ಈ ನೇಮಕಾತಿಗೆ ಯಾವುದೇ ಲಿಖಿತ ಪರೀಕ್ಷೆಯಿಲ್ಲ. ಕೇವಲ ಸಂದರ್ಶನದ ಆಧಾರದ ಮೇಲೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು. ಅರ್ಜಿ ಸಲ್ಲಿಸಲು ಯಾವುದೇ ಶುಲ್ಕವನ್ನು ಪಾವತಿಸುವ ಅಗತ್ಯವಿಲ್ಲ. ಇದು ವಿಶೇಷವಾಗಿ ಹೊಸತಾಗಿ ಪದವಿ ಪೂರ್ಣಗೊಳಿಸಿರುವ ಯುವಕರಿಗೆ ಒಂದು ಉತ್ತಮ ಅವಕಾಶ.
ಅರ್ಹ ಅಭ್ಯರ್ಥಿಗಳು ಯಾವುದೇ ವಿಭಾಗದಲ್ಲಿ ಕನಿಷ್ಠ 50% ಅಂಕಗಳೊಂದಿಗೆ ಪದವಿ ಪೂರ್ಣಗೊಳಿಸಿರಬೇಕು. ವಯಸ್ಸು ಆಗಸ್ಟ್ 31, 2025ಕ್ಕೆ 20 ರಿಂದ 30 ವರ್ಷಗಳ ನಡುವೆ ಇರಬೇಕು. ಮಾರಾಟ ಅಥವಾ ಮಾರ್ಕೆಟಿಂಗ್ ಕ್ಷೇತ್ರದಲ್ಲಿ ಅನುಭವ ಹೊಂದಿರುವವರಿಗೆ ವಿಶೇಷ ಆದ್ಯತೆ ನೀಡಲಾಗುತ್ತದೆ.
ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ ರೂ. 22,000 ಸ್ಟೈಫಂಡ್ ನೀಡಲಾಗುತ್ತದೆ. ಜೊತೆಗೆ ಕಾರ್ಯಕ್ಷಮತೆಯ ಆಧಾರದ ಮೇಲೆ ತಿಂಗಳಿಗೆ ರೂ. 2000 ವೇರಿಯಬಲ್ ಪೇ ಪಡೆಯುವ ಅವಕಾಶವಿದೆ. ಇದರಿಂದ ಒಟ್ಟಾರೆ ಅಭ್ಯರ್ಥಿಗಳಿಗೆ ಉತ್ತಮ ಆದಾಯ ದೊರೆಯುತ್ತದೆ.
ಆಸಕ್ತ ಅಭ್ಯರ್ಥಿಗಳು ಆನ್‌ಲೈನ್ ಅರ್ಜಿಯ ಜೊತೆಗೆ ಆಫ್‌ಲೈನ್ ಮೂಲಕವೂ ಅರ್ಜಿಯನ್ನು ಕಳುಹಿಸಬಹುದು. ಅದ್ರಂತೆ, ಅರ್ಜಿಯನ್ನು ಕೆಳಗಿನ ವಿಳಾಸಕ್ಕೆ ಕಳುಹಿಸಬೇಕಾಗಿದೆ:
- ಜನರಲ್ ಮ್ಯಾನೇಜರ್, ಮಾನವ ಸಂಪನ್ಮೂಲ ಇಲಾಖೆ,
ಕೆನರಾ ಬ್ಯಾಂಕ್ ಸೆಕ್ಯುರಿಟೀಸ್ ಲಿಮಿಟೆಡ್,
7ನೇ ಮಹಡಿ, ಮೇಕರ್ ಚೇಂಬರ್ III,
ನಾರಿಮನ್ ಪಾಯಿಂಟ್, ಮುಂಬೈ – 400021.
ಅಗತ್ಯ ದಾಖಲೆಗಳು: ಅರ್ಜಿಯೊಂದಿಗೆ ಅಭ್ಯರ್ಥಿಗಳು ಕೆಳಗಿನ ದಾಖಲೆಗಳನ್ನು ಲಗತ್ತಿಸಬೇಕು:
1. ಜನನ ಪ್ರಮಾಣಪತ್ರ ಅಥವಾ ಎಸ್‌ಎಸ್‌ಸಿ/ಎಸ್‌ಎಸ್‌ಎಲ್‌ಸಿ ಪ್ರಮಾಣಪತ್ರ
2. ನವೀಕರಿಸಿದ ಸ್ವವಿವರ (Resume)
3. ಶೈಕ್ಷಣಿಕ ಅರ್ಹತೆಗಳ ಪಟ್ಟಿ ಮತ್ತು ಪ್ರಮಾಣಪತ್ರಗಳ ಪ್ರತಿಗಳು
4. ಅನುಭವ ಪ್ರಮಾಣಪತ್ರ (ಅನುಭವ ಹೊಂದಿರುವವರು ಮಾತ್ರ)
ಈ ದಾಖಲೆಗಳ ಪರಿಶೀಲನೆಯ ನಂತರವೇ ಸಂದರ್ಶನ ಪ್ರಕ್ರಿಯೆ ನಡೆಯಲಿದೆ.
ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಪದವೀಧರರಿಗೆ ಉತ್ತಮ ಉದ್ಯೋಗ ಸಿಗುವುದು ಒಂದು ಸವಾಲು. ವಿಶೇಷವಾಗಿ ಮಾರಾಟ ಮತ್ತು ಮಾರ್ಕೆಟಿಂಗ್ ಕ್ಷೇತ್ರದಲ್ಲಿ ಬ್ಯಾಂಕ್ ಹುದ್ದೆಗಳು ಬಹಳಷ್ಟು ಅವಕಾಶಗಳನ್ನು ನೀಡುತ್ತವೆ. ಈ ತರಬೇತಿ ಹುದ್ದೆಗಳು ಭವಿಷ್ಯದಲ್ಲಿ ಬ್ಯಾಂಕಿಂಗ್ ವಲಯದಲ್ಲಿ ಶಾಶ್ವತ ಉದ್ಯೋಗ ಪಡೆಯಲು ಸಹಾಯಕವಾಗುತ್ತವೆ. ಜೊತೆಗೆ ಅಭ್ಯರ್ಥಿಗಳು ಉದ್ಯೋಗದಲ್ಲಿ ಪ್ರಾಯೋಗಿಕ ಜ್ಞಾನ ಮತ್ತು ಅನುಭವವನ್ನು ಗಳಿಸುವುದರಿಂದ ತಮ್ಮ ವೃತ್ತಿ ಜೀವನದಲ್ಲಿ ಮುಂದೆ ಬೆಳೆಯಲು ಸಹಾಯವಾಗುತ್ತದೆ.
ಕೆನರಾ ಬ್ಯಾಂಕ್ ಮಾರ್ಕೆಟಿಂಗ್ ತರಬೇತಿ ಹುದ್ದೆಗಳ ನೇಮಕಾತಿ 2025 ನಿರುದ್ಯೋಗಿಗಳಿಗೆ ಸುವರ್ಣಾವಕಾಶ. ಪದವಿ ಪೂರ್ಣಗೊಳಿಸಿರುವವರು ತಕ್ಷಣವೇ ಅರ್ಜಿ ಸಲ್ಲಿಸುವುದು ಉತ್ತಮ. ಸಂದರ್ಶನದ ಆಧಾರದ ಮೇಲೆ ಆಯ್ಕೆ ಮಾಡಲಾಗುವುದರಿಂದ ಈ ಅವಕಾಶವನ್ನು ಬಳಸಿಕೊಳ್ಳುವುದು ಅಗತ್ಯ.
Mumbai,Maharashtra
September 09, 2025 4:40 PM IST