನಿ ನಿಮ್ಮ ಸಿಟಿಸಿ 12 ಲಕ್ಷ ಎಂದು ಹೇಳಿದಾಗ ತಿಂಗಳಿಗೆ ನಿಮ್ಮ ಬ್ಯಾಂಕ್ ಖಾತೆಗೆ ಬರುವ ಹಣ ರೂ 60,000-ರೂ 70,000 ವಾಗಿರಬಹುದು. ಇದು ಗಮನಾರ್ಹ ಅಂತರವಾಗಿದ್ದು ಯುವ ಉದ್ಯೋಗಿಗಳು ಇದನ್ನು ಅರಿತುಕೊಂಡಿರಬೇಕು ಎಂದು ವಾಲಿಯಾ ಸೂಚಿಸುತ್ತಾರೆ.
ನಿಮ್ಮ ಸಿಟಿಸಿಯ ಸುತ್ತ ಮಾಸಿಕ ವೆಚ್ಚಗಳನ್ನು ಯೋಜಿಸುವುದನ್ನು ನಿಲ್ಲಿಸಿ ಎಂದು ತಿಳಿಸುವ ಅವರು, ಕಡಿತಗಳ ನಂತರದ ನಿಮ್ಮ ನಿವ್ವಳ ಆದಾಯವು ನೀವು ಖರ್ಚು ಮಾಡಬಹುದಾದ ಅಥವಾ ಹೂಡಿಕೆ ಮಾಡಬಹುದಾದ ನಿಜವಾದ ಸಂಖ್ಯೆಯಾಗಿದೆ. ಅದು ಮುಖ್ಯವಾದುದು ಎನ್ನುತ್ತಾರೆ.
ಹೊಸದಾಗಿ ಕೆಲಸಕ್ಕೆ ಸೇರಿಕೊಂಡವರು ನಿಮ್ಮ ಪೇಸ್ಲಿಪ್ ಅನ್ನು ಜಾಗರೂಕತೆಯಿಂದ ಪರಿಶೀಲಿಸಬೇಕು, ಪ್ರತಿ ಸಾಲನ್ನು ಅರ್ಥೈಸಿಕೊಳ್ಳಬೇಕು ನಿಯಮಿತ ವೆಚ್ಚಗಳಿಗಾಗಿ ಬೋನಸ್‌ಗಳು ಅಥವಾ ESOP ಗಳಂತಹ ಅನಿಶ್ಚಿತ ಘಟಕಗಳನ್ನು ಅವಲಂಬಿಸಬಾರದು ಎಂದವರು ಹೇಳುತ್ತಾರೆ.
ಬೋನಸ್ ಯಾವಾಗಲೂ ಆಕಸ್ಮಿಕ ಲಾಭವಾಗಿರುತ್ತವೆ ಇದು ಖಾತ್ರಿಯ ಆದಾಯವಲ್ಲ ಹಾಗಾಗಿ ಆಫರ್ ಅನ್ನು ಸ್ವೀಕರಿಸುವ ಮುನ್ನ ಯಾವುದು ಫಿಕ್ಸ್ ಆಗಿರುವಂತಹದ್ದು ಯಾವುದು ವೇರಿಯೇಬಲ್? ESOP ಗಳಿಗೆ ವೆಸ್ಟಿಂಗ್ ಅವಧಿ ಇದೆಯೇ? ಈ ಎಲ್ಲಾ ಪ್ರಶ್ನೆಗಳು ಆರ್ಥಿಕ ಸ್ಥಿರತೆಯನ್ನು ಮಾಡಬಹುದು ಇಲ್ಲವೇ ಆರ್ಥಿಕ ಭದ್ರತೆಯನ್ನು ತೊಂದರೆಗೊಳಿಸಬಹುದು ಎನ್ನುತ್ತಾರೆ.
ಕೊನೆಗೆ ವಾಲಿಯಾ ಹೇಳುತ್ತಾರೆ ಏನೆಂದರೆ, ನಿಮ್ಮ ನಿಜವಾದ ಸಂಬಳವನ್ನು ಅರ್ಥಮಾಡಿಕೊಳ್ಳುವುದು ಹಣಕ್ಕಿಂತ ಹೆಚ್ಚಿನದಾಗಿದೆ ಇದು ತಿಳುವಳಿಕೆಯುಳ್ಳ ಆಯ್ಕೆಗಳನ್ನು ಮಾಡುವ ಬಗ್ಗೆ ಮಾಹಿತಿಯನ್ನೊದಗಿಸುತ್ತದೆ ಎನ್ನುತ್ತಾರೆ.
ಯಾವಾಗಲೂ ಆಫರ್ ಲೆಟರ್‌ನಲ್ಲಿ ಏನಿದೆ ಎಂಬುದನ್ನು ಪರಿಗಣಿಸದಿರಿ ನೀವು ನಿಮ್ಮಲ್ಲಿ ಏನನ್ನು ಉಳಿಸಿಕೊಳ್ಳುತ್ತೀರಿ, ಬೆಳೆಸುತ್ತೀರಿ ಹಾಗೂ ಸಂರಕ್ಷಿಸುತ್ತೀರಿ ಎಂಬುದನ್ನು ಪರಿಗಣಿಸಿ ಇದುವೇ ವೃತ್ತಿಜೀವನಕ್ಕೆ ರಹದಾರಿ ಎನ್ನುತ್ತಾರೆ.
July 20, 2025 3:29 PM IST
CTC: ನಿಮ್ಮ ಸಿಟಿಸಿ ಹಾಗೂ ಸಂಬಳದ ಮೊತ್ತ ಬೇರೆ ಆಗಿರುತ್ತೆ; ಈ ಎರಡರ ವ್ಯತ್ಯಾಸವನ್ನು ಅರಿತುಕೊಂಡು ಜಾಬ್‌ಗೆ ಸೇರಿ! ಚಾರ್ಟರ್ಡ್ ಅಕೌಂಟೆಂಟ್ ಸಲಹೆ ಹೀಗಿದೆ