ಬಿಇಎಲ್‌ನಲ್ಲಿ ಕೆಲ್ಸ ಮಾಡ್ಬೇಕಾ? ಪದವೀಧರರಿಗೆ ಇಲ್ಲಿದೆ ಅತ್ಯುತ್ತಮ ಅವಕಾಶ! ಸಂಬಳ ಎಷ್ಟು ಗೊತ್ತಾ?

Hruthin 71 2025 08 b805a0088d553379b54d32d6f586b61c.jpg


Last Updated:

BEL Recruitment 2025: ಭಾರತ ಎಲೆಕ್ಟ್ರಾನಿಕ್ಸ್ ಲಿಮಿಟೆಡ್, ರಕ್ಷಣಾ ಸಚಿವಾಲಯದ ಅಧೀನದಲ್ಲಿರುವ ನವರತ್ನ ಕಂಪನಿಯಾಗಿ, ಬೆಂಗಳೂರು ಸಂಕೀರ್ಣದಲ್ಲಿ ಮಾನವರಹಿತ ವ್ಯವಸ್ಥೆಗಳ ಘಟಕಕ್ಕಾಗಿ ತಾತ್ಕಾಲಿಕ ಆಧಾರದ ಮೇಲೆ ಪ್ರಾಜೆಕ್ಟ್ ಎಂಜಿನಿಯರ್ ಮತ್ತು ಟ್ರೈನಿ ಎಂಜಿನಿಯರ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನಿಸಿದೆ. ಅದ್ರಂತೆ ನೇಮಕಾತಿಯ ಕುರಿತು ಮಾಹಿತಿ ಇಲ್ಲಿದೆ:

BHARAT ELECTRONICS LTD Recruitment 2025BHARAT ELECTRONICS LTD Recruitment 2025
BHARAT ELECTRONICS LTD Recruitment 2025

BEL Recruitment 2025: ಭಾರತ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ (BHARAT ELECTRONICS LTD), ರಕ್ಷಣಾ ಸಚಿವಾಲಯದ (Ministry of Defence) ಅಧೀನದಲ್ಲಿರುವ ನವರತ್ನ ಕಂಪನಿಯಾಗಿ, ಬೆಂಗಳೂರು ಸಂಕೀರ್ಣದಲ್ಲಿ ಮಾನವರಹಿತ ವ್ಯವಸ್ಥೆಗಳ (Unmanned Systems SBU) ಘಟಕಕ್ಕಾಗಿ ತಾತ್ಕಾಲಿಕ ಆಧಾರದ ಮೇಲೆ ಪ್ರಾಜೆಕ್ಟ್ ಎಂಜಿನಿಯರ್ (Project Engineer-I) ಮತ್ತು ಟ್ರೈನಿ ಎಂಜಿನಿಯರ್ (Trainee Engineer-I) ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನಿಸಿದೆ. ಅದ್ರಂತೆ ನೇಮಕಾತಿಯ ಕುರಿತು ಮಾಹಿತಿ ಇಲ್ಲಿದೆ:

ಹುದ್ದೆಗಳ ವಿವರ

  • ಒಟ್ಟು ಹುದ್ದೆಗಳು: 4
  • ಹುದ್ದೆಯ ಹೆಸರು:ಪ್ರಾಜೆಕ್ಟ್ ಎಂಜಿನಿಯರ್-I (PE-I) – 2 ಹುದ್ದೆಗಳುಟ್ರೈನಿ ಎಂಜಿನಿಯರ್-I (TE-I) – 2 ಹುದ್ದೆಗಳು
  • ಕೆಲಸದ ಸ್ಥಳ: BEL ಬೆಂಗಳೂರು ಸಂಕೀರ್ಣ ಮತ್ತು ಏರೋಸ್ಪೇಸ್ ಡಿಫೆನ್ಸ್ ಎಸ್ಟಾಬ್ಲಿಶ್‌ಮೆಂಟ್ (ADE), ಬೆಂಗಳೂರು
  • ನೇಮಕಾತಿ ಪ್ರಕಾರ: ತಾತ್ಕಾಲಿಕ

ವಯೋಮಿತಿ (Age Limit)

  • Project Engineer: ಗರಿಷ್ಠ 32 ವರ್ಷ
  • Trainee Engineer: ಗರಿಷ್ಠ 28 ವರ್ಷ
  • ವಯೋಮಿತಿಯಲ್ಲಿ ವಿನಾಯಿತಿ: OBC ಅಭ್ಯರ್ಥಿಗಳಿಗೆ: 3 ವರ್ಷ, PwBD ಅಭ್ಯರ್ಥಿಗಳಿಗೆ: 10 ವರ್ಷ, ನಿವೃತ್ತ ಸೈನಿಕರಿಗೆ: ಸರ್ಕಾರದ ನಿಯಮಾನುಸಾರ

ಅರ್ಹತಾ ವಿದ್ಯಾರ್ಹತೆ (Qualification):

  • BE / B.Tech / B.Sc (ಎಂಜಿನಿಯರಿಂಗ್) ಪದವಿ — 4 ವರ್ಷಗಳ ಪಠ್ಯಕ್ರಮ
  • ವಿಭಾಗಗಳು: ಮೆಕ್ಯಾನಿಕಲ್, ಏರೋನಾಟಿಕಲ್, ಏರೋಸ್ಪೇಸ್
  • Project Engineer ಹುದ್ದೆಗೆ ಕನಿಷ್ಠ 2 ವರ್ಷಗಳ ಅನುಭವ ಅಗತ್ಯ
  • ಇತರ ವಿಭಾಗದ ಅಭ್ಯರ್ಥಿಗಳ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ

ವೇತನ ಮತ್ತು ಭತ್ಯೆ:

1. Project Engineer (PE-I):

  • 1ನೇ ವರ್ಷ: ರೂ. 40,000
  • 2ನೇ ವರ್ಷ: ರೂ. 45,000
  • 3ನೇ ವರ್ಷ: ರೂ. 50,000
  • 4ನೇ ವರ್ಷ: ರೂ. 55,000

2. Trainee Engineer (TE-I):

  • 1ನೇ ವರ್ಷ: ರೂ. 30,000
  • 2ನೇ ವರ್ಷ: ರೂ. 35,000
  • 3ನೇ ವರ್ಷ: ರೂ. 40,000

ಹೆಚ್ಚುವರಿ ಸೌಲಭ್ಯಗಳು: ಇದ್ರ ಜೊತೆ ವರ್ಷಕ್ಕೆ ರೂ. 12,000/- ಹೆಚ್ಚುವರಿ ಭತ್ಯೆ, ವೈದ್ಯಕೀಯ ವಿಮೆ ಮತ್ತು ಜೀವನ ವಿಮೆ ಸಿಗಲಿದೆ.

ಅರ್ಜಿಯ ಶುಲ್ಕ (Application Fee)

  • Project Engineer: ರೂ. 472/-
  • Trainee Engineer: ರೂ. 177/-
  • PwBD ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ

ಶುಲ್ಕ ಪಾವತಿ ವಿಧಾನ:

  • SBI Collect ಮೂಲಕ ಆನ್‌ಲೈನ್ ಪಾವತಿ
  • BEL ಅಧಿಕೃತ ವೆಬ್‌ಸೈಟ್‌ನಲ್ಲಿ ಲಿಂಕ್ ಲಭ್ಯ: www.bel-india.in

ಆಯ್ಕೆ ವಿಧಾನ (Selection Process)

Project Engineer:

  • ಲಿಖಿತ ಪರೀಕ್ಷೆ + ಸಂದರ್ಶನ
  • ಲಿಖಿತ ಪರೀಕ್ಷೆಗೆ 85% ತೂಕ, ಸಂದರ್ಶನಕ್ಕೆ 15% ತೂಕ

Trainee Engineer:

  • ಕೇವಲ ಲಿಖಿತ ಪರೀಕ್ಷೆಯ ಆಧಾರಿತ ಆಯ್ಕೆ
  • 100 ಅಂಕಗಳ ಪರೀಕ್ಷೆ, ಋಣಾತ್ಮಕ ಅಂಕಗಳ ವ್ಯವಸ್ಥೆ ಅನ್ವಯ
ಅರ್ಜಿಯನ್ನು ಸಲ್ಲಿಸುವ ವಿಧಾನ:

1. BEL ಅಧಿಕೃತ ವೆಬ್‌ಸೈಟ್ www.bel-india.in ಗೆ ಭೇಟಿ ನೀಡಿ

2. “Careers → Job Notifications” ವಿಭಾಗದಿಂದ ಅರ್ಜಿಯನ್ನು ಡೌನ್‌ಲೋಡ್ ಮಾಡಿ

3. ಅಗತ್ಯ ಮಾಹಿತಿಗಳನ್ನು ಸರಿಯಾಗಿ ಭರ್ತಿ ಮಾಡಿ

4. ಅಗತ್ಯ ದಾಖಲೆಗಳೊಂದಿಗೆ ಕೆಳಕಂಡ ವಿಳಾಸಕ್ಕೆ ಅರ್ಜಿಯನ್ನು ಕಳುಹಿಸಬೇಕು

ಅರ್ಜಿಯನ್ನು ಕಳುಹಿಸಬೇಕಾದ ವಿಳಾಸ:

ಉಪ ವ್ಯವಸ್ಥಾಪಕರು (ಮಾನವ ಸಂಪನ್ಮೂಲ)

ಭಾರತ ಎಲೆಕ್ಟ್ರಾನಿಕ್ಸ್ ಲಿಮಿಟೆಡ್

ಜಾಲಹಳ್ಳಿ ಪೋಸ್ಟ್

ಬೆಂಗಳೂರು – 560013

  • ಅರ್ಜಿಯನ್ನು ಕಳುಹಿಸಲು ಕೊನೆಯ ದಿನಾಂಕ: 13 ಸೆಪ್ಟೆಂಬರ್ 2025
  • ಅರ್ಜಿಯ ವಿಧಾನ: ಕಡ್ಡಾಯವಾಗಿ ಸ್ಪೀಡ್‌ಪೋಸ್ಟ್ ಮೂಲಕ ಮಾತ್ರ

ಪ್ರಮುಖ ದಿನಾಂಕಗಳು (Important Dates)

  • ಜಾಹೀರಾತು ಬಿಡುಗಡೆ: 29 ಆಗಸ್ಟ್ 2025
  • ಅರ್ಜಿಯನ್ನು ಕಳುಹಿಸಲು ಕೊನೆಯ ದಿನಾಂಕ: 13 ಸೆಪ್ಟೆಂಬರ್ 2025

ಸಾಮಾನ್ಯ ಸೂಚನೆಗಳು (General Instructions)

  • ಕೇವಲ ಭಾರತೀಯ ನಾಗರಿಕರಿಗೆ ಮಾತ್ರ ಅರ್ಜಿ ಸಲ್ಲಿಸಲು ಅವಕಾಶ
  • ಅಪೂರ್ಣ ಅರ್ಜಿಗಳನ್ನು ತಿರಸ್ಕರಿಸಲಾಗುವುದು
  • BEL ಯಾವುದೇ ಹಂತದಲ್ಲಿ ಅರ್ಜಿಗಳನ್ನು ತಿರಸ್ಕರಿಸುವ ಹಕ್ಕು ಹೊಂದಿದೆ
  • ತಪ್ಪು ಮಾಹಿತಿಯನ್ನು ನೀಡಿದ ಅಭ್ಯರ್ಥಿಗಳ ಅರ್ಜಿ ತಕ್ಷಣ ರದ್ದುಪಡಿಸಲಾಗುತ್ತದೆ
  • ಎಲ್ಲಾ ಅರ್ಜಿಗಳು ಸ್ಪೀಡ್‌ಪೋಸ್ಟ್ ಮೂಲಕ ಕಳುಹಿಸಬೇಕು.

BEL ಸಂಪರ್ಕ ಮಾಹಿತಿ

  • ಅಧಿಕೃತ ವೆಬ್‌ಸೈಟ್: www.bel-india.in
  • ದೂರವಾಣಿ: 080-22197692
  • ಇಮೇಲ್: hr_scus@bel.co.in

ಕನ್ನಡ ಸುದ್ದಿ/ ನ್ಯೂಸ್/Jobs/

BEL Recruitment 2025: ಬಿಇಎಲ್‌ನಲ್ಲಿ ಕೆಲ್ಸ ಮಾಡ್ಬೇಕಾ? ಪದವೀಧರರಿಗೆ ಇಲ್ಲಿದೆ ಅತ್ಯುತ್ತಮ ಅವಕಾಶ! ಸಂಬಳ ಎಷ್ಟು ಗೊತ್ತಾ?



Source link

Leave a Reply

Your email address will not be published. Required fields are marked *

TOP