ರೈಲ್ವೆ ಇಲಾಖೆಯಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ! ಶೈಕ್ಷಣಿಕ ಅರ್ಹತೆ ಕುರಿತು ಇಲ್ಲಿದೆ ಮಾಹಿತಿ

Rites 2024 04 be05bcdbaae8254cca485dccac2e5d76 3x2.jpg


ಹುದ್ದೆಗಳ ಸಂಪೂರ್ಣ ವಿವರ ಈ ಕೆಳಗಿನಂತಿದೆ

ಸಂಸ್ಥೆಯ ಹೆಸರು: ರೈಲ್ ಇಂಡಿಯಾ ತಾಂತ್ರಿಕ ಮತ್ತು ಆರ್ಥಿಕ ಸೇವೆಗಳು

ಹುದ್ದೆಗಳ ವಿವರ: ಸಹಾಯಕ ವ್ಯವಸ್ಥಾಪಕ, ಸೈಟ್ ಸರ್ವೇಯರ್, ಸೈಟ್ ಎಂಜಿನಿಯರ್, ಸೈಟ್ ಎಂಜಿನಿಯರ್ (ಸೇತುವೆ), ಗುಣಮಟ್ಟ ನಿಯಂತ್ರಣ ತಜ್ಞ, ನಿವಾಸಿ ಇಂಜಿನಿಯರ್ (ಸಿವಿಲ್), ನಿವಾಸಿ ಎಂಜಿನಿಯರ್ (ಸೇತುವೆ), ವಲಯ ತಜ್ಞರು/ಸಿವಿಲ್ (ಸೇತುವೆ ವಿನ್ಯಾಸ).

ಒಟ್ಟೂ ಹುದ್ದೆಗಳ ಸಂಖ್ಯೆ: 15

ಶೈಕ್ಷಣಿಕ ಅರ್ಹತೆಗಳು ಏನು?:  ಸಹಾಯಕ ವ್ಯವಸ್ಥಾಪಕ ಹುದ್ದೆಗೆ ಸ್ನಾತಕೋತ್ತರ ಪದವಿ, ಸೈಟ್ ಸರ್ವೇಯರ್ ಹಾಗೂ ಸೈಟ್ ಇಂಜಿನಿಯರ್ ಹುದ್ದೆಗೆ ಡಿಪ್ಲೊಮಾ, ಸಿವಿಲ್ ಇಂಜಿನಿಯರಿಂಗ್ ಪದವಿಯನ್ನು ಪಡೆದಿರಬೇಕು. ಹಾಗೆಯೇ ಗುಣಮಟ್ಟ ನಿಯಂತ್ರಣ ತಜ್ಞರು ಹುದ್ದೆಗೆ ಡಿಪ್ಲೊಮಾ, ಸಿವಿಲ್/ಎಲೆಕ್ಟ್ರಿಕಲ್/ಎಲೆಕ್ಟ್ರಾನಿಕ್ಸ್/ಮೆಕ್ಯಾನಿಕಲ್ ಎಂಜಿನಿಯರಿಂಗ್‌ನಲ್ಲಿ ಪದವಿ ಹಾಗೂ ರೆಸಿಡೆಂಟ್ ಎಂಜಿನಿಯರ್ (ಸಿವಿಲ್), ರೆಸಿಡೆಂಟ್ ಎಂಜಿನಿಯರ್ (ಬ್ರಿಡ್ಜ್) ಹುದ್ದೆಗೆ ಡಿಪ್ಲೊಮಾ, ಸಿವಿಲ್ ಎಂಜಿನಿಯರಿಂಗ್‌ನಲ್ಲಿ ಪದವಿ ಪಡೆದವರು ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. ಸೆಕ್ಟರ್ ಎಕ್ಸ್‌ಪರ್ಟ್/ಸಿವಿಲ್ (ಸೇತುವೆ ವಿನ್ಯಾಸ) ಹುದ್ದೆಗೆ ಡಿಪ್ಲೊಮಾ, ಸಿವಿಲ್ ಎಂಜಿನಿಯರಿಂಗ್‌ನಲ್ಲಿ ಸ್ನಾತಕೋತ್ತರ ಪದವಿಯನ್ನು ಪರ್ಣಗೊಳಿಸಿರಬೇಕು.

ವಯೋಮಿತಿ ಹಾಗೂ ವೇತನ ಕುರಿತು ಮಾಹಿತಿ

ಸಹಾಯಕ ವ್ಯವಸ್ಥಾಪಕ ಹುದ್ದೆಗೆ ಗರಿಷ್ಠ 32 ವರ್ಷ ಮೀರಿರಬಾರದು. ಉಳಿದಂತೆ ಸೈಟ್ ಸರ್ವೇಯರ್, ಸೈಟ್ ಎಂಜಿನಿಯರ್, ಸೈಟ್ ಎಂಜಿನಿಯರ್ (ಸೇತುವೆ), ಗುಣಮಟ್ಟ ನಿಯಂತ್ರಣ ತಜ್ಞ, ನಿವಾಸಿ ಇಂಜಿನಿಯರ್ (ಸಿವಿಲ್), ನಿವಾಸಿ ಎಂಜಿನಿಯರ್ (ಸೇತುವೆ), ವಲಯ ತಜ್ಞರು/ಸಿವಿಲ್ (ಸೇತುವೆ ವಿನ್ಯಾಸ) ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ಗರಿಷ್ಠ ವಯಸ್ಸು 55 ವರ್ಷ ಮೀರಿರಬಾರದು. ಇನ್ನು ಹುದ್ದೆಗಳ ಅನುಸಾರವಾಗಿ ಆಯ್ಕೆಯಾದ ಅಭ್ಯರ್ಥಿಗಳಿಗೆ ವೇತನವನ್ನು ನೀಡಲಾಗುತ್ತದೆ.

ಅರ್ಜಿ ಶುಲ್ಕ:

ಇಡಬ್ಲ್ಯೂಎಸ್‌ /ಎಸ್‌ಸಿ/ಎಸ್‌ಟಿ/ಪಿಡಬ್ಲ್ಯೂಡಿ ಅಭ್ಯರ್ಥಿಗಳಿಗೆ – 300ರೂ.

ಸಾಮಾನ್ಯ/ಓಬಿಸಿ ಅಭ್ಯರ್ಥಿಗಳಿಗೆ – 600ರೂ.

ಆಯ್ಕೆ ಪ್ರಕ್ರಿಯೆ ಹೇಗೆ?

ಅರ್ಹತಾ ಮಾನದಂಡಗಳನ್ನು ಪೂರೈಸುವ ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ, ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ.

ಸಂದರ್ಶನ ನಡೆಯುವ ದಿನಾಂಕ

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಜನವರಿ 10, 2025

ಸಂದರ್ಶನದ ದಿನಾಂಕ: ಜನವರಿ 9 ಹಾಗೂ 10, 2025

ಕನ್ನಡ ಸುದ್ದಿ/ ನ್ಯೂಸ್/Jobs/

RITES Recruitment: ರೈಲ್ವೆ ಇಲಾಖೆಯಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ! ಹುದ್ದೆಗಳ ವಿವರ, ಶೈಕ್ಷಣಿಕ ಅರ್ಹತೆ ಕುರಿತು ಇಲ್ಲಿದೆ ಮಾಹಿತಿ



Source link

Leave a Reply

Your email address will not be published. Required fields are marked *

TOP