ಸಮಾಜದ ಸೇವೆಗಾಗಿ ಎಂಜಿನಿಯರ್ ಕೆಲಸ ಬಿಟ್ಟು IAS ಅಧಿಕಾರಿಯಾದ ಶುಭ್ರಾ!

Mnk 1 2025 08 81ff5905b2e84e18f0c48c1cdda8c031.jpg


Last Updated:

ಶುಭ್ರಾ ಸಕ್ಸೇನಾ ಅವರ ಕಥೆ ದೃಢನಿಶ್ಚಯ ಮತ್ತು ಉದ್ದೇಶಕ್ಕೆ ಒಂದು ಪ್ರಬಲ ಉದಾಹರಣೆಯಾಗಿದೆ. ಐಐಟಿ ರೂರ್ಕಿಯಲ್ಲಿ ಸಾಫ್ಟ್‌ವೇರ್ ಎಂಜಿನಿಯರಿಂಗ್ ಪದವೀಧರೆಯಾಗಿರುವ ಅವರು ನಂತರ ಬಹುರಾಷ್ಟ್ರೀಯ ಕಂಪನಿಯೊಂದರಲ್ಲಿ ಕೈ ತುಂಬಾ ಸಂಬಳ ಬರುವ ಎಂಜಿನಿಯರ್ ಹುದ್ದೆಯನ್ನು ಪಡೆದರು.

News18News18
News18

ಕೆಲವರಿಗೆ ತಮ್ಮ ವೈಯುಕ್ತಿಕ ಯಶಸ್ಸಿಗಿಂತ ಸಮಾಜದ ಒಳಿತು ತುಂಬಾನೇ ಮುಖ್ಯವಾಗಿರುತ್ತದೆ ಮತ್ತು ತಾವು ಬದುಕುತ್ತಿರುವ ಸಮಾಜವನ್ನು ಇನ್ನಷ್ಟು ಉತ್ತಮ ಸ್ಥಳವನ್ನಾಗಿ ರೂಪಿಸಿಕೊಳ್ಳಬೇಕು ಅಂತ ಆಂತರಿಕ ತುಡಿತ ಇದ್ದೇ ಇರುತ್ತದೆ. ಇಂತಹ ಮನಸ್ಥಿತಿ ಹೊಂದಿರುವವರು ತಮ್ಮ ಮನೆ, ತಮ್ಮ ಐಷಾರಾಮಿ ಜೀವನಗಿಂತಲೂ (Rich Life) ಹೆಚ್ಚು ಸಮಾಜದ ಉದ್ದಾರಕ್ಕಾಗಿ ತಮ್ಮ ಜೀವನವನ್ನು ಮುಡಿಪಾಗಿರಿಸುತ್ತಾರೆ. ಅದಕ್ಕೆ ನೋಡಿ ಇತ್ತೀಚೆಗೆ ಎಷ್ಟೋ ಜನ ವೈದ್ಯರು (Doctor) ಮತ್ತು ಎಂಜಿನಿಯರ್ (Engineer) ಹುದ್ದೆಯಲ್ಲಿರುವ ಯುವಕ ಯುವತಿಯರು ತಮ್ಮ ಐಷಾರಾಮಿ ಜೀವನ ಮತ್ತು ಕೈ ತುಂಬಾ ಬರುವ ಸಂಬಳ ಬಿಟ್ಟು, ಯುಪಿಎಸ್‌ಸಿ ಪರೀಕ್ಷೆಗೆ (Upsc Exam) ತಯಾರಿ ನಡೆಸಿ ಐಎಎಸ್ (IAS) ಅಧಿಕಾರಿಯಾಗುತ್ತಿರುವುದು.

ತಮ್ಮ ವೈಯುಕ್ತಿಕ ಯಶಸ್ಸಿಗಿಂತ ಸಮಾಜದ ಒಳಿತು ತುಂಬಾನೇ ಮುಖ್ಯವಾಗಿರುತ್ತದೆ ಮತ್ತು ತಾವು ಬದುಕುತ್ತಿರುವ ಸಮಾಜವನ್ನು ಇನ್ನಷ್ಟು ಉತ್ತಮ ಸ್ಥಳವನ್ನಾಗಿ ರೂಪಿಸಿಕೊಳ್ಳಬೇಕು ಅಂತ ಆಂತರಿಕ ತುಡಿತ ಇದ್ದೇ ಇರುತ್ತದೆ. ಇಂತಹ ಮನಸ್ಥಿತಿ ಹೊಂದಿರುವವರು ತಮ್ಮ ಮನೆ, ತಮ್ಮ ಐಷಾರಾಮಿ ಜೀವನಗಿಂತಲೂ (Rich Life) ಹೆಚ್ಚು ಸಮಾಜದ ಉದ್ದಾರಕ್ಕಾಗಿ ತಮ್ಮ ಜೀವನವನ್ನು ಮುಡಿಪಾಗಿರಿಸುತ್ತಾರೆ. ಅದಕ್ಕೆ ನೋಡಿ ಇತ್ತೀಚೆಗೆ ಎಷ್ಟೋ ಜನ ವೈದ್ಯರು (Doctor) ಮತ್ತು ಎಂಜಿನಿಯರ್ (Engineer) ಹುದ್ದೆಯಲ್ಲಿರುವ ಯುವಕ ಯುವತಿಯರು ತಮ್ಮ ಐಷಾರಾಮಿ ಜೀವನ ಮತ್ತು ಕೈ ತುಂಬಾ ಬರುವ ಸಂಬಳ ಬಿಟ್ಟು, ಯುಪಿಎಸ್‌ಸಿ ಪರೀಕ್ಷೆಗೆ (Upsc Exam) ತಯಾರಿ ನಡೆಸಿ ಐಎಎಸ್ (IAS) ಅಧಿಕಾರಿಯಾಗುತ್ತಿರುವುದು.

ಅರೇ ಈಗೇಕೆ ಇದರ ಬಗ್ಗೆ ಮಾತು ಅಂತೀರಾ? ಇಲ್ಲೊಬ್ಬ ಮಹಿಳೆ ಸಹ ಹೀಗೆ ತಮ್ಮ ಸಾಫ್ಟ್‌ವೇರ್ ಎಂಜಿನಿಯರ್ ಕೆಲಸಕ್ಕೆ ಗುಡ್ ಬೈ ಹೇಳಿ ಯುಪಿಎಸ್‌ಸಿ ಪರೀಕ್ಷೆಗೆ ತಯಾರಿ ನಡೆಸಿ, ಅದರಲ್ಲಿ ಉತ್ತಮವಾದ ಅಂಕಗಳನ್ನು ಗಳಿಸಿ ಐಎಎಸ್ ಅಧಿಕಾರಿಯಾಗಿದ್ದಾರೆ. ಇವರ ಕಥೆ ನಿಜಕ್ಕೂ ದೃಢನಿಶ್ಚಯ ಮತ್ತು ಉದ್ದೇಶಕ್ಕೆ ಒಂದು ಪ್ರಬಲವಾದ ಉದಾಹರಣೆಯಾಗಿದೆ ಅಂತ ಹೇಳಿದರೆ ಬಹುಶಃ ತಪ್ಪಾಗಲಿಕ್ಕಿಲ್ಲ.

ಎಂಜಿನಿಯರ್ ಕೆಲಸ ಬಿಟ್ಟು ಐಎಎಸ್ ಅಧಿಕಾರಿಯಾದ ಶುಭ್ರಾ

ಶುಭ್ರಾ ಸಕ್ಸೇನಾ ಅವರ ಕಥೆ ದೃಢನಿಶ್ಚಯ ಮತ್ತು ಉದ್ದೇಶಕ್ಕೆ ಒಂದು ಪ್ರಬಲ ಉದಾಹರಣೆಯಾಗಿದೆ. ಐಐಟಿ ರೂರ್ಕಿಯಲ್ಲಿ ಸಾಫ್ಟ್‌ವೇರ್ ಎಂಜಿನಿಯರಿಂಗ್ ಪದವೀಧರೆಯಾಗಿರುವ ಅವರು ನಂತರ ಬಹುರಾಷ್ಟ್ರೀಯ ಕಂಪನಿಯೊಂದರಲ್ಲಿ ಕೈ ತುಂಬಾ ಸಂಬಳ ಬರುವ ಎಂಜಿನಿಯರ್ ಹುದ್ದೆಯನ್ನು ಪಡೆದರು. ಅವರ ವೃತ್ತಿ ಜೀವನ ಚೆನ್ನಾಗಿಯೇ ನಡೆದಿರುವಾಗ, ಅವರಿಗೆ ತಮ್ಮ ವೈಯುಕ್ತಿಕ ಯಶಸ್ಸಿಗಿಂತ ಹೆಚ್ಚು ಸಮಾಜದ ಒಳಿತಿನ ಬಗ್ಗೆ ಕಾಳಜಿ ಹುಟ್ಟಿತು.

ಆ ಕಾಳಜಿ ಮುಂದೊಂದು ದಿನ ಹೆಚ್ಚಾಗಿ ಕೈ ತುಂಬಾ ಸಂಬಳ ಬರುವ ಎಂಜಿನಿಯರಿಂಗ್ ಕೆಲಸವನ್ನು ಬಿಟ್ಟು ಯುಪಿಎಸ್‌ಸಿ ಪರೀಕ್ಷೆಗೆ ತಯಾರಿ ನಡೆಸಲು ಶುರು ಮಾಡಿದರು. ದೃಢವಾದ ನಿರ್ಣಯ ಮತ್ತು ಅಚಲವಾದ ನಂಬಿಕೆಯಿಂದ ಆ ಪರೀಕ್ಷೆಯಲ್ಲಿ ಒಳ್ಳೆಯ ಅಂಕಗಳನ್ನು ಗಳಿಸಿದರು ಮತ್ತು ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಉತ್ತೀರ್ಣರಾದರು. ಕೇಂದ್ರೀಕೃತ ತಯಾರಿಯೊಂದಿಗೆ, ಅವರು 2008 ರಲ್ಲಿ ತಮ್ಮ ಎರಡನೇ ಪ್ರಯತ್ನದಲ್ಲಿ ನಾಗರಿಕ ಸೇವೆಗಳ ಪರೀಕ್ಷೆಯನ್ನು ಉತ್ತೀರ್ಣರಾದರು. ಆ ಪರೀಕ್ಷೆಯಲ್ಲಿ ಅವರು ಮೊದಲ ರ್ಯಾಂಕ್ ಪಡೆಯುವುದರೊಂದಿಗೆ ಪಾಸ್ ಆದರು. ಅವರ ಶಿಸ್ತುಬದ್ಧ ಅಧ್ಯಯನ ದಿನಚರಿ – ದಿನಕ್ಕೆ ಎಂಟು ಗಂಟೆಗಳ ಅಧ್ಯಯನ, ಪರೀಕ್ಷೆಗಳ ಸಮಯದಲ್ಲಿ 12 ಗಂಟೆಗಳವರೆಗೆ ಓದುವ ತಯಾರಿ – ಅವರ ಯಶಸ್ಸಿನಲ್ಲಿ ಪ್ರಮುಖ ಪಾತ್ರ ವಹಿಸಿದವು ಅಂತ ಹೇಳಲಾಗುತ್ತಿದೆ.

ಶುಭ್ರಾ ಅವರು ಹಲವಾರು ಜಿಲ್ಲೆಗಳಲ್ಲಿ ಜಿಲ್ಲಾಧಿಕಾರಿಯಾಗಿ ಸೇವೆ ಸಲ್ಲಿಸಿದರು..

ಹಲವು ವರ್ಷಗಳಿಂದ, ಶುಭ್ರಾ ಸಕ್ಸೇನಾ ಅವರು ಉತ್ತರ ಪ್ರದೇಶದ ಹಲವಾರು ಜಿಲ್ಲೆಗಳಲ್ಲಿ ಜಿಲ್ಲಾಧಿಕಾರಿಯಾಗಿ ಮತ್ತು ಆಗ್ರಾ ಅಭಿವೃದ್ಧಿ ಪ್ರಾಧಿಕಾರದ ಉಪಾಧ್ಯಕ್ಷರಾಗಿ ಸಹ ಸೇವೆ ಸಲ್ಲಿಸಿದರು. ಅವರು ವೈದ್ಯಕೀಯ ಶಿಕ್ಷಣ ಇಲಾಖೆಯಲ್ಲಿ ವಿಶೇಷ ಕಾರ್ಯದರ್ಶಿ ಹುದ್ದೆಯನ್ನೂ ಸಹ ಅಲಂಕರಿಸಿದರು. ಇಂದು, ಅವರು ಭಾರತದ ಚುನಾವಣಾ ಆಯೋಗದಲ್ಲಿ ನಿರ್ದೇಶಕಿಯಾಗಿ ರಾಷ್ಟ್ರಕ್ಕೆ ತಮ್ಮ ಸೇವೆಯನ್ನು ಮುಂದುವರೆಸಿದ್ದಾರೆ.

ಇದನ್ನೂ ಓದಿ: Pomegranate: ಇಂತಹವರು ದಾಳಿಂಬೆ ತಿನ್ನಬಾರದಂತೆ; ತಿಂದ್ರೆ ಅಪಾಯ ಕಟ್ಟಿಟ್ಟ ಬುತ್ತಿ!

ಅವರ ಕಠಿಣ ಪರಿಶ್ರಮ ಮತ್ತು ಅಚಲವಾದ ಗುರಿಯ ಕಡೆಗಿನ ಮನಸ್ಥಿತಿ ಮತ್ತು ಅದಕ್ಕೆ ಬೆಂಬಲಿತವಾದ ಅಪಾಯಗಳನ್ನು ತೆಗೆದುಕೊಳ್ಳುವ ಧೈರ್ಯವು ವೃತ್ತಿ ಜೀವನವನ್ನು ಸಾರ್ವಜನಿಕ ಸೇವೆಯ ಧ್ಯೇಯವಾಗಿ ಹೇಗೆ ಪರಿವರ್ತಿಸುತ್ತದೆ ಎಂಬುದನ್ನು ಇವರ ಇಡೀ ಜೀವನದ ಪ್ರಯಾಣವು ಪ್ರತಿಬಿಂಬಿಸುತ್ತದೆ. ಇವರ ಈ ಕಥೆ ಅನೇಕ ಯುಪಿಎಸ್‌ಸಿ ಪರೀಕ್ಷೆಯನ್ನು ಒಳ್ಳೆಯ ಅಂಕಗಳನ್ನು ಪಡೆದುಕೊಂಡು ಆ ಪರೀಕ್ಷೆಯನ್ನು ಪಾಸ್ ಮಾಡಬೇಕು ಅಂತ ತಯಾರಿ ನಡೆಸುತ್ತಿರುವ ಅಭ್ಯರ್ಥಿಗಳಿಗೆ ಒಂದು ರೀತಿಯ ದಾರಿ ದೀಪವಾಗಿದೆ ಅಂತ ಹೇಳಬಹುದು.



Source link

Leave a Reply

Your email address will not be published. Required fields are marked *

TOP