Last Updated:
Karnataka Govt Job: ಕರ್ನಾಟಕ ಸರ್ಕಾರದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆ (RDPR Karnataka) 2025ನೇ ಸಾಲಿಗೆ ಒಂಬಡ್ಸ್‌ಪರ್ಸನ್ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಬಿಡುಗಡೆ ಮಾಡಿದೆ. ಸರ್ಕಾರಿ ಉದ್ಯೋಗಾಕಾಂಕ್ಷಿಗಳಿಗೆ ಇದು ಮಹತ್ವದ ಅವಕಾಶವಾಗಿದ್ದು, ಅರ್ಜಿ ಸಲ್ಲಿಕೆ ಪ್ರಕ್ರಿಯೆ ಪ್ರಾರಂಭವಾಗಿದೆ. ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ ಮೂಲಕ ಅರ್ಜಿ ಸಲ್ಲಿಸಬಹುದು. ಆ ಕುರಿತ ಸಂಪೂರ್ಣ ವಿವರ ಇಲ್ಲಿದೆ:
Karnataka Govt Job: ಕರ್ನಾಟಕ ಸರ್ಕಾರದ (Government of Karnataka) ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆ (Department of Rural Development and Panchayat Raj) 2025ನೇ ಸಾಲಿಗೆ ಒಂಬಡ್ಸ್‌ಪರ್ಸನ್ ಹುದ್ದೆಗಳ (Ombudsman post) ನೇಮಕಾತಿಗೆ ಅಧಿಸೂಚನೆ ಬಿಡುಗಡೆ ಮಾಡಿದೆ. ಸರ್ಕಾರಿ ಉದ್ಯೋಗಾಕಾಂಕ್ಷಿಗಳಿಗೆ (Government job seekers) ಇದು ಮಹತ್ವದ ಅವಕಾಶವಾಗಿದ್ದು, ಅರ್ಜಿ ಸಲ್ಲಿಕೆ ಪ್ರಕ್ರಿಯೆ ಪ್ರಾರಂಭವಾಗಿದೆ. ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ ಮೂಲಕ ಅರ್ಜಿ ಸಲ್ಲಿಸಬಹುದು. ಆ ಕುರಿತ ಸಂಪೂರ್ಣ ವಿವರ ಇಲ್ಲಿದೆ:
ನೇಮಕಾತಿ ವಿವರಗಳು
- ಹುದ್ದೆಯ ಹೆಸರು: ಒಂಬಡ್ಸ್‌ಪರ್ಸನ್
- ಹುದ್ದೆಗಳ ಸಂಖ್ಯೆ: ವಿವಿಧ
- ಉದ್ಯೋಗ ಸ್ಥಳ: ಚಾಮರಾಜನಗರ, ಚಿಕ್ಕಮಗಳೂರು, ಕಲ್ಬುರ್ಗಿ, ದಕ್ಷಿಣ ಕನ್ನಡ ಜಿಲ್ಲೆಗಳು
- ಅಧಿಕೃತ ವೆಬ್‌ಸೈಟ್: https://rdpr.karnataka.gov.in/
- ಅರ್ಜಿ ಪ್ರಾರಂಭ ದಿನಾಂಕ: 02-09-2025
- ಅರ್ಜಿ ಕೊನೆಯ ದಿನಾಂಕ: 03-10-2025
ಈ ಹುದ್ದೆಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಪದವಿ (Degree) ಪೂರ್ಣಗೊಳಿಸಿರಬೇಕು. ಜೊತೆಗೆ ಕನಿಷ್ಠ 10 ವರ್ಷಗಳ ಅನುಭವ ಕಡ್ಡಾಯ. ಇದರೊಂದಿಗೆ ಸಮುದಾಯ ಸಂಸ್ಥೆಗಳು ಅಥವಾ ಸಾರ್ವಜನಿಕರೊಂದಿಗೆ ನೇರವಾಗಿ ಕೆಲಸ ಮಾಡಿದ ಅನುಭವವು ಪ್ಲಸ್ ಪಾಯಿಂಟ್.
ಗರಿಷ್ಠ ವಯೋಮಿತಿ: 03-10-2025 ದಿನಾಂಕದಂತೆ 66 ವರ್ಷ
ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ವೇತನ ₹45,000/- ನೀಡಲಾಗುತ್ತದೆ.
ಈ ಹುದ್ದೆಗೆ ಯಾವುದೇ ಅರ್ಜಿ ಶುಲ್ಕ ವಿಧಿಸಲಾಗುವುದಿಲ್ಲ. ಎಲ್ಲ ಅರ್ಜಿದಾರರು ಉಚಿತವಾಗಿ ಅರ್ಜಿ ಸಲ್ಲಿಸಬಹುದು.
ಅಭ್ಯರ್ಥಿಗಳ ಆಯ್ಕೆ ಸಂದರ್ಶನದ (Interview) ಆಧಾರದ ಮೇಲೆ ಮಾತ್ರ ನಡೆಯಲಿದೆ. ಯಾವುದೇ ಲಿಖಿತ ಪರೀಕ್ಷೆ ಇರುವುದಿಲ್ಲ.
ಅರ್ಜಿ ಸಲ್ಲಿಸುವ ವಿಧಾನ:
- https://rdpr.karnataka.gov.in/ ಎಂಬ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ
- ನಿಮಗೆ ಸಂಬಂಧಿಸಿದ RDPR Karnataka ವಿಭಾಗವನ್ನು ಆರಿಸಿ.
- ಒಂಬಡ್ಸ್‌ಪರ್ಸನ್ ಹುದ್ದೆಯ ಅಧಿಸೂಚನೆಯನ್ನು ಓದಿ ಅರ್ಹತೆಯನ್ನು ಪರಿಶೀಲಿಸಿ.
- ಆನ್‌ಲೈನ್ ಅರ್ಜಿ ನಮೂನೆಯ ಲಿಂಕ್ ತೆರೆಯಿರಿ.
- ಎಲ್ಲಾ ವಿವರಗಳನ್ನು ಸರಿಯಾಗಿ ಭರ್ತಿ ಮಾಡಿ.
- ಅರ್ಜಿಯನ್ನು ಸಬ್ಮಿಟ್ ಮಾಡಿ, ಪ್ರಿಂಟ್ ಕಾಪಿಯನ್ನು ತೆಗೆದು ಇಟ್ಟುಕೊಳ್ಳಿ.
- ಪ್ರಿಂಟ್ ಮಾಡಿದ ಅರ್ಜಿಯ ಪ್ರತಿಯನ್ನು ಕೆಳಗಿನ ವಿಳಾಸಕ್ಕೆ ಕಳುಹಿಸಿ.
- ಅರ್ಜಿ ಕಳುಹಿಸಬೇಕಾದ ವಿಳಾಸ: Commissioner Rural Development, Rural Development Commission, Rural Development and Panchayat Raj Department, 5th Floor, Plot No. 1243, K.S.I.I.D.C. Building, IT Park, South Block, Rajajinagar Industrial Estate, Bangalore – 560010
ಪ್ರಮುಖ ಲಿಂಕ್‌ಗಳು
ಪ್ರಮುಖ ದಿನಾಂಕಗಳು
- ಅಧಿಸೂಚನೆ ಬಿಡುಗಡೆ: 02 ಸೆಪ್ಟೆಂಬರ್ 2025
- ಅರ್ಜಿ ಸಲ್ಲಿಕೆ ಪ್ರಾರಂಭ: 02 ಸೆಪ್ಟೆಂಬರ್ 2025
- ಅರ್ಜಿ ಕೊನೆಯ ದಿನಾಂಕ: 03 ಅಕ್ಟೋಬರ್ 2025
September 07, 2025 6:13 PM IST