Last Updated:
Govt Job: ಉಡುಪಿಯ ಕೋಚಿನ್ ಶಿಪ್‌ಯಾರ್ಡ್ ಲಿಮಿಟೆಡ್, ಭಾರತ ಸರ್ಕಾರದ ಅಧೀನ ಸಂಸ್ಥೆಯಾಗಿದ್ದು, ಮಲ್ಪೆ ಯಲ್ಲಿರುವ ತನ್ನ ಘಟಕಕ್ಕೆ ಶಾಶ್ವತ ಹುದ್ದೆಗಳಿಗೆ ಅರ್ಹ ನಾಗರಿಕರಿಂದ ಆನ್‌ಲೈನ್ ಅರ್ಜಿಗಳನ್ನು ಆಹ್ವಾನಿಸಿದೆ. ಹಾಗಾಗಿ, ನೇಮಕಾತಿಯ ಕುರಿತು ಮಾಹಿತಿ ಇಲ್ಲಿದೆ:
Govt Job: ಉಡುಪಿಯ ಕೋಚಿನ್ ಶಿಪ್‌ಯಾರ್ಡ್ ಲಿಮಿಟೆಡ್ (Udupi Cochin Shipyard Ltd – UCSL), ಭಾರತ ಸರ್ಕಾರದ ಅಧೀನ ಸಂಸ್ಥೆಯಾಗಿದ್ದು, ಮಲ್ಪೆ ಯಲ್ಲಿರುವ ತನ್ನ ಘಟಕಕ್ಕೆ ಶಾಶ್ವತ ಹುದ್ದೆಗಳಿಗೆ ಅರ್ಹ ನಾಗರಿಕರಿಂದ ಆನ್‌ಲೈನ್ ಅರ್ಜಿಗಳನ್ನು ಆಹ್ವಾನಿಸಿದೆ. ಹಾಗಾಗಿ, ನೇಮಕಾತಿಯ ಕುರಿತು ಮಾಹಿತಿ ಇಲ್ಲಿದೆ:
ಒಟ್ಟು ಹುದ್ದೆಗಳ ಸಂಖ್ಯೆ: 2
- ವ್ಯವಸ್ಥಾಪಕ (ಯೋಜನೆ ಮತ್ತು ವ್ಯವಹಾರ ಅಭಿವೃದ್ಧಿ) – 1 (ಸಾಮಾನ್ಯ)
- ಉಪ ವ್ಯವಸ್ಥಾಪಕ (ಇಲೆಕ್ಟ್ರಿಕಲ್ ಡಿಸೈನ್) – 1 1 (OBC ಮೀಸಲಾತಿ)
ಉದ್ಯೋಗ ಸ್ಥಳ: UCSL, ಮಾಲ್ಪೆ, ಉಡುಪಿ, ಕರ್ನಾಟಕ
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 24 ಜುಲೈ 2025
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 14 ಆಗಸ್ಟ್ 2025
ಅಧಿಕೃತ ವೆಬ್‌ಸೈಟ್‌ಗಳು: https://udupicsl.com ಅಥವಾ www.cochinshipyard.in
ವಿದ್ಯಾರ್ಹತೆ:
- ವ್ಯವಸ್ಥಾಪಕ: ಮೆಕಾನಿಕಲ್, ಎಲೆಕ್ಟ್ರಿಕಲ್, ನಾವಲ್ ಆರ್ಕಿಟೆಕ್ಚರ್ ಅಥವಾ ಮೆರೈನ್ ಇಂಜಿನಿಯರಿಂಗ್‌ನಲ್ಲಿ ಕನಿಷ್ಟ 60% ಅಂಕಗಳೊಂದಿಗೆ ಪದವಿ.
- ಉಪ ವ್ಯವಸ್ಥಾಪಕ: ಎಲೆಕ್ಟ್ರಿಕಲ್, ಎಲೆಕ್ಟ್ರಿಕಲ್ & ಎಲೆಕ್ಟ್ರಾನಿಕ್ಸ್ ಅಥವಾ ಎಲೆಕ್ಟ್ರಿಕಲ್ & ಇನ್‌ಸ್ಟ್ರುಮೆಂಟೇಶನ್ ಎಂಜಿನಿಯರಿಂಗ್‌ನಲ್ಲಿ ಕನಿಷ್ಠ 60% ಅಂಕಗಳೊಂದಿಗೆ ಪದವಿ.
ಅನುಭವ:
- ವ್ಯವಸ್ಥಾಪಕ: 9 ವರ್ಷಗಳ ಅನುಭವ
- ಉಪ ವ್ಯವಸ್ಥಾಪಕ: 7 ವರ್ಷಗಳ ಅನುಭವ
ಉಭಯ ಹುದ್ದೆಗಳಿಗೆ ಶಿಪ್ ಬಿಲ್ಡಿಂಗ್, ಶಿಪ್ ರಿಪೇರ್, ಮೆರೈನ್ ಅಥವಾ ಸರಕಾರೀ/ಅರ್ಧ ಸರಕಾರೀ ಸಂಸ್ಥೆಗಳಲ್ಲಿ ಅನುಭವ ಹೊಂದಿರುವವರು ಅರ್ಹರಾಗಿರುತ್ತಾರೆ.
ವಯೋಮಿತಿ:
- ವ್ಯವಸ್ಥಾಪಕ: ಗರಿಷ್ಠ 40 ವರ್ಷ
- ಉಪ ವ್ಯವಸ್ಥಾಪಕ: ಗರಿಷ್ಠ 35 ವರ್ಷ
ವಯೋಮಿತಿ ಸಡಿಲಿಕೆ: OBC ಅಭ್ಯರ್ಥಿಗಳಿಗೆ 3 ವರ್ಷ, ,ಮತ್ತು ಮಾಜಿ ಸೈನಿಕರಿಗೆ ಗರಿಷ್ಠ 10 ವರ್ಷ
ಅರ್ಜಿ ಶುಲ್ಕ: ಸಾಮಾನ್ಯ/OBC ಅಭ್ಯರ್ಥಿಗಳಿಗೆ ₹1000 (ಅಪರಿಹಾರ್ಯ), SC/ST ಅಭ್ಯರ್ಥಿಗಳಿಗೆ ಶುಲ್ಕವಿಲ್ಲ
ವೇತನ ಶ್ರೇಣಿ:
- ವ್ಯವಸ್ಥಾಪಕ (E3): ₹60,000 – ₹1,80,000
- ಉಪ ವ್ಯವಸ್ಥಾಪಕ (E2): ₹50,000 – ₹1,60,000
ಅರ್ಹ ಅಭ್ಯರ್ಥಿಗಳಿಗೆ PowerPoint Presentation (30 ಅಂಕ), Work Experience (40 ಅಂಕ), Group Discussion (10 ಅಂಕ), ಮತ್ತು Personal Interview (20 ಅಂಕ) ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತದೆ.
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು www.cochinshipyard.in ಅಥವಾ www.udupicsl.com ವೆಬ್‌ಸೈಟ್‌ಗಳಲ್ಲಿ ಲಭ್ಯವಿರುವ ಆನ್‌ಲೈನ್ ಅರ್ಜಿ ಪೋರ್ಟಲ್ ಮೂಲಕ 24 ಜುಲೈ 2025ರಿಂದ 14 ಆಗಸ್ಟ್ 2025ರೊಳಗೆ ಅರ್ಜಿ ಸಲ್ಲಿಸಬೇಕು.
Udupi,Karnataka
July 31, 2025 8:26 PM IST