ಅಭ್ಯರ್ಥಿಗಳು ಕನಿಷ್ಠ 8ನೇ ತರಗತಿ ಅಥವಾ 10ನೇ ತರಗತಿ ಉತ್ತೀರ್ಣರಾಗಿರಬೇಕು. ಮಾನ್ಯತೆ ಪಡೆದ ಮಂಡಳಿಯಿಂದ ಶಿಕ್ಷಣ ಪಡೆದಿರಬೇಕು. ಯಾವುದೇ ತಾಂತ್ರಿಕ ತರಬೇತಿ ಹೊಂದಿರುವವರಿಗೆ ಹೆಚ್ಚುವರಿ ಆದ್ಯತೆ ನೀಡಬಹುದು.
ಅರ್ಜಿ ಸಲ್ಲಿಸಲು ಕನಿಷ್ಠ ವಯಸ್ಸು 14 ವರ್ಷ ಮತ್ತು ಗರಿಷ್ಠ ವಯಸ್ಸು 18 ವರ್ಷ. ಮೀಸಲಾತಿ ವರ್ಗದ ಅಭ್ಯರ್ಥಿಗಳಿಗೆ ಸರ್ಕಾರದ ನಿಯಮಾನುಸಾರ ವಯೋಮಿತಿಯಲ್ಲಿ ಸಡಿಲಿಕೆ ಲಭ್ಯವಿದೆ.
ನೇಮಕಾತಿ ಪ್ರಕ್ರಿಯೆ
1. ಲಿಖಿತ ಪರೀಕ್ಷೆ (OMR ಆಧಾರಿತ, MCQ ಮಾದರಿ)
2. ದಾಖಲೆ ಪರಿಶೀಲನೆ
3. ವೈದ್ಯಕೀಯ ಪರೀಕ್ಷೆ
ಲಿಖಿತ ಪರೀಕ್ಷೆ ಅಕ್ಟೋಬರ್ 2025ರಲ್ಲಿ ಮುಂಬೈಯಲ್ಲಿ ನಡೆಯುವ ಸಾಧ್ಯತೆ ಇದೆ.
ಲಿಖಿತ ಪರೀಕ್ಷೆಯಲ್ಲಿ ಒಟ್ಟು 100 ಪ್ರಶ್ನೆಗಳು, 100 ಅಂಕಗಳಿಗೆ.
ವಿಜ್ಞಾನ – 35 ಪ್ರಶ್ನೆಗಳು
ಗಣಿತ – 35 ಪ್ರಶ್ನೆಗಳು
ಸಾಮಾನ್ಯ ಜ್ಞಾನ – 30 ಪ್ರಶ್ನೆಗಳು
ಪರೀಕ್ಷಾ ಅವಧಿ 2 ಗಂಟೆಗಳು. ತಪ್ಪು ಉತ್ತರಗಳಿಗೆ ಯಾವುದೇ ಋಣಾತ್ಮಕ ಅಂಕಗಳಿಲ್ಲ. ಪ್ರಶ್ನೆ ಪತ್ರಿಕೆಗಳು ಹಿಂದಿ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಲಭ್ಯವಿರುತ್ತವೆ.
2. ಮುಖ್ಯ ಪುಟದಲ್ಲಿ ಸಂಬಂಧಿತ ಲಿಂಕ್ ಕ್ಲಿಕ್ ಮಾಡಿ.
3. ಹೊಸ ಪುಟ ತೆರೆಯುತ್ತದೆ – ಅಲ್ಲಿ ನೋಂದಣಿ ಮಾಡಿ, ನಂತರ ಲಾಗಿನ್ ಆಗಿ.
4. ಫಾರ್ಮ್‌ನಲ್ಲಿ ಅಗತ್ಯ ಮಾಹಿತಿಯನ್ನು ನಮೂದಿಸಿ.
5. ಅಗತ್ಯ ದಾಖಲೆಗಳನ್ನು ಸೂಚಿಸಿದ ಗಾತ್ರದಲ್ಲಿ ಅಪ್‌ಲೋಡ್ ಮಾಡಿ.
6. ಫಾರ್ಮ್ ಪರಿಶೀಲಿಸಿ, ಸಲ್ಲಿಸಿ.
7. ಭವಿಷ್ಯದಲ್ಲಿ ಬಳಕೆಗಾಗಿ ಮುದ್ರಣ ತೆಗೆದುಕೊಳ್ಳಿ.
ಅರ್ಜಿ ಸಲ್ಲಿಸಲು ಯಾವುದೇ ಶುಲ್ಕವಿಲ್ಲ.
ಹುದ್ದೆಗಳು ಅಪ್ರೆಂಟಿಸ್ ತರಬೇತಿಗೆ ಸಂಬಂಧಿಸಿದ್ದು, ಇದು ಒಪ್ಪಂದ ಆಧಾರಿತವಾಗಿರುತ್ತದೆ.
ನೇಮಕಾತಿ ಮುಗಿದ ನಂತರ ಶಾಶ್ವತ ಸರ್ಕಾರಿ ಉದ್ಯೋಗದ ಭರವಸೆ ಇರುವುದಿಲ್ಲ.
ಅಭ್ಯರ್ಥಿಗಳು ಕಡ್ಡಾಯವಾಗಿ ವೈದ್ಯಕೀಯ ಪರೀಕ್ಷೆಯಲ್ಲಿ ಉತ್ತೀರ್ಣರಾಗಬೇಕು.
ಆಯ್ಕೆಗೊಂಡ ಅಭ್ಯರ್ಥಿಗಳನ್ನು ನೇವಲ್ ಡಾಕ್‌ಯಾರ್ಡ್, ಮುಂಬೈಯಲ್ಲಿ ಹುದ್ದೆಗೆ ನಿಯೋಜಿಸಲಾಗುತ್ತದೆ. ವೇತನ ಮತ್ತು ಭತ್ಯೆ Apprentice Act ನಿಯಮಾನುಸಾರ ನೀಡಲಾಗುತ್ತದೆ.
- 1ನೇ ವರ್ಷದ ಅಪ್ರೆಂಟಿಸ್‌ಗಳಿಗೆ – ಪ್ರತಿ ತಿಂಗಳು ರೂ.7,700/- (Stipend)
- 2ನೇ ವರ್ಷದ ಅಪ್ರೆಂಟಿಸ್‌ಗಳಿಗೆ – ಪ್ರತಿ ತಿಂಗಳು ರೂ.8,050/- (Stipend)
ಅರ್ಜಿ ಪ್ರಕ್ರಿಯೆ ಆರಂಭ – ಸೆಪ್ಟೆಂಬರ್ 1, 2025
ಅರ್ಜಿ ಸಲ್ಲಿಸಲು ಕೊನೆ ದಿನಾಂಕ – ಸೆಪ್ಟೆಂಬರ್ 21, 2025
ಈ ಹುದ್ದೆಗಳು ಸರ್ಕಾರೀ ವಲಯದಲ್ಲಿ ಉತ್ತಮ ಅವಕಾಶವಾಗಿರುವುದರಿಂದ, ಆಸಕ್ತ ಅಭ್ಯರ್ಥಿಗಳು ಸಮಯ ಮಿಸ್ ಮಾಡದೇ ಅರ್ಜಿ ಸಲ್ಲಿಸಬೇಕು.
Mumbai,Maharashtra
August 25, 2025 11:15 PM IST