ನಿಮ್ಮ ಆಹಾರದಲ್ಲಿ ಇದೊಂದು ಸ್ನ್ಯಾಕ್ಸ್ ಸೇರಿಸಿಕೊಳ್ಳಿ ಸಾಕು, ನಿಮ್ಮ ಹಾರ್ಟ್ ಹೆಲ್ದಿಯಾಗಿ ಇರುತ್ತೆ!

Badam 16656575123x2.jpg


Last Updated:

ಬಾದಾಮಿ ಸೇವಿಸಿದ ಜನರು ತಮ್ಮ ApoB ಮಟ್ಟವನ್ನು ಸುಧಾರಿಸಿದ್ದಾರೆ ಎಂದು ತಿಳಿದು ಬಂದಿದೆ.  ಬಾದಾಮಿಯೊಂದಿಗೆ ApoB ಮಟ್ಟಗಳು ಮತ್ತು ApoB-to-ApoA ಅನುಪಾತವು ಸುಧಾರಿಸಿದೆ. 

News18News18
News18

ಬಾದಾಮಿ (Badam)… ಚಿಕ್ಕ ಮಕ್ಕಳಿಗೂ ಸಣ್ಣ ಡ್ರೈಪ್ರೂಟ್ಸ್‌ನ (Dry Fruits) ಪ್ರಯೋಜನಗಳು ಗೊತ್ತಿದೆ. ಹೌದು, ಬಾದಾಮಿ ನಮ್ಮ ದೇಹಕ್ಕೆ ಬೇಕಾದ ಹಲವು ಆರೋಗ್ಯ ಪ್ರಯೋಜನಗಳನ್ನು (Health Benefits) ಒದಗಿಸುತ್ತದೆ. ನೀವೂ ಈಗಾಗ್ಲೇ ಆಹಾರವನ್ನು ಸೇವಿಸುವ ಅಭ್ಯಾಸ ಹೊಂದಿದ್ದರೆ ಒಳ್ಳೆಯದು, ಇಲ್ಲವಾದರೆ ಇಂದಿನಿಂದಲೇ ಶುರು ಮಾಡಿಕೊಳ್ಳಿ. ಏಕೆಂದರೆ ಹೊಸ ಅಧ್ಯಯನವು, ಬಾದಾಮಿಯು ಹೃದಯದ ಆರೋಗ್ಯಕ್ಕೆ (Heart Health)  ಹೇರಳವಾದ ಪ್ರಯೋಜನ ನೀಡುತ್ತದೆ, ಹೃದಯದ ರಕ್ಷಣೆಯಲ್ಲಿ ಬಾದಾಮಿ ಬೆಸ್ಟ್‌ ಎಂದು ಹೇಳಿದೆ.

ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುತ್ತದೆ ಬಾದಾಮಿ: ಹೊಸ ಅಧ್ಯಯನ

ಕೆಟ್ಟ ಕೊಲೆಸ್ಟ್ರಾಲ್‌ ಮೇಲೆ ಅಪೊಲಿಪೋಪ್ರೋಟೀನ್ B ಅಥವಾ ApoB ಎಂಬ ಅಂಶ ಇರುತ್ತದೆ. ApoB ನಿಮ್ಮ ರಕ್ತದಲ್ಲಿನ ಪ್ರತಿಯೊಂದು ಕೆಟ್ಟ ಕೊಲೆಸ್ಟ್ರಾಲ್ ಕಣದ ಮೇಲೆ ಇರುತ್ತದೆ. ಇದರ ಸಂಖ್ಯೆ ದೇಹದಲ್ಲಿ ಹೆಚ್ಚಿರಬಾರದು. ಹೆಚ್ಚಾದರೆ ಹೃದಯಕ್ಕೆ ಮಾರಕ. ಇದನ್ನು ಕಡಿಮೆ ಮಾಡುವಲ್ಲಿ ಬಾದಾಮಿ ಮೇಲುಗೈ ಸಾಧಿಸಿದೆ.

ಸಂಶೋಧನೆ ನಡೆದಿದ್ದು ಹೇಗೆ?

ನ್ಯೂಟ್ರಿಯೆಂಟ್ಸ್‌ನಲ್ಲಿ ಹೊಸ ಅಧ್ಯಯನವು 2,485 ವಯಸ್ಕರೊಂದಿಗೆ 36   ಪ್ರಯೋಗಗಳನ್ನು ಮಾಡಿತು. ಅಧ್ಯಯನಗಳು ಭಾಗವಹಿಸುವವರು ಬಾದಾಮಿಯನ್ನು ಪ್ರತಿದಿನ ತಿನ್ನಬೇಕು ಮತ್ತು ನಂತರ ರಾತ್ರಿಯ ಉಪವಾಸದ ನಂತರ ಕೊಲೆಸ್ಟ್ರಾಲ್ ಮತ್ತು ಇತರ ರಕ್ತದ ಕೊಬ್ಬನ್ನು ಪರಿಶೀಲಿಸಬೇಕು ಎಂದು ಹೇಳಿದ್ದವು.

ಸಂಶೋಧನೆಯ ರಿಸಲ್ಟ್ ಏನು?

ಇಲ್ಲಿ, ಬಾದಾಮಿ ಸೇವಿಸಿದ ಜನರು ತಮ್ಮ ApoB ಮಟ್ಟವನ್ನು ಸುಧಾರಿಸಿದ್ದಾರೆ ಎಂದು ತಿಳಿದು ಬಂದಿದೆ.  ಬಾದಾಮಿಯೊಂದಿಗೆ ApoB ಮಟ್ಟಗಳು ಮತ್ತು ApoB-to-ApoA ಅನುಪಾತವು ಸುಧಾರಿಸಿದೆ.  ಬಾದಾಮಿ ಸೇವಿಸಿದ ಜನರಲ್ಲಿ ApoB ಪ್ರತಿ ಡೆಸಿಲೀಟರ್‌ಗೆ ಸುಮಾರು 4 ರಿಂದ 5 ಮಿಲಿಗ್ರಾಂಗಳಷ್ಟು ಕಡಿಮೆಯಾಗಿದೆ. ApoB-to-ApoA ಅನುಪಾತವು ಸಹ ಕಡಿಮೆಯಾಗಿದೆ, ಇದು ಉತ್ತಮ ಹೃದಯ ಆರೋಗ್ಯವನ್ನು ಸೂಚಿಸುತ್ತದೆ ಎಂದು ಸಂಶೋಧಕರು ಹೇಳಿದ್ದಾರೆ.

ಅಲ್ಲದೇ ನಿಯಮಿತವಾಗಿ ಬಾದಾಮಿ ಸೇವನೆಯು, ಹಲವಾರು ಹೃದಯ-ಸಂಬಂಧಿತ ಕಾಯಿಲೆಯಗಳನ್ನು ದೂರ ಮಾಡುತ್ತದೆ ಎಂದು ತಿಳಿದು ಬಂದಿದೆ. ಪ್ರಯೋಗಗಳು ಬಾದಾಮಿ LDL ಕೊಲೆಸ್ಟ್ರಾಲ್ ಮತ್ತು ಒಟ್ಟು ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುವಲ್ಲಿ ಕೂಡ ಸಹಾಯ ಮಾಡಿದೆ ಎಂಬುವುದು ಮತ್ತೊಮ್ಮೆ ಪ್ರಯೋಗದಲ್ಲಿ ಸಾಬೀತಾಗಿದೆ. HDL ಅಲ್ಲದ ಕೊಲೆಸ್ಟ್ರಾಲ್ ಮತ್ತು ಸಾಮಾನ್ಯ ಕೊಲೆಸ್ಟ್ರಾಲ್ ಅನುಪಾತಗಳು ಸಹ ಸುಧಾರಿಸಿದ್ದವು ಎಂಬುವುದು ಗೊತ್ತಾಗಿದೆ. ಬಾದಾಮಿ, ರಕ್ತದಲ್ಲಿನ ಲಿಪಿಡ್ ಅಥವಾ ಕೊಬ್ಬಿನ ಮಟ್ಟವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಇದು ಹೃದಯದ ಆರೋಗ್ಯಕ್ಕೆ ಪ್ರಯೋಜನವನ್ನು ನೀಡುತ್ತದೆ. ಈ ಹಿಂದಿನ ಅಧ್ಯಯನಗಳು ಕೂಡ, ಬಾದಾಮಿ ರಕ್ತಪ್ರವಾಹದಲ್ಲಿ ಉತ್ಕರ್ಷಣ ನಿರೋಧಕಗಳ ಮಟ್ಟವನ್ನು ಗಮನಾರ್ಹವಾಗಿ ಹೆಚ್ಚಿಸುತ್ತದೆ, ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ ಮತ್ತು ಹೃದಯವನ್ನು ರಕ್ಷಿಸುತ್ತದೆ ಎಂದಿವೆ.

ನೀವು ಇಂದೇ ಬಾದಾಮಿ ತಿನ್ನಲು ಶುರು ಮಾಡಿ

  • ನೀವು ಹೃದಯ-ಆರೋಗ್ಯಕರ ಸಂಖ್ಯೆಗಳನ್ನು ಬೆಂಬಲಿಸುವ ತಿಂಡಿಯನ್ನು ಹುಡುಕುತ್ತಿದ್ದರೆ, ಬಾದಾಮಿ ಉತ್ತಮ ಆಯ್ಕೆ ಎಂದು ಅಧ್ಯಯನ ದೃಢಪಡಿಸಿದೆ. ನೀವೂ ನಿಮ್ಮ ಡಯೆಟ್‌ನಲ್ಲಿ ಬಾದಾಮಿ ಸೇರಿಸಿಕೊಳ್ಳಬೇಕು ಅಂತಿದ್ದರೆ ಈ ಕೆಳಗಿನ ಅಂಶಗಳನ್ನು ಮನಸ್ಸಿನಲ್ಲಿಟ್ಟುಕೊಂಡು ಬಾದಾಮಿಗಳನ್ನು ಸೇವಿಸಬೇಕು.
  • ಅಪರ್ಯಾಪ್ತ ಕೊಬ್ಬುಗಳು ಮತ್ತು ಫೈಬರ್ ಅನ್ನು ಸೇರಿಸುವಾಗ ಹೆಚ್ಚುವರಿ ಕ್ಯಾಲೊರಿಗಳನ್ನು ತಪ್ಪಿಸಲು ಸಂಸ್ಕರಿಸಿದ-ಕಾರ್ಬ್ ಅಥವಾ ಅಲ್ಟ್ರಾ-ಸಂಸ್ಕರಿಸಿದ ತಿಂಡಿಗಳ ಬದಲಿಗೆ ಒಂದು ಹಿಡಿ ಬಾದಾಮಿಗೆ ನಿಮ್ಮ ತಿಂಡಿಗಳನ್ನು ಬದಲಾಯಿಸಿಕೊಳ್ಳಿ.
  • ಒಬ್ಬರು ದಿನಕ್ಕೆ 23 ಬಾದಾಮಿಗಳನ್ನು ತಿನ್ನಬಹುದು.
  • ಫೈಬರ್ ಮತ್ತು ಪ್ರೋಟೀನ್ ಎರಡನ್ನೂ ಪಡೆಯಲು ಬಾದಾಮಿಯನ್ನು ಹಣ್ಣು ಅಥವಾ ಮೊಸರಿನ ಜೊತೆ ತಿನ್ನಿ.
  • ಸೋಡಿಯಂ ಅನ್ನು ನಿಯಂತ್ರಣದಲ್ಲಿಡಲು ಉಪ್ಪುರಹಿತ ಬಾದಾಮಿಯನ್ನು ಆರಿಸಿಕೊಳ್ಳುವುದು ಒಳ್ಳೆಯದು.



Source link

Leave a Reply

Your email address will not be published. Required fields are marked *

TOP