ಮೊಬೈಲ್‌ನಿಂದ ದೂರ, ಪ್ರತಿದಿನದ ಓದಿಗೆ ಟೈಮ್ ಟೇಬಲ್! NEET ಎಕ್ಸಾಂನಲ್ಲಿ ಟಾಪರ್ ಆದ ಸಹೋದರರ ಸಕ್ಸಸ್ ಮಂತ್ರ

Rapidreadnewlogo.svg .svgxml


Last Updated:

NEET Topper Brothers: ನೀಟ್ ಪರೀಕ್ಷೆಯನ್ನು ಬರೆಯುವುದು ಕೋಟ್ಯಾಂತರ ವಿದ್ಯಾರ್ಥಿಗಳ ಕನಸು. ಇದಕ್ಕಾಗಿ ವಿದ್ಯಾರ್ಥಿಗಳು 8-9 ನೇ ತರಗತಿಯಿಂದಲೇ ಅಭ್ಯಾಸ ಪ್ರಾರಂಭಿಸುತ್ತಾರೆ. ಹಾಗಾಗಿ, ಪಿಯುಸಿ ಆದ ನಂತರ ವರ್ಷಗಟ್ಟಲೇ ಲಾಂಗ್ ಟರ್ಮ್ ಎನ್ನುವ ಹೆಸರಿನಲ್ಲಿ ಅಭ್ಯಾಸಕ್ಕಾಗಿ ಕುಳಿತುಕೊಳ್ಳುತ್ತಾರೆ. ಇದರೊಂದಿಗೆ ಪ್ರತಿ ವರ್ಷ ಲಕ್ಷಾಂತರ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗುತ್ತಾರೆ. ಇಂತಹ ಸಂದರ್ಭದಲ್ಲಿ ಪರೀಕ್ಷೆಯಲ್ಲಿ ಉತ್ತೀರ್ಣರಾಗುವುದು ಕೆಲವೇ ಕೆಲವು ಸಾವಿರ ವಿದ್ಯಾರ್ಥಿಗಳಿಂದ ಮಾತ್ರ ಸಾಧ್ಯವಾಗುತ್ತದೆ. ಅದರಲ್ಲೂ ಈ ಪರೀಕ್ಷೆಯಲ್ಲಿ ಇಬ್ಬರು ಸಹೋದರರು ಒಟ್ಟಿಗೆ ಉತ್ತೀರ್ಣರಾದರೆ ಅವರ ಖುಷಿಗೆ ಪಾರವೇ ಇಲ್ಲ. ಹಾಗಾಗಿ, ಅಂತಹ ಸಹೋದರರ ಯಶಸ್ಸಿನ ಗುಟ್ಟು ಇಲ್ಲಿದೆ ನೋಡಿ:

Rapid Read
News18News18
News18

ನೀಟ್ ಪರೀಕ್ಷೆಯನ್ನು ಬರೆಯುವುದು ಕೋಟ್ಯಾಂತರ ವಿದ್ಯಾರ್ಥಿಗಳ ಕನಸು. ಇದಕ್ಕಾಗಿ ವಿದ್ಯಾರ್ಥಿಗಳು 8-9 ನೇ ತರಗತಿಯಿಂದಲೇ ಅಭ್ಯಾಸ ಪ್ರಾರಂಭಿಸುತ್ತಾರೆ. ಹಾಗಾಗಿ, ಪಿಯುಸಿ ಆದ ನಂತರ ವರ್ಷಗಟ್ಟಲೇ ಲಾಂಗ್ ಟರ್ಮ್ ಎನ್ನುವ ಹೆಸರಿನಲ್ಲಿ ಅಭ್ಯಾಸಕ್ಕಾಗಿ ಕುಳಿತುಕೊಳ್ಳುತ್ತಾರೆ. ಇದರೊಂದಿಗೆ ಪ್ರತಿ ವರ್ಷ ಲಕ್ಷಾಂತರ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗುತ್ತಾರೆ. ಇಂತಹ ಸಂದರ್ಭದಲ್ಲಿ ಪರೀಕ್ಷೆಯಲ್ಲಿ ಉತ್ತೀರ್ಣರಾಗುವುದು ಕೆಲವೇ ಕೆಲವು ಸಾವಿರ ವಿದ್ಯಾರ್ಥಿಗಳಿಂದ ಮಾತ್ರ ಸಾಧ್ಯವಾಗುತ್ತದೆ. ಅದರಲ್ಲೂ ಈ ಪರೀಕ್ಷೆಯಲ್ಲಿ ಇಬ್ಬರು ಸಹೋದರರು ಒಟ್ಟಿಗೆ ಉತ್ತೀರ್ಣರಾದರೆ ಅವರ ಖುಷಿಗೆ ಪಾರವೇ ಇಲ್ಲ. ಹಾಗಾಗಿ, ಅಂತಹ ಸಹೋದರರ ಯಶಸ್ಸಿನ ಗುಟ್ಟು ಇಲ್ಲಿದೆ ನೋಡಿ:

ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ದೇಶದ ಅತಿದೊಡ್ಡ ವೈದ್ಯಕೀಯ ಪ್ರವೇಶ ಪರೀಕ್ಷೆ NEET (UG)-2025 ರ ಫಲಿತಾಂಶವನ್ನು ಪ್ರಕಟಿಸಿದೆ. ಈ ಪರೀಕ್ಷೆಯ ಫಲಿತಾಂಶದಲ್ಲಿ ಇಬ್ಬರು ಸಹೋದರರು ಒಟ್ಟಿಗೆ ಗಮನಾರ್ಹ ಯಶಸ್ಸು ಸಾಧಿಸಿದ್ದಾರೆ. ಸೀಕರ್‌ನ ಖಾಸಗಿ ಕೋಚಿಂಗ್ ಸಂಸ್ಥೆಯಲ್ಲಿ ಓದುತ್ತಿದ್ದ ಅನೀಶ್ ಬಿಡಿಯಾಸರ್ ಮತ್ತು ಆಶೀಷ್ ಬಿಡಿಯಾಸರ್ ಎಂಬ ಇಬ್ಬರು ಸಹೋದರರು NEET ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಉನ್ನತ ಶ್ರೇಣಿಯನ್ನು ಪಡೆದಿದ್ದಾರೆ. ಅನೀಶ್ ಬಿಡಿಯಾಸರ್ ಆಲ್ ಇಂಡಿಯಾ ರ್ಯಾಂಕ್ 194 ಮತ್ತು ವರ್ಗದ ಶ್ರೇಣಿ 46ನ್ನು ಪಡೆದಿದ್ದಾರೆ.

ಇದೇ ರೀತಿ, ಆಶೀಷ್ ಬಿಡಿಯಾಸರ್ ಆಲ್ ಇಂಡಿಯಾ ರ್ಯಾಂಕ್ 244 ಮತ್ತು ವರ್ಗದ ಶ್ರೇಣಿ 66ನ್ನು ಗಳಿಸಿದ್ದಾರೆ. ಈ ಇಬ್ಬರು ಸಹೋದರರು ರಾಜಸ್ಥಾನದ ನಾಗೌರ್ ಜಿಲ್ಲೆಯ ಡೀಡ್ವಾನಾದ ನಿವಾಸಿಗಳು. ಇವರ ತಂದೆ ಡೀಡ್ವಾನಾದಲ್ಲಿ ಗುತ್ತಿಗೆದಾರರಾಗಿ ಕೆಲಸ ಮಾಡುತ್ತಾರೆ ಮತ್ತು ತಾಯಿ ಗೃಹಿಣಿ. ಇಬ್ಬರೂ ಸಹೋದರರು ತಮ್ಮ ಯಶಸ್ಸಿಗೆ ತಮ್ಮ ಪೋಷಕರ ಬೆಂಬಲವನ್ನು ಕಾರಣವೆಂದು ತಿಳಿಸಿದ್ದಾರೆ.

ಇಬ್ಬರು ಸಹೋದರರ ವೈದ್ಯರಾಗುವ ಕನಸು ನನಸಾಗಲಿದೆ

ಆಶೀಷ್ ಬಿಡಿಯಾಸರ್ ಹೇಳಿಕೆಯ ಪ್ರಕಾರ, ಇಬ್ಬರು ಸಹೋದರರು ಒಟ್ಟಿಗೆ ನಾಗೌರ್‌ನಿಂದ ಸೀಕರ್‌ಗೆ NEET ತಯಾರಿಗಾಗಿ ಬಂದಿದ್ದರು. ಇಬ್ಬರೂ ಒಂದೇ ಕೊಠಡಿಯಲ್ಲಿ ವಾಸವಾಗಿದ್ದು, ಒಟ್ಟಿಗೆ ಓದುತ್ತಿದ್ದರು ಮತ್ತು ಒಟ್ಟಿಗೆ ಊಟ ಮಾಡುತ್ತಿದ್ದರು. ಇವರ ದೈನಂದಿನ ದಿನಚರಿ ಒಂದೇ ರೀತಿಯಾಗಿತ್ತು. ಪ್ರತಿದಿನ ಓದಿನ ನಂತರ ಇಬ್ಬರೂ ಒಬ್ಬರಿಗೊಬ್ಬರು ಪರೀಕ್ಷಾ ಪತ್ರಿಕೆಗಳನ್ನು ತಯಾರಿಸುತ್ತಿದ್ದರು. ಸ್ವಯಂ ಅಧ್ಯಯನಕ್ಕೆ ಇವರು ಹೆಚ್ಚಿನ ಒತ್ತು ನೀಡಿದ್ದಾರೆ. ತಮ್ಮ ಕುಟುಂಬದ ಕನಸು ಇಬ್ಬರು ಸಹೋದರರು ಒಟ್ಟಿಗೆ ವೈದ್ಯರಾಗುವುದು ಎಂದು ಆಶೀಷ್ ತಿಳಿಸಿದ್ದಾರೆ.

ತಂದೆಯ ಮಾತು: ಇಬ್ಬರು ಸಹೋದರರು ಕರಣ-ಅರ್ಜುನ್

ತಂದೆಯೊಂದಿಗೆ ಮಾತನಾಡಿದಾಗ, ಅವರು ತಮ್ಮ ಇಬ್ಬರು ಪುತ್ರರನ್ನು “ಕರಣ-ಅರ್ಜುನ್” ಎಂದು ಕರೆದರು. ಇಬ್ಬರೂ ಎಂದಿಗೂ ಜಗಳವಾಡುವುದಿಲ್ಲ ಮತ್ತು ಯಾವಾಗಲೂ ಒಬ್ಬರಿಗೊಬ್ಬರು ಸಹಕಾರಿಯಾಗಿರುತ್ತಾರೆ ಎಂದು ಹೇಳಿದರು. ಬಾಲ್ಯದಿಂದಲೂ ಅವರಿಗೆ ಉತ್ತಮ ಸಂಸ್ಕಾರವನ್ನು ನೀಡಿದ್ದೇನೆ ಎಂದು ತಿಳಿಸಿದ ಅವರು, ಇದರ ಫಲವಾಗಿ ಇಂದು ಇಬ್ಬರು ಸಹೋದರರು ತಮ್ಮ ಕಠಿಣ ಪರಿಶ್ರಮದಿಂದ NEET ಪರೀಕ್ಷೆಯಲ್ಲಿ ಯಶಸ್ಸು ಸಾಧಿಸಿದ್ದಾರೆ ಎಂದರು. ಶೀಘ್ರದಲ್ಲೇ ಇಬ್ಬರೂ ವೈದ್ಯರಾಗಲಿದ್ದಾರೆ ಎಂದು ಹೆಮ್ಮೆಯಿಂದ ಹೇಳಿದರು.

ತಂದೆಯ ಪ್ರಕಾರ, ಇಬ್ಬರೂ ಸಹೋದರರು ಹಾಸ್ಟೆಲ್‌ನಲ್ಲಿ ಉಳಿದುಕೊಂಡು ತಯಾರಿ ನಡೆಸಿದ್ದರು. ಹಬ್ಬದ ಸಮಯದಲ್ಲೂ ಮನೆಗೆ ಬರುತ್ತಿರಲಿಲ್ಲ. ಸಂಬಂಧಿಕರ ಮನೆಯಲ್ಲಿ ವಿವಾಹ ಸಮಾರಂಭವಿದ್ದರೂ ಭಾಗವಹಿಸದೆ ತಮ್ಮ ಗುರಿಯ ಮೇಲೆ ಕೇಂದ್ರೀಕರಿಸಿದ್ದರು.



Source link

Leave a Reply

Your email address will not be published. Required fields are marked *

TOP