ಸಂಶಯವೇ ಬೇಡ, ಈ ಕ್ಯೂಬ್ಸ್ ನಿಮ್ಮ ಚರ್ಮವನ್ನು ಹೊಳಪುಗೊಳಿಸುವ, ಊತವನ್ನು ಕಡಿಮೆ ಮಾಡುವ, ರಂಧ್ರಗಳನ್ನು ಬಿಗಿಗೊಳಿಸುವ ಮತ್ತು ಒಟ್ಟಾರೆ ಚರ್ಮದ ವಿನ್ಯಾಸವನ್ನು ಸುಧಾರಿಸುವ ಪ್ರಯೋಜನಗಳನ್ನು ನೀಡುತ್ತವೆ. ಅಕ್ಕಿ ನೀರಿನಲ್ಲಿರುವ ಜೀವಸತ್ವಗಳು, ಖನಿಜಗಳು ಮತ್ತು ಉತ್ಕರ್ಷಣ ನಿರೋಧಕಗಳು ನಿಮ್ಮ ತ್ವಚೆಯನ್ನು ಅಂದಗೊಳಿಸುತ್ತದೆ. ಜೊತೆಗೆ ಐಸ್ನ ತ್ವರಿತ ತಂಪಾಗಿಸುವ ಪರಿಣಾಮವು ನಮ್ಮ ಮುಖವನ್ನು ಬಿಸಿಲಿನಿಂದ ಮತ್ತು ಉರಿಯೂತದಿಂದ ತಣ್ಣಗಾಗಿಸುತ್ತದೆ.
ಮೊದಲು ಅಕ್ಕಿಯನ್ನು ಚೆನ್ನಾಗಿ ತೊಳೆದು, ನೀರು ಹಾಕಿ ಅದನ್ನು ಕುದಿಸಿಕೊಳ್ಳಿ. ಈ ಮಿಶ್ರಣವನ್ನು ಹಾಗೆಯೇ ಸ್ವಲ್ಪ ಹೊತ್ತು ನೀರಿನಲ್ಲಿಯೇ ಇಡಿ. ತಣ್ಣಗಾದ ನಂತರ ರೆಫ್ರಿಜರೇಟರ್ನಲ್ಲಿ ಐಸ್ ಕ್ಯೂಬ್ ಟ್ರೇಗೆ ಹಾಕಿ ಇಡಿ. ಇಷ್ಟಾದ್ರೆ ಮನೆಯಲ್ಲಿ ರೈಸ್ ವಾಟರ್ ಐಸ್ ಕ್ಯೂಬ್ ರೆಡಿ.
ಬೆಳಿಗ್ಗೆ ಎದ್ದ ಕೂಡಲೇ ನಿಮ್ಮ ಮುಖ ತೊಳೆದು ಒರೆಸಿಕೊಂಡ ನಂತರ, ಮಾಡಿಟ್ಟುಕೊಂಡ ಒಂದು ಐಸ್ ಕ್ಯೂಬ್ ತೆಗೆದುಕೊಂಡು ಅದನ್ನು ನಿಮ್ಮ ಮುಖದ ಮೇಲೆ ಮಸಾಜ್ ರೀತಿ ಮಾಡಿಕೊಳ್ಳಿ. ನಂತರ ಸ್ವಲ್ಪ ಹೊತ್ತು ಆ ನೀರನ್ನು ಮುಖದ ಮೇಲೆ ಇರಲು ಬಿಡಿ. ಪ್ರತಿದಿನ ಬೆಳಿಗ್ಗೆ ಮತ್ತು ರಾತ್ರಿ ಈ ಐಸ್ ಕ್ಯೂಬ್ಗಳನ್ನು ಬಳಸಬಹುದು. ಈ ಐಸ್ ಕ್ಯೂಬ್ ಅಕ್ಕಿ ನೀರಿನ ಎಲ್ಲಾ ಪ್ರಯೋಜನಗಳನ್ನು ನೀಡುವುದಲ್ಲದೆ, ನಿಮ್ಮ ಮುಖವನ್ನು ನೈಸರ್ಗಿಕವಾಗಿ ಹೊಳಪಿಸುತ್ತದೆ ಮತ್ತು ನಿಮಗೆ ಶಾಂತ ಸಂವೇದನೆಯನ್ನು ನೀಡುತ್ತದೆ.
ಈ ಮಿಶ್ರಣಕ್ಕೆ ನೀವು ಫ್ರೆಶ್ ಅಲೋವೆರಾ ಜೆಲ್ ಮತ್ತು 2 ಚಮಚ ರೋಸ್ ವಾಟರ್ ಸೇರಿಸಿಕೊಂಡು ನಂತರ ಫ್ರೀಜ್ ಮಾಡಬಹುದು. ಅಕ್ಕಿ ನೀರಿನ ತೇವಾಂಶ ಮತ್ತು ಹೊಳಪು, ಅಲೋವೆರಾ ಜೆಲ್ನ ಜಲಸಂಚಯನ ಮತ್ತು ರೋಸ್ ವಾಟರ್ನ ಶಾಂತಗೊಳಿಸುವ ಸಂವೇದನೆ ನಿಮ್ಮ ಮುಖಕ್ಕೆ ಇನ್ನಷ್ಟು ಪ್ರಯೋಜನವನ್ನು ಒದಗಿಸುತ್ತದೆ.
ಹೌದು, ಅಕ್ಕಿ ನೀರು ಮತ್ತು ಐಸ್ ಸಂಯೋಜನೆಯು ತೇವಾಂಶವನ್ನು ನೀಡುವ ಮೂಲಕ ಒಣ ಚರ್ಮವನ್ನು ಹೈಡ್ರೇಟ್ ಮಾಡುತ್ತದೆ. ಸಿಪ್ಪೆಸುಲಿಯುವ ಸಮಸ್ಯೆಯನ್ನು ಹೋಗಲಾಡಿಸುವುದರಿಂದ ಹಿಡಿದು, ನಿಮ್ಮ ಚರ್ಮವನ್ನು ಮೃದುಗೊಳಿಸುವವರೆಗೂ ಡ್ರೈ ಸ್ಕಿನ್ ಇರುವವರಿಗೆ ಇದು ಸೂಕ್ತವಾದ ಮನೆಮದ್ದಾಗಿದೆ. ಇದು ಹೆಚ್ಚುವರಿ ಎಣ್ಣೆಯನ್ನು ಕಡಿಮೆ ಮಾಡುತ್ತದೆ ಮತ್ತು ನಿಮ್ಮ pH ಮಟ್ಟವನ್ನು ಸಮತೋಲನಗೊಳಿಸುವ ಮೂಲಕ ಚರ್ಮದ ರಂಧ್ರಗಳನ್ನು ಬಿಗಿಗೊಳಿಸುತ್ತದೆ.
ಅಕ್ಕಿ ನೀರು ಮೊಡವೆ, ಸೂರ್ಯನ ಹಾನಿ, ಮೇಕಪ್, ಅನಾರೋಗ್ಯಕರ ಆಹಾರ ಮತ್ತು ಇತರ ಪರಿಸರ ಒತ್ತಡಗಳಿಂದ ಉಂಟಾಗುವ ಕಪ್ಪು ಕಲೆಗಳು ಮತ್ತು ವರ್ಣದ್ರವ್ಯವನ್ನು ನಿವಾರಿಸಲು ಸಹಾಯ ಮಾಡುತ್ತದೆ. ಇದು ಟ್ಯಾನಿಂಗ್ ಅನ್ನು ಸಹ ಮಸುಕಾಗಿಸುತ್ತದೆ. ಈ ಮೂಲಕ ನಿಮ್ಮ ಚರ್ಮವನ್ನು ಹೊಳೆಯುವಂತೆ ಮಾಡುತ್ತದೆ.
ನಿಮ್ಮ ಚರ್ಮಕ್ಕೆ ಆರೋಗ್ಯಕರ ಹೊಳಪನ್ನು ನೀಡುವುದರ ಜೊತೆಗೆ, ಅಕ್ಕಿ ನೀರು ರಂಧ್ರಗಳನ್ನು ಬಿಗಿಗೊಳಿಸಲು, ಉರಿಯೂತವನ್ನು ಕಡಿಮೆ ಮಾಡಲು ಮತ್ತು ಅದರ ನೈಸರ್ಗಿಕ ಉತ್ಕರ್ಷಣ ನಿರೋಧಕಗಳು ಮತ್ತು ಅಮೈನೋ ಆಮ್ಲಗಳಿಂದಾಗಿ ಕಿರಿಕಿರಿಯನ್ನು ಶಮನಗೊಳಿಸಲು ಸಹಾಯ ಮಾಡುತ್ತದೆ. ಇದು ಚರ್ಮದ ಸ್ಥಿತಿಸ್ಥಾಪಕತ್ವವನ್ನು ಸುಧಾರಿಸುತ್ತದೆ, ನಿಮ್ಮನ್ನು ಯಂಗ್ ಆಗಿಸುತ್ತದೆ. ಇದನ್ನು ನಿಯಮಿತವಾಗಿ ಬಳಸುತ್ತಾ ಹೋದರೆ, ಮುಖವು ಕಲೆ, ಜಿಡ್ಡಿನಿಂದ ಮುಕ್ತಿ ಪಡೆಯುತ್ತದೆ.
Disclaimer
ಇಲ್ಲಿ ಔಷಧಿ ಮತ್ತು ಚಿಕಿತ್ಸೆಯ ಕುರಿತಾಗಿ ನೀಡಿರುವ ಎಲ್ಲಾ ಮಾಹಿತಿ ತಜ್ಞರನ್ನು ಸಂಪರ್ಕಿಸಿದ ನಂತರವೇ ನೀಡಲಾಗಿದೆ. ಇದು ಕೇವಲ ಸಾಮಾನ್ಯ ಮಾಹಿತಿಯಾಗಿದ್ದು ವ್ಯಕ್ತಿಗತವಾದ ಸಲಹೆ ಅಲ್ಲ. ಆದ್ದರಿಂದ ಇವುಗಳನ್ನು ಬಳಸುವ ಮುನ್ನ ವೈದ್ಯರನ್ನು ಸಂಪರ್ಕಿಸಿ. ಲೋಕಲ್ 18 ಈ ಮಾಹಿತಿಯ ಬಳಕೆಯಿಂದ ಉಂಟಾದ ಯಾವುದೇ ಹಾನಿ/ನಷ್ಟಕ್ಕೆ ಜವಾಬ್ದಾರರಲ್ಲ.
September 09, 2025 11:29 PM IST